ಕಣ್ಣಿಗೆ ಕಾಣದ ಅಪರಾಧಗಳ ಜಾಗೃತಿ ಅಗತ್ಯ – ವಿಶ್ವಾಸ್ ಶೆಣೈ
ಅಪರಾಧವಾದಾಗ ಪೊಲೀಸರಿಗೆ ಸಹಕರಿಸಿ – ಲಾರೆನ್ಸ್ ಗೋನ್ಸಾಲ್ವಿಸ್
ಪುತ್ತೂರು: ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಮಾಡುತ್ತಿರುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಪೊಲೀಸ್ ಮತ್ತು ರೋಟರಿ ಕ್ಲಬ್ ಸಮೂಹ ಸಂಸ್ಥೆ, ಜೆಸಿಐ, ಲಯನ್ಸ್ ಕ್ಲಬ್ಗಳ ಸಹಯೋಗದೊಂದಿಗೆ ಪುತ್ತೂರು ನಗರ ಪೊಲೀಸ್ ಠಾಣೆ ವತಿಯಿಂದ ಅಪರಾಧ ಮಾಸಾಚರಣೆ ಅಂಗವಾಗಿ ಡಿ.16 ರಂದು ಪುತ್ತೂರಿನಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಬೊಳುವಾರಿನಿಂದ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ತನಕ ಜಾಗೃತಿ ಜಾಥಾ ನಡೆಯಿತು.
ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ :
ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರು ಅಪರಾಧ ತಡೆ ಮಾಸಾಚರಣೆಯ ಜಾಗೃತಿ ಜಾಥಾವನ್ನು ಚೆಂಡೆ ಬಡಿಯವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಶಾಂತಿಯನ್ನು ಕಾಪಾಡುವಂತಹ ಕೆಲಸ ಪೊಲೀಸ್ ಇಲಾಖೆ ಮಾಡುತ್ತೇವೆ. ಆದರೆ ಯಾವಾಗಲು ಅಪರಾಧವನ್ನು ಪರಿಣಾಮಕಾರಿಯಾಗಿ ತಡೆಯಲು ಅಥವಾ ಅದನ್ನು ಪತ್ತೆ ಹಚ್ಚುವಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ. ಹಾಗಾಗಿ ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಕಣ್ಣಿಗೆ ಕಾಣದ ಅಪರಾಧಗಳ ಜಾಗೃತಿ ಅಗತ್ಯ:
ರೋಟರಿ ಜಲ್ಲೆಂ 3181 ಇದರ ಪಬ್ಲಿಕ್ ಇಮೇಜ್ ಅಧ್ಯಕ್ಷ ವಿಶ್ವಾಸ್ ಶೆಣೈ ಅವರು ಮಾತನಾಡಿ, ಪುತ್ತೂರಿನಲ್ಲಿ ಅಪರಾಧ ತಡೆಯುವಲ್ಲಿ ತಕ್ಕಮಟ್ಟಿಗೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಈ ನಡುವೆ ಕಣ್ಣಿಗೆ ಕಾಣದ ಕೆಲವು ಅಪರಾಧಗಳಿವೆ. ಅದನ್ನು ಜಾಥಾದ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹಿಂದೆ ದರೋಡೆಕೋರ ಚಂದ್ರನ್ ದಿನದಲ್ಲಿ ಪೊಲೀಸ್ ಇಲಾಖೆ ಜೊತೆ ಸೇರಿ ಬೀಟ್ ಹೋಗುವ ಕಾರ್ಯಕ್ರಮ ಮಾಡುತ್ತಿದ್ದ ನೆನಪಿದೆ. ಇವತ್ತು ಪೊಲೀಸರ ಜೊತೆ ಅಪರಾಧ ತಡೆಗೆ ಜಾಗೃತಿ ಜಾಥಾ ಕೈಗೊಂಡಿದ್ದೇವೆ ಎಂದರು.
ಅಪರಾಧವಾದಾಗ ಪೊಲೀಸರಿಗೆ ಸಹಕರಿಸಿ:
ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಲ್ವಿಸ್ ಅವರು ಮಾತನಾಡಿ, ಇವತ್ತು ಅಪರಾಧ ನಿಲ್ಲಿಸಲು ಆಗುತ್ತಾ ಎಂಬ ಪ್ರಶ್ನೆಯಲ್ಲ. ಅದನ್ನು ತಡೆಯುವ ಪ್ರಕ್ರಿಯೆ ಮಾಡಬಹುದು. ಅದರ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಎಲ್ಲಿಯಾದರೂ ಅಪರಾಧ ಆದರೆ ನಾವು ಕಣ್ಣುಮುಚ್ಚಿ ಕೂತುಕೊಳ್ಳುವುದು ಬೇಡ. ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ವಿನಂತಿಸಿದರು. ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ಲಯನ್ಸ್ ಜಿಲ್ಲಾ ಜೊತೆ ಕೋಶಾಧಿಕಾರಿ ಟಿ.ಸದಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಆಂಜನೇಯ ರೆಡ್ಡಿ, ಸಂಚಾರ ಪೊಲೀಸ್ ಠಾಣೆ ಎಸ್.ಐ ಉದಯ ರವಿ, ನಗರ ಪೊಲೀಸ್ ಠಾಣೆ ಎಸ್.ಐ ಸೇಸಮ್ಮ, ಎ.ಎಸ್.ಐಗಳಾದ ಶ್ರೀಧರ್ ಮಣಿಯಾಣಿ, ಚಕ್ರಪಾಣಿ, ವರ್ಗಿಸ್, ಚಿದಾನಂದ ರೈ, ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ, ರೋಟರಿ ಕ್ಲಬ್ ಈಸ್ಟ್ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಗ್ರೇಸಿ ಗೋನ್ಸಾಲ್ವಿಸ್, ರೋಟರಿ ಕ್ಲಬ್ ಯುವ ಅಧ್ಯಕ್ಷ ಪಶುಪತಿ ಶರ್ಮ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ ರೈ, ರೋಟರಿ ಕ್ಲಬ್ ಪುತ್ತೂರು ಇಲೈಟ್ ಅಧ್ಯಕ್ಷ ರಜಾಕ್ ಕಬಕಕಾರ್ಸ್, ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ, ಲಯನ್ಸ್ ಕ್ಲಬ್ನ ಟಿ ಸದಾಶಿವ ನಾಕ್, ರೋಟರಿ ಯುವ ಕಾರ್ಯದರ್ಶಿ ದೀಪಕ್, ಎ.ಜೆ.ರೈ, ಮೌನೇಶ್ ವಿಶ್ವಕರ್ಮ, ಪ್ರೇಮಾನಂದ, ಸತ್ಯಶಂಕರ್ ಭಟ್, ಜಾನ್ ಕುಟ್ಹೀನಾ, ದಯಾನಂದ ಕೆ.ಎಸ್, ವೆಂಕಟ್ರಮಣ ಕಳುವಾಜೆ ಸಹಿತ, ಪೊಲೀಸ್ ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡರು. ಪೊಲೀಸ್ ಇಲಾಖೆಯಲ್ಲಿ ಕಾರ್ಯಕ್ರಮ ಸಂಘಟನೆಗಾಗಿ ಹೆಡ್ಕಾನ್ಸ್ಟೇಬಲ್ ಜಗದೀಶ್ ಅವರನ್ನು ರೋಟರಿ ಸಂಸ್ಥೆಯಿಂದ ಗೌರವಿಸಲಾಯಿತು.