ಯುವ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಲ ವಲಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷರಾಗಿ ಲಿಂಗಪ್ಪ ಗೌಡ ಮೋಡಿಕೆ, ಅಧ್ಯಕ್ಷ ಜಗ್ಗನಾಥ ಪಟ್ಟೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು

ಕಾವು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಈಶ್ವರಮಂಗಲ ವಲಯಕ್ಕೆ ಒಳಪಟ್ಟ ಮಾಡ್ನೂರು,ನೆಟ್ಟಣಿಗೆ ಮುಡ್ನೂರು,ಪಡವನ್ನೂರು,ಬಡಗನ್ನೂರು, ನಿಡ್ಪಳ್ಳಿ, ನೆಟ್ಟಣಿಗೆ ಬೆಳ್ಳೂರು ಗ್ರಾಮಗಳನ್ನು ಒಳಗೊಂಡ ವಲಯಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಡಿ 12 ರಂದು ದೀಪಕ್ ಮುಂಡ್ಯ ಇವರ ಮನೆಯಲ್ಲಿ ನಡೆಸಲಾಯಿತು.


ವಲಯದ ನೂತನ ಅಧ್ಯಕ್ಷರಾಗಿ ಜಗ್ಗನಾಥ ಗೌಡ ಪಟ್ಟೆ, ಗೌರವಾಧ್ಯಕ್ಷರಾಗಿ ಲಿಂಗಪ್ಪ ಗೌಡ ಮೋಡಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ್ ಕಾವು,ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಕನ್ನಡ್ಕ,ಸಂಘಟನಾ ಕಾರ್ಯದರ್ಶಿಯಾಗಿ ದೀಪಕ್ ಮುಂಡ್ಯ,ಕೋಶಾಧಿಕಾರಿಯಾಗಿ ಆಶೀರ್ವಾದ್ ಹೊಸಮನೆ,ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಿತ್ ಮಡ್ಯಾಲಮಜಲು,ಜೊತೆ ಕಾರ್ಯದರ್ಶಿಯಾಗಿ ಶರತ್ ಗೌಡ ಪುಳಿತ್ತಡಿ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೇಮಾನಂದ ಮೂಡಿಪಿನಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ನಿಯೋಜಿತ ಪದಾಧಿಕಾರಿಗಳಾದ ಅಮರನಾಥ ಗೌಡ ಬಪ್ಪಳಿಗೆ,ಆನಂದ ಗೌಡ ತೆಂಕಿಲ, ಪ್ರಶಾಂತ್ ಕೆಮ್ಮಾಯಿ, ವಸಂತ ಗೌಡ,ಪ್ರಕಾಶ್ ಕೆಮ್ಮಾಯಿ,ವಲಯ ಉಸ್ತುವಾರಿ ಲೋಕೇಶ್ ಚಾಕೋಟೆ, ವಲಯದ ಯುವ ಘಟಕದ ಸದಸ್ಯರಾದ ಸಂದೇಶ್ ಚಾಕೋಟೆ,ಧನಂಜಯ, ಸುದರ್ಶನ್, ನಾರಾಯಣ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here