ಕೊಂಡಾಡಿಕೊಪ್ಪ ಶಾಲೆಯಲ್ಲಿ ಮಕ್ಕಳ, ಅಂಗನವಾಡಿ ಪುಟಾಣಿಗಳ ವಾರ್ಷಿಕ ಕ್ರೀಡಾಕೂಟ

0

ಕಾಣಿಯೂರು: ಕೊಂಡಾಡಿಕೊಪ್ಪ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಶಾಲಾ ಮಕ್ಕಳ ಮತ್ತು ಅಂಗನವಾಡಿ ಪುಟಾಣಿಗಳ ಕ್ರೀಡಾಕೂಟವನ್ನು ಶ್ರೀ ಆದಿಶಕ್ತಿ ಕಾಂಪ್ಲೆಕ್ಸ್ ಶರವೂರು ಇದರ ಮಾಲೀಕ ಹುಕ್ರಪ್ಪ ಮುಗೇರ ಕಮಿತ್ತಿಲುರವರು ಉದ್ಘಾಟಿಸಿದರು.ಶಾಲಾಭಿವೃದ್ಧಿ ಸಮಿತಿ ಪೂರ್ವಾಧ್ಯಕ್ಷ ವೀರೇಂದ್ರ ಗೌಡ ಏಂತಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೊಂಡಾಡಿಕೊಪ್ಪ ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗಣೇಶ ಪೂಜಾರಿ ಕೊಂಡಾಡಿ, ನಿತ್ಯಾನಂದ ಕುಂಬಾರ ನಾಡ್ತಿಲ ಪೂರ್ವೋದಯ ಅಟೋಮೊಬೈಲ್ಸ್ ಕಾಣಿಯೂರು ಇದರ ಮಾಲೀಕ ಅಶ್ವನಿಕುಮಾರ್ ಉಪಸ್ಥಿತರಿದ್ದರು.ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಆರ್ ದಿವಾಕರ ಕುಂಬಾರ ಕೊಂಡಾಡಿಕೊಪ್ಪ ಶಾಲಾಭಿವೃದ್ಧಿ ಸಮಿತಿ ಪೂರ್ವಾಧ್ಯಕ್ಷ ಶೀನಪ್ಪ ಕುಂಬಾರ ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಕಮಿತ್ತಿಲು, ಶಾಲಾಭಿವೃದ್ಧಿ ಸಮಿತಿ ಸದಸ್ಯ ನೋಣಯ್ಯ ಗೌಡ ಏಂತಡ್ಕ ,ಅಂಗನವಾಡಿ ಸಹಾಯಕಿ ಗೀತಾ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.ಶಿಕ್ಷಕಿ ಸುನೀತಾ ಸಹಕರಿಸಿದರು.ಶಾಲಾ ಮುಖ್ಯಗುರು ಜಯಂತ ವೈ ಸ್ವಾಗತಿಸಿ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್ ಕೊಂಡಾಡಿಕೊಪ್ಪ ವಂದಿಸಿದರು.ಶಾಲಾ ಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here