ಪುತ್ತೂರು: ನಮ್ಮೂರು ನಮ್ಮವರು ಮೈಂದಡ್ಕ 34 ನೆಕ್ಕಿಲಾಡಿ ಸಂಸ್ಥೆಯ ವತಿಯಿಂದ ಮೈಂದಡ್ಕ ಮೈದಾನದ ಬಳಿಯಲ್ಲಿ ನಿರ್ಮಿಸಿರುವ ತಾತ್ಕಾಲಿಕ ಅಂಗನವಾಡಿ ಕಟ್ಟಡದ ಉದ್ಘಾಟನೆ ಹಾಗೂ ಸಂಸ್ಥೆಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಪುರುಷೋತ್ತಮನಾಯ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬೆಳಿಗ್ಗೆ ನೂತನ ಕಟ್ಟಡದಲ್ಲಿ ಗಣಹೋಮ ನಡೆಯಿತು.
ಸಂಸ್ಥೆಯ ಗೌರವ ಸದಸ್ಯರಾದ ಕಟ್ಟಡ ನಿರ್ಮಾಣದ ಪ್ರಮುಖ ದಾನಿ ವಸಂತ ನಾಯ್ಕರವರು ಕಟ್ಟಡ ಉದ್ಘಾಟಿಸಿದರು. ಅಂಗನವಾಡಿ ಕಾರ್ಯಕರ್ತೆ ಬೇಬಿ ಅಂಗನವಾಡಿ ಮಕ್ಕಳನ್ನು ಆರತಿ ಬೆಳಗಿಸುವುದರ ಮೂಲಕ ಬರಮಾಡಿಕೊಂಡರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಕೋಶಾಧಿಕಾರಿ ರಾಜೇಶ್ವರಿ ಮಕ್ಕಳ ಶಿಕ್ಷಣ ಹಕ್ಕು ಮತ್ತು ಮೊಬೈಲ್ ಫೋನ್ ಬಳಕೆಯ
ಬಗ್ಗೆ ಮಾಹಿತಿ ನೀಡಿದರು. ನಂತರ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ದರ್ಬೆ, ಗ್ರಾ.ಪಂ. ನಿಕಟ ಪೂರ್ವಾಧ್ಯಕ್ಷರಾದ ಹಾಲಿ ಸದಸ್ಯ ಪ್ರಶಾಂತ್ ಶಿವಾಜಿನಗರ, ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷರಾದ ಹಾಲಿ ಸದಸ್ಯೆ ಸ್ವಪ್ನ ಜೀವನ್, ಸದಸ್ಯ ವಿಜಯಕುಮಾರ್ ನೆಕ್ಕಿಲಾಡಿ, ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಮುಖಾರಿ, ರಾಮಚಂದ್ರ ನಾಯ್ಕ ಚೀಮುಳ್ಳು ಮತ್ತು ಸಂಸ್ಥೆಯ ಉಪಾಧ್ಯಕ್ಷ ಹೊನ್ನಪ್ಪ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರವೀಣ್ ವರದಿ ವಾಚಿಸಿದರು. ಕೋಶಾಧಿಕಾರಿ ಬೇಬಿ ಲೆಕ್ಕಪತ್ರ ಮಂಡಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಕೋಶಾಧಿಕಾರಿ ರಾಜೇಶ್ವರಿ, ನೂತನ ಕಟ್ಟಡದ ಪ್ರಮುಖ ದಾನಿಗಳಾದ ವಸಂತ ನಾಯ್ಕ ಹಾಗೂ ಜಾನಕಿ ನಿಗರ್ಗುಂಡಿ, ಕಟ್ಟಡ ಕಾಮಗಾರಿ ನಡೆಸಿದ ಸಂತೋಷ್ ದರ್ಬೆ, ನಾರಾಯಣ ನಾಯ್ಕ ಬೀತಲಪ್ಪು, ಅಭಿಲಾಶ್, ತ್ರಿವಿಕ್ರಮ್, ನರಸಿಂಹ ನಾಯಕ್ ಮತ್ತು ಸಂಸ್ಥೆಯ ನಿಕಟ ಪೂರ್ವಾಧ್ಯಕ್ಷ ಗಣೇಶ್ ನಾಯಕ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಗೀತಾ ತಾಳೆಹಿತ್ಲು , ಗೀತಾ ಆದರ್ಶನಗರ, ಪ್ರದೀಪ್ ಮತ್ತು ಬಾಲಕೃಷ್ಣ ತಾಳೆಹಿತ್ಲು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಮಹಾಸಭೆಯಲ್ಲಿ ನಮ್ಮೂರು ನಮ್ಮವರು ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪುರುಷೋತ್ತಮ ನಾಯ್ಕ ಕುದ್ಕೋಳಿ ಅಧ್ಯಕ್ಷರಾಗಿ, ಪ್ರವೀಣ್ ದರ್ಬೆ ಕಾರ್ಯದರ್ಶಿಯಾಗಿ , ಹೊನ್ನಪ್ಪ ನಾಯ್ಕ ದರ್ಬೆ ಉಪಾಧ್ಯಕ್ಷರಾಗಿ ಪುನರಾಯ್ಕೆಯಾದರು.
ಮೆಲ್ಕಾಂ ಸಂದೇಶ್ ಕೋಶಾಧಿಕಾರಿಯಾಗಿ, ಬಾಲಕೃಷ್ಣ ತಾಳೆಹಿತ್ಲು ಮತ್ತು ಗಣೇಶ್ ನಾಯಕ್ ಸಂಚಾಲಕರಾಗಿ, ಪ್ರದೀಪ್ ತಾಳೆಹಿತ್ಲು ಮತ್ತು ಸತೀಶ್ ದರ್ಬೆ ಮುಖ್ಯ ಸಲಹೆಗಾರರಾಗಿ ಆಯ್ಕೆಯಾದರು. ಯು.ಜಿ .ರಾಧ ಶಾಂತಿನಗರ, ಸಂತೋಷ್ ಕುಮಾರ್ ಶಾಂತಿನಗರ, ವಸಂತ ನಾಯ್ಕ ಕುದ್ಕೋಳಿ ಮತ್ತು ಪ್ರಶಾಂತ್ ಶಿವಾಜಿನಗರರವರನ್ನು ಗೌರವ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.