ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ವಾರ್ಷಿಕೋತ್ಸವ ಡಿ. 19 ರಂದು ’ ಸಂತ ಫಿಲೋಮಿನಾ ಕಾಲೇಜು ’ ಎಸ್.ಜೆ.ಎಮ್. ಹಾಲ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಹಿರಿಯ ವಿದ್ಯಾರ್ಥಿ ಹರ್ಷ ಕುಮಾರ್ ರೈ ಮಾತನಾಡಿ ಜೀವನದಲ್ಲಿ ನೈತಿಕ ಮೌಲ್ಯದ ಪ್ರಾಮಾಣಿಕ ವ್ಯಕ್ತಿತ್ವ ಇದ್ದಾಗ ಮಾತ್ರ ನಮ್ಮನ್ನು ಗುರುತಿಸಲಿಕ್ಕೆ ಸಾಧ್ಯವಾಗುತ್ತದೆ. ಶಾಲೆಯ ಎಲ್ಲಾ ಶಿಕ್ಷಕರು ನೀಡಿದ ಉತ್ತಮ ಮಾರ್ಗದರ್ಶನದಿಂದ ನಾನು ಈ ರೀತಿ ಬೆಳವಣಿಗೆಯಾಗಲು ಸಾಧ್ಯವಾಯಿತು ಎಂದರು.
ಶಾಲಾ ಸಂಚಾಲಕ ಅತೀ ವಂ| ಲಾರೆನ್ಸ್ ಮಸ್ಕರೇನ್ಹಸ್‌ರವರು ಅಧ್ಯಕ್ಷೀಯ ಭಾಷಣದಲ್ಲಿ ಗುಣಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಶಾಲೆಯು ಸಫಲವಾಗಿದೆ. ಶಾಲೆಯು ಮಕ್ಕಳ ಜೀವನ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕನಸು ನನಸು ಮಾಡುವ ಜವಾಬ್ದಾರಿ ಹೆತ್ತವರಲ್ಲಿ ಇರಬೇಕು ಎಂದರು.
ಸಂತ ಫಿಲೋಮಿನಾ ಕ್ಯಾಂಪಸ್ ನಿರ್ದೇಶಕರಾದ ವಂ. ಸ್ಟಾನಿ ಪಿಂಟೊ , ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿ ಕೋಸ್ಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್. ಕೆ. ಜಗನ್ನಿವಾಸ್ ರಾವ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮೌರಿಸ್ ಕುಟಿನ್ಹಾ, ಶಾಲಾ ನಾಯಕ ಅದ್ವಿತ್ ಎಚ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಗುರುಗಳಾದ ಮ್ಯಾಕ್ಸಿಂ ಡಿ ಸೋಜ ಎಂ ಇವರು 2023-24 ನೇ ಸಾಲಿನ ಶೈಕ್ಷಣಿಕ ವರದಿಯನ್ನು ಮಂಡಿಸಿದರು. ಶಿಕ್ಷಕಿ ಕಾರ್ಮಿನ್ ಪಾಯಸ್ ರವರು ಸ್ವಾಗತಿಸಿ, ರೋಶನ್ ಸಿಕ್ಕೇರಾ ವಂದಿಸಿದರು. ಸಭಾ ಕಾರ್ಯಕ್ರಮವನ್ನು ರೇಷ್ಮಾ ಮರಿಯಾ ರೆಬೆಲ್ಲೊ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪ್ರಗ್ಯಾನ್ ಮತ್ತು ಅಸ್ತಿಕಾ ಇವರು ನಿರೂಪಿಸಿದರು.