ಕಿಲ್ಲೆ ಮೈದಾನದಲ್ಲಿ 6 ದಿನಗಳ ಕ್ರಿಕೆಟ್ ರಸದೌತಣ |ಅಹರ್ನಿಶಿ ಪಂದ್ಯ
ಪುತ್ತೂರು: ಜಾತಿ-ಜಾತಿ ಮಧ್ಯೆ ಸೌಹಾರ್ದತೆಯ ಸಾಮರಸ್ಯ ಮೂಡಿಸುವ ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ-2023 ಡಿ.19 ರಿಂದ 24ರ ತನಕ ಆರು ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ಜರಗಲಿದ್ದು, ಈ ಕ್ರೀಡಾಕೂಟದ ಉದ್ಘಾಟನೆಯು ಡಿ.19 ರಂದು ಸಂಜೆ ನೆರವೇರಿತು.ಕ್ರೀಡಾಕೂಟವು ಕ್ರಿಕೆಟ್ ಪ್ರಿಯರಿಗೆ ರಸದೌತಣವನ್ನು ಒದಗಿಸಲಿದೆ.
ಸಿಟಿ ಫ್ರೆಂಡ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಟೆನ್ ಗೈಯ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಬುದಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸೌದಿ ಅರೇಬಿಯಾ, ತುಳುನಾಡು ಫ್ರೆಂಡ್ಸ್ ಸೌದಿ ಅರೇಬಿಯಾ ಇವುಗಳ ಜಂಟಿ ಆಶ್ರಯದಲ್ಲಿ ಜರಗಲಿರುವ 11 ಜನರ ಅಂಡರ್ ಆರ್ಮ್ ಈ ಕ್ರಿಕೆಟ್ ಪಂದ್ಯಾಟಕ್ಕೆ ಪ್ರಸ್ತುತ 13ನೇ ವರ್ಷವಾಗಿದ್ದು ಪುತ್ತೂರು ಎಸ್.ಐ ಆಂಜನೇಯ ರೆಡ್ಡಿರವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಆರು ದಿನಗಳ ಅಮರ್ ಅಕ್ಬರ್ ಅಂತೋಣಿ ಕ್ರಿಕೆಟ್ ಪಂದ್ಯಾಟವು ಯಶಸ್ವಿಯಾಗಲೆಂದು ಹೇಳಿ ಶುಭ ಹಾರೈಸಿದರು.
ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಧನ್ವಂತರಿ ಕ್ಲಿನಿಕ್ ಮುಖ್ಯಸ್ಥ ಚೇತನ್ ಕಜೆ, ಬಾಂಧವ್ಯ ಟ್ರೋಫಿಯ ಸಂಯೋಜಕರಾದ ಸ್ಕರಿಯ ಹಾಗೂ ಫಾರೂಕ್, ಭರತ್ ಪ್ರಿಂಟರ್ಸ್ ನ ಭರತ್ ಕುಮಾರ್, ಪಿಪಿಎಲ್ ಆಯೋಜಕರಾದ ಭಾನುಪ್ರಕಾಶ್, ಸಾದಿಕ್ ಬಪ್ಪಳಿಗೆ, ಇಸ್ಮಾಯಿಲ್ ಎಂ.ಬಿ ಬಲ್ನಾಡು, ಜನತಾ ಸ್ಕೇಲ್ ಬಜಾರ್ ಆಸಿಕ್, ಶಾಫಿ ಮುಹಾದ್, ಅಬ್ಬಾಸ್ ಮದರ್ ಇಂಡಿಯ, ಇಬ್ರಾಹಿಂ ಇಬ್ಬ ಸಹಿತ ಹಲವರು ಉಪಸ್ಥಿತರಿದ್ದರು.
ಪಂದ್ಯಾಕೂಟದಲ್ಲಿ ಹಳ್ಳಿ ಹುಡುಗ್ರು ಪೇಟೆ ಕಪ್ ಹೆಸರಿನಲ್ಲಿ 60 ತಂಡಗಳು, ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಗೆ 24 ತಂಡಗಳು, ಸ್ನೇಹ ಸೌಹಾರ್ದ ಟ್ರೋಫಿ ಹೆಸರಿನಲ್ಲಿ ವಿವಿಧ ಇಲಾಖೆಗಳ 12 ಕ್ರಿಕೆಟ್ ತಂಡಗಳು, ಕಿಲ್ಲೆ ಕಪ್ನಲ್ಲಿ 4 ತಂಡಗಳು ತೀವ್ರ ಹಣಾಹಣಿ ನಡೆಸಲಿದೆ.
ರಝಾಕ್ ಬಿ.ಎಚ್ ನೇತೃತ್ವದಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾಟ ಬರೋಬ್ಬರಿ ಆರು ದಿನಗಳ ಕಾಲ ಖ್ಯಾತ ಕ್ರಿಕೆಟ್ ತಂಡಗಳ ಹೊಡಿಬಡಿ ಆಟದ ಕಾವು ಕಿಲ್ಲೆ ಮೈದಾನದಲ್ಲಿ ರಂಗೇರಲಿದೆ. ಈ ಕ್ರೀಡಾಕೂಟದಲ್ಲಿ ಪುತ್ತೂರಿನ ವೈದ್ಯರುಗಳು, ಪೊಲೀಸ್ ಇಲಾಖೆ, ವಕೀಲರು, ಮೆಸ್ಕಾಂ ಉದ್ಯೋಗಿಗಳು, ಬ್ಯಾಂಕ್ಉ ದ್ಯೋಗಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಪತ್ರಕರ್ತರು, ವರ್ತಕರು ಭಾಗವಹಿಸುತ್ತಿದ್ದಾರೆ.
ಸನ್ಮಾನ…
ಈ ಸಂದರ್ಭದಲ್ಲಿ ಎಸ್.ಐ ಆಂಜನೇಯ ರೆಡ್ಡಿ, ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಧನ್ವಂತರಿ ಕ್ಲಿನಿಕ್ ಮುಖ್ಯಸ್ಥ ಚೇತನ್ ಕಜೆ, ಬಾಂಧವ್ಯ ಟ್ರೋಫಿಯ ಸಂಯೋಜಕರಾದ ಸ್ಕರಿಯ ಹಾಗೂ ಫಾರೂಕ್, ಭರತ್ ಪ್ರಿಂಟರ್ಸ್ ನ ಭರತ್ ಗೌಡ, ಕೇಬಲ್ ಆಪರೇಟರ್ ಪ್ರವೀಣ್ ಪ್ರಭು, ಇತ್ತೀಚೆಗೆ ಕಥೋಲಿಕ್ ಸಭಾ ಮಂಗಳೂರು ಇವರಿಂದ ಮಂಗಳೂರಿನ ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾರವರಿಂದ ಸನ್ಮಾನಿತರಾದ ಪತ್ರಕರ್ತ ಸುದ್ದಿ ಬಿಡುಗಡೆಯ ಸಂತೋಷ್ ಮೊಟ್ಟೆತ್ತಡ್ಕರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.