ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ 2024ನೇ ಸಾಲಿನ ಅಧ್ಯಕ್ಷೆಯಾಗಿ ಅಧ್ಯಕ್ಷೆಯಾಗಿ ಲವೀನಾ ಪಿಂಟೋ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಸುರೇಶ್, ಮಹಿಳಾ ಜೇಸಿ ಸಂಯೋಜಕರಾಗಿ ಅನಿ ಮಿನೇಜಸ್ ಹಾಗೂ ಜೇಜೆಸಿಯ ಚೇರ್‌ಪರ್ಸನ್ ಆಗಿ ದೀಪಕ್ ಎಂ.ಕೆ. ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಗೆ ಐಪಿಪಿ ಆಗಿ ಶೇಖರ ಗೌಂಡತ್ತಿಗೆ, ವಿಪಿಗಳಾಗಿ ಡಾ. ಆಶೀತ್ ಎಂ.ವಿ., ಡಾ. ನಿರಂಜನ್ ರೈ, ಅವಿನಾಶ್, ಕುಶಾಲಪ್ಪ, ನಟೇಶ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಸುಮನ್, ಖಜಾಂಚಿಯಾಗಿ ಪುನೀತ್ ಎಂ., ಜೆಜೆಸಿ ಸಂಯೋಜಕರಾಗಿ ದಿವಾಕರ ಬಿ., ಈವೆಂಟ್ ರಾಯಭಾರಿಯಾಗಿ ಪುರುಷೋತ್ತಮ ಪಿ., ಸಾಂಸ್ಕೃತಿಕ ಸಂಯೋಜಕರಾಗಿ ಮಹೇಶ್ ಕೆ., ಮಾಧ್ಯಮ ವಿಭಾಗಕ್ಕೆ ತುಷಾರ್, ಕಾರ್ಯಕ್ರಮ ಸಂಯೋಜಕರಾಗಿ ಮುರಳೀಧರ ಎ.ಎಸ್., ವ್ಯವಹಾರ ಸಂಯೋಜಕರಾಗಿ ವಿಜಯ ಕೆ., ನಿರ್ದೇಶಕರಾಗಿ ಗುಣಕರ ಅಗ್ನಾಡಿ, ಚಂದ್ರಶೇಖರ ಶೆಟ್ಟಿ, ಪದ್ಮಪ್ಪ ಪೂಜಾರಿ, ವೀಣಾ ಪ್ರಸಾದ್ ಕಜೆ, ಪ್ರದೀಪ್ ಆಚಾರ್ಯರನ್ನು ಆಯ್ಕೆ ಮಾಡಲಾಗಿದೆ. ಸಲಹಾ ಸಮಿತಿಗೆ ಡಾ. ರಾಜಾರಾಮ್ ಕೆ.ಬಿ., ರವೀಂದ್ರ ದರ್ಬೆ, ಪ್ರಶಾಂತ್ ಕುಮಾರ್ ಬಾರ್ಯ, ಚೇತನ್ ಆನೆಗುಂಡಿ, ಪುರುಷೋತ್ತಮ ಎಂ., ಪ್ರಶಾಂತ್ ಕುಮಾರ್ ರೈ, ಆನಂದ ರಾಮಕುಂಜ, ಯತೀಶ್ ಪುತ್ಯ, ಜಯಾನಂದ ಕಲ್ಲಾಪು, ಕೇಶವ ರಂಗಾಜೆ, ಮೋನಪ್ಪ ಗೌಡ ಪಿ., ಕೆ. ವಿಶ್ವನಾಥ ಕುಲಾಲ್, ಡಾ. ಗೋವಿಂದ ಪ್ರಸಾದ್ ಕಜೆ, ವಿಜಯಕುಮಾರ್ ಕಲ್ಲಳಿಕೆ, ವಸಂತ ಹೆಗ್ಡೆ, ಪುಷ್ಪರಾಜ್ ಶೆಟ್ಟಿ, ಪ್ರವೀಣ್ ರೈ, ಜಯವಿಕ್ರಮ್ ಕಲ್ಲಾಪು, ನೀರಜ್ ಕುಮಾರ್ ರೈ, ಹರೀಶ್ ನಟ್ಟಿಬೈಲ್, ಜಯಪ್ರಕಾಶ್ ಶೆಟ್ಟಿ, ಉಮೇಶ್ ಆಚಾರ್ಯ, ಶಶಿಧರ ನೆಕ್ಕಿಲಾಡಿ, ಮೋಹನಚಂದ್ರ ಎಂ.ಪಿ. ಅವರನ್ನು ನೇಮಕ ಮಾಡಲಾಗಿದೆ.
ನೂತನ ಘಟಕದ ಪದಗ್ರಹಣ ಸಮಾರಂಭವು ಡಿ.22ರಂದು ಉಪ್ಪಿನಂಗಡಿಯ ರೋಟರಿ ಭವನದಲ್ಲಿ ಸಂಜೆ ೭ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ರೆ.ಫಾ. ಅಬೆಲ್ ಲೋಬೋ, ಜೇಸಿಐನ ಮಾಜಿ ರಾಷ್ಟ್ರೀಯ ನಿರ್ದೇಶಕ ಸಂಪತ್ ಬಿ. ಸುವರ್ಣ, ವಲಯ 15ರ 2014ರ ಉಪಾಧ್ಯಕ್ಷ ಶಂಕರ್ ರಾವ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.