ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯಿಂದ ಮೆಗಾ ಎಕ್ಸ್‌ಚೇಂಜ್, ಲೋನ್ ಮೇಳ ಉದ್ಘಾಟನೆ

0

ಪುತ್ತೂರು: ಮಾರುತಿ ಸುಜುಕಿ ವಾಹನಗಳ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ‍್ಸ್‌ನ ಉಪ್ಪಿನಂಗಡಿ ಶಾಖೆಯ ವತಿಯಿಂದ ಮೆಗಾ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ, ವರುಷದ ಕೊಡುಗೆಗಳು ಪುರುಷರಕಟ್ಟೆ ಜಂಕ್ಷನ್ ಮತ್ತು ದರ್ಬೆ ಗೂಡ್ಸ್ ವಾಹನ ಚಾಲಕ ಮಾಲಕರ ಸಂಘದ ವಠಾರದಲ್ಲಿ ಡಿ.15 ರಂದು ಉದ್ಘಾಟನೆಗೊಂಡಿತು. ಡಿ.16ರಂದು ಮೇಳ ಕೊನೆಗೊಳ್ಳಲಿದೆ. ನರಿಮೊಗರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ವೇದನಾಥ ಸುವರ್ಣ ಉದ್ಘಾಟನೆ ನೆರವೇರಿಸಿದರು. ಪ್ರಗತಿಪರ ಕೃಷಿಕರಾದ ವೆಲೆರಿಯನ್ ಡಿ’ಸೋಜ, ರಾಜೀವ್ ಸುವರ್ಣ, ಮಂಗಳೂರು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಬಂಧಕರ ರಾಜೇಂದ್ರ ಸುವರ್ಣ, ಪುತ್ತೂರು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಬಂದಕ (ಮಾರಾಟ ವಿಭಾಗ) ರಂಜನ್ ಕುಮಾರ್, ಉದಯಭಾಗ್ಯ ಹೋಳಿಗೆ ಮನೆಯ ಗಣೇಶ್ ಪ್ರಭು, ಕಾಂಟ್ರಾಕ್ಟರ್ ದಿನೇಶ್ ದೋಲ, ನರಿಮೊಗರು ಗ್ರಾ.ಪಂ ಸದಸ್ಯ ಪುರಂದರ ಬಂಗೇರ ಉಪಸ್ಥಿತರಿದ್ದರು. ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್ ಶ್ರೀಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು. ಹರಿಕಿರಣ್ ರೈ ಎನ್ ಸ್ವಾಗತಿಸಿ, ನವೀನ್ ಕುಮಾರ್ ವಂದಿಸಿದರು. ಇಬ್ರಾಹಿಂ ನಬೀಲ್, ಯಜ್ಞೇಶ್ ಪಿ ಹೆಗ್ಡೆ, ನವೀನ್, ಮೋಹಿತ್, ಧನುಷ್ ಉಪಸ್ಥಿತರಿದ್ದರು..ಸುಲಭ ದಾಖಲೆಯೊಂದಿಗೆ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ಮಾರುತಿ ಸುಝುಕಿ ಸಾಲ ಸೌಲಭ್ಯ ದೊರೆಯಲಿದೆ.


ವಿಶೇಷ ರಿಯಾಯಿತಿ:
ಕೃಷಿಕರಿಗೆ, ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ, ಸರಕಾರಿ ನೌಕರರಿಗೆ ವಿಶೇಷ ರಿಯಾಯಿತಿ ಸೌಲಭ್ಯವಿದೆ.

ಹೊಸ ಕಾರು ಖರೀದಿಯಲ್ಲಿ ಹಣ ಉಳಿತಾಯ:
ಹೊಸ ಕಾರುಗಳ ಖರೀದಿಗೆ ವಿಶೇಷ ಹಣ ಉಳಿತಾಯದ ಅವಕಾಶವನ್ನು ನೀಡುತ್ತಿದೆ. ವ್ಯಾಗನರ್‌ಗೆ ರೂ.62,000, ಆಲ್ಟೋ ಕೆ10ಗೆ ರೂ.72,000, ಸೆಲೆರಿಯೋ ಕಾರಿಗೆ ರೂ.72,000, ಎಸ್. ಪ್ರೆಸ್ಸೋಗೆ ರೂ.72,000, ಸ್ವಿಫ್ಟ್ಗೆ ರೂ. 52,000ದಷ್ಟು ಉಳಿತಾಯ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಮನೋಹರ್ ಎಂ. 6366389644, ಯಜ್ಞೇಶ್ ಹೆಗ್ಡೆ 8296706798, ಹರಿಕಿರಣ್ ರೈ ಎಸ್.7259014047, ಇಬ್ರಾಹಿಂ ನಬೀಲ್ 7022126707, ಸುಮಿತ್ ಎನ್. 7259014043, ರಾಜೇಶ್ ಎನ್ ಎಸ್ 9606438022 ಇವರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here