ನಿಡ್ಪಳ್ಳಿ; ಎಂ.ಅರ್.ಪಿ.ಎಲ್ ನಲ್ಲಿ ಉದ್ಯೋಗಿಯಾಗಿದ್ದ ನಿಡ್ಪಳ್ಳಿ ವಾಸುದೇವ ಚೆಲ್ಯರಮೂಲೆ (50) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಡಿ.20 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಸೌಮ್ಯ, ಪುತ್ರರಾದ ತುಷಾರ್, ತನಿಷ್ ಮತ್ತು ಸಹೋದರರಾದ ವಸಂತ ಕುಮಾರ್, ಹರಿಪ್ರಸಾದ್, ಅತ್ತಿಗೆ ದೇವಕಿ, ನಾದಿನಿ ಭವ್ಯಾ, ಸಹೋದರಿ ಹಂಸಾವತಿ, ಭಾವ ಪ್ರಸನ್ನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.