ಬುರ್ದಾ ಮಜ್ಲೀಸ್ ದಶಮಾನೋತ್ಸವದ ಪೋಸ್ಟರ್ ಬಿಡುಗಡೆ

0

ಇಡ್ಕಿದು : ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸ್ಸೊಸಿಯೆಷನ್ ಕೋಲ್ಪೆ ಇದರ ವತಿಯಿಂದ ಜನವರಿ 6 ರಂದು ನಡೆಯುವ ದಶವಾರ್ಷಿಕ ಬ್ರಹತ್ ಬುರ್ದಾ ಮಜ್ಲೀಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜುಮಾ ಮಸೀದಿ ಪದಾಧಿಕಾರಿಗಳು, ಜಮಹತ್ ಖತೀಬ್ , ಸದರ್ ಉಸ್ತಾದ್, ಮುಹಝಿನ್ ಉಸ್ತಾದ್ ಯಂಗ್ಮೆನ್ಸ್ ಪದಾಧಿಕಾರಿಗಳು ಬುರ್ದಾ ಸಮೀತಿ ಪದಾಧಿಕಾರಿಗಳು ಸೇರಿದಂತೆ ಜಮಹತ್ ಸದಸ್ಯರು ಉಪಸ್ಥಿತರಿದ್ದರು.

ದಶವಾರ್ಷಿಕ ಬ್ರಹತ್ ಬುರ್ದಾ ಮಜ್ಲೀಸ್ ಕಾರ್ಯಕ್ರಮದಲ್ಲಿ ಕೆ.ಎಸ್. ಮುಖ್ತಾರ್ ತಂಙಳ್ ಕುಂಬೋಲ್ದು ಆ ನೇತೃತ್ವ ನೀಡಲಿದ್ದಾರೆ.ಬುರ್ದಾ ನೇತೃತ್ವವನ್ನು ಕೇರಳದ ಪ್ರಖ್ಯಾತ ತಂಡವಾದ ಇಮಾಮ್ ಬೂಸೂರಿ ಬುರ್ದಾ ಫೌಂಡೇಶನ್ ಕೇರಳ ಅಬ್ದುಸ್ಸಮದ್ ಅಮಾನಿ ಪಟ್ಟುವಂ, ಇಶಲ್ ವಿರುನ್ಸ್ : ಸಯ್ಯಿದ್ ಮುಲ್ಲಕೋಯ ತಂಙಳ್ ,ಇಬ್ರಾಹಿಂ ಅಮಾನಿ ಚುಝಲಿ ,ಅನಸ್ ಅಮಾನಿ ,ಸಪ್ಟಾನ್‌ ನರಿಕೋಡ್, ನೂರುಲ್ ಅಮೀನ್ ನರಿಕ್ಕೋಡ್. ಮತ್ತು ಜನ ಮಾನಸದಲ್ಲಿ ಸಂಚಲನ ಸೃಷ್ಟಿಸಿದ “ನೂರ್ ಆಗಾಯ ” ಖ್ಯಾತಿಯ ಅಝರುದ್ದೀನ್ ರಬ್ಬಾನಿ ಕಲ್ಲೂರು. ನಅತೇ ಶರೀಫ್ ಆಡಲಿದ್ದಾರೆ ಎಂದು ಬುರ್ದಾ ಸಮೀತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

LEAVE A REPLY

Please enter your comment!
Please enter your name here