ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪುತ್ತೂರು ತಾಲೂಕು ಭಜನಾ ಪರಿಷತ್‌ಗೆ ಆಯ್ಕೆ

0

ಅಧ್ಯಕ್ಷ: ಲೋಕೇಶ್ ಬೆತ್ತೋಡಿ, ಕಾರ್ಯದರ್ಶಿ: ಗೋಪಾಲಕೃಷ್ಣ ಪಾಟಾಳಿ

ಪುತ್ತೂರು: ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಪುತ್ತೂರು ತಾಲೂಕು ಭಜನಾ ಪರಿಷತ್ ಸಭೆಯನ್ನು ತಾಲೂಕಿನ ಯೋಜನಾ ಕಛೇರಿ ಸಭಾಂಗಣದಲ್ಲಿ ಭಜನಾ ಪರಿಷತ್ ಅಧ್ಯಕ್ಷ ಸುಬ್ಬಯ್ಯರವರ ನೇತೃತ್ವದಲ್ಲಿ ನಡೆಸಲಾಯಿತು. ಪುತ್ತೂರು ತಾಲೂಕಿನಲ್ಲಿ 6 ವಷ೯ಗಳಿಂದ ಭಜನಾ ಪರಿಷತ್‌ ಪದಾಧಿಕಾರಿಗಳ ಬದಲಾವಣೆಯಾಗದೇ ಇದ್ದು ಕೇಂದ್ರ ಕಛೇರಿ ಸೂಚನೆಯಂತೆ ಹೊಸ ಪದಾಧಿಕಾರಿಗಳನ್ನು ಸಮಿತಿಗೆ ಆಯ್ಕೆಮಾಡುವುದಾಗಿ ಚಚಿ೯ಸಲಾಯಿತು.

ಶ್ರಿ.ಕ್ಷೇ.ಧ.ಗ್ರಾ. ಯೋಜನೆ ಕೇಂದ್ರ ಕಛೇರಿ ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್ ರವರು ಭಜನಾಪರಿಷತ್ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ನೂತನ ವಲಯ ಸಂಯೋಜಕರಾಗಿ ಆಯ್ಕೆಯಾದ ಸಂಯೋಜಕರ ಜವಾಬ್ದಾರಿಗಳ ಬಗ್ಗೆ ಹಾಗೂ ಭಜನಾ ಮಂಡಳಿಗಳ ಅಭಿವೃದ್ದಿಗೆ ನೀಡಬೇಕಾದ ಸಹಕಾರಗಳ ಬಗ್ಗೆ ಹಾಗೂ ವಿಶೇಷ ಕಾಯ೯ಕ್ರಮಗಳ ಆಯೋಜನೆಗೆ ಸಹಕಾರ ಮಾಗ೯ದಶ೯ನ ನೀಡುವ ಬಗ್ಗೆ ಮಾಹಿತಿ ನೀಡಿದರು.


ಭಜನಾ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಲೋಕೇಶ್ ಬೆತ್ತೋಡಿರವರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ದಿನೇಶ್ ಸಾಲಿಯಾತ್, 2ನೇ ಉಪಾಧ್ಯಕ್ಷ ಗಂಗಾಧರ್ ರೈರವರು, ಕಾಯ೯ದಶಿ೯ಯಾಗಿ ಗೋಪಾಲಕೃಷ್ಣ ಪಾಟಾಳಿರವರನ್ನು, ಜೊತೆಕಾಯ೯ದಶಿ೯ಯಾಗಿ ಸುಜಯರವರನ್ನು ಹಾಗೂ ಕೋಶಾಧಿಕಾರಿಯಾಗಿ ಸುಧಾಕರ್ ಕುಲಾಲ್‌ರವರನ್ನು ಆಯ್ಕೆಮಾಡಲಾಯಿತು . ಈ ಸಂದಭ೯ದಲ್ಲಿ ತಾಲೂಕು ಯೋಜನಾಧಿಕಾರಿ ಶಶಿಧರ್ ಎಮ್, ನೂತನ ವಲಯದ ಸಂಯೋಜಕರು ಹಾಗೂ ಮೇಲ್ವಿಚಾಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here