ಮುರಳಿಕೃಷ್ಣ ಹಸಂತಡ್ಕ ಸಹಿತ ಹಲವು ಮಂದಿ ಮಾಲಧಾರಣೆ
ಪುತ್ತೂರು: ದತ್ತ ಜಯಂತಿ 2023ರ ಸಲುವಾಗಿ ಮಂಗಳೂರು ವಿಭಾಗದ ದತ್ತ ಮಾಲಧಾರಣೆಯು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಭಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್, ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರುಳಿಕೃಷ್ಣ ಹಸಂತಡ್ಕ, ಭಜರಂಗದಳ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ, ಭಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್, ಸಹ ಸಂಯೋಜಕ ಲತೀಶ್ ಗುಂಡ್ಯ, ಜಿಲ್ಲಾ ಗೋರಕ್ಷಾ ಪ್ರಮುಖ್ ಮಹೇಶ್ ಬಜತ್ತೂರು, ಪುತ್ತೂರು ನಗರ ಸಂಯೋಜಕ ಜಯಂತ್ ಕುಂಜೂರುಪಂಜ, ಜಿತೇಶ್ ಬಲ್ನಾಡ್, ಪ್ರವೀಣ್ ಕಲ್ಲೇಗ, ಕೇಶವ ಪ್ರಸಾದ್, ಜೀವನ್ ಬಲ್ನಾಡ್ ಮತ್ತು ನೂರಾರು ಕಾರ್ಯಕರ್ತರು ಮಾಲಧಾರಣೆ ಮಾಡಿದರು.
ದತ್ತ ಜಯಂತಿಯು ಡಿ. 17ರಿಂದ ಪ್ರಾರಂಭಗೊಂಡು ಡಿಸೆಂಬರ್ 26ರ ದತ್ತ ಜಯಂತಿಯವರೆಗೆ ನಡೆಯಲಿದೆ. ಡಿ. 26ರಂದು ಸಾವಿರಾರು ದತ್ತ ಭಕ್ತರು, ಬಜರಂಗದಳದ ಕಾರ್ಯಕರ್ತರು ದತ್ತ ಪಾದುಕೆ ದರ್ಶನ ಮಾಡಲಿದ್ದಾರೆ ಎಂದು ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರುಳಿಕೃಷ್ಣ ಹಸಂತಡ್ಕ ಅವರು ತಿಳಿಸಿದ್ದಾರೆ.