ಅಮರ್ ಅಕ್ಬರ್ ಅಂತೋನಿ ಟ್ರೋಫಿ-2ನೇ ದಿನ

0

ನೆಕ್ಕಿಲಾಡಿ, ಕೆ.ಎಫ್.ಸಿ ಕೊಯಿಲ ತಂಡ ಸೆಮಿಗೆ

ಪುತ್ತೂರು: ಸಿಟಿ ಫ್ರೆಂಡ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಟೆನ್ ಗೈಯ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಬುದಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸೌದಿ ಅರೇಬಿಯಾ, ತುಳುನಾಡು ಫ್ರೆಂಡ್ಸ್ ಸೌದಿ ಅರೇಬಿಯಾ ಇವುಗಳ ಜಂಟಿ ಆಶ್ರಯದಲ್ಲಿ ಕಿಲ್ಲೆ ಮೈದಾನದಲ್ಲಿ ಜರಗಲಿರುವ ಜಾತಿ-ಜಾತಿ ಮಧ್ಯೆ ಸೌಹಾರ್ದತೆಯ ಸಾಮರಸ್ಯ ಮೂಡಿಸುವ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 13ನೇ ವರ್ಷದ ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ-2023 ಡಿ.19 ರಿಂದ 24ರ ತನಕ ಆರು ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ಅಹರ್ನಿಶಿ ಜರಗುತ್ತಿದೆ.


ಈ ಕ್ರೀಡಾಕೂಟದ ಎರಡನೇ ದಿನ ಹಳ್ಳಿ ಹುಡುಗ್ರು ಪೇಟೆ ಕಪ್ ಪಂದ್ಯಾಟದಲ್ಲಿ ನೆಕ್ಕಿಲಾಡಿ ಕ್ರಿಕೆಟರ್ಸ್ ಹಾಗೂ ಕೆ.ಎಫ್.ಸಿ ಕೊಯಿಲ ತಂಡಗಳು ಈಗಾಗಲೇ ಸೆಮಿಫೈನಲ್‌ ಗೆ ಎಂಟ್ರಿ ಪಡೆದಿವೆ. ವೈ.ಎಫ್.ಸಿ ಮುಕ್ವೆ ಹಾಗೂ ಕರಾವಳಿ ಬನ್ನೂರು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ನೆಗೆದಿವೆ. ಡಿ.21 ರಂದು ಹಳ್ಳಿ ಹುಡುಗ್ರು ಪೇಟೆ ಕಪ್ ಪಂದ್ಯಾಟಗಳು ಫೈನಲ್ ನೊಂದಿಗೆ ಕೊನೆಗೊಳ್ಳಲಿದೆ. ಈ ಪಂದ್ಯಾಟದಲ್ಲಿ ಒಟ್ಟು 60 ತಂಡಗಳು ಭಾಗವಹಿಸಿತ್ತು.

ವಿವಿಧ ಇಲಾಖೆಗಳ ಪಂದ್ಯಾಟ:
ಡಿ.22 ರಂದು ಸ್ನೇಹ ಸೌಹಾರ್ದ ಟ್ರೋಫಿ ಹೆಸರಿನಲ್ಲಿ ವಿವಿಧ ಇಲಾಖೆಗಳ 12 ಕ್ರಿಕೆಟ್ ತಂಡಗಳ ಹಣಾಹಣಿ ಹಾಗೂ ಕಿಲ್ಲೆ ಕಪ್ ಪಂದ್ಯಾಟ ನಡೆಯಲಿದೆ. ವಿವಿಧ ಇಲಾಖೆಗಳ ಸ್ಪರ್ಧೆಯಲ್ಲಿ ಪುತ್ತೂರಿನ ವೈದ್ಯರುಗಳು, ಪೊಲೀಸ್ ಇಲಾಖೆ, ವಕೀಲರು, ಮೆಸ್ಕಾಂ ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಪತ್ರಕರ್ತರು, ವರ್ತಕರು ಭಾಗವಹಿಸುತ್ತಿದ್ದಾರೆ. ಕಿಲ್ಲೆ ಕಪ್ ಪಂದ್ಯಾಟದಲ್ಲಿ ಕಮೆಂಟ್ರಿ ಇಲವೆನ್, ಅಂಪೈರ್ಸ್ ಇಲವೆನ್, ಬಜಾಜ್ ಫೈನಾನ್ಸ್ ಇಲವೆನ್, ಎಚ್.ಡಿ.ಬಿ ಇಲವೆನ್ ತಂಡಗಳು ಹಣಾಹಣಿ ನಡೆಸಲಿವೆ.

ಅಮರ್ ಅಕ್ಬರ್ ಅಂತೋನಿ ಟ್ರೋಫಿ:
ಡಿ.23 ಹಾಗೂ 24 ರಂದು 24 ತಂಡಗಳ ನಡುವೆ ಜಿದ್ದಾಜಿದ್ದಿನ ಅಮರ್ ಅಕ್ಬರ್ ಅಂತೋನಿ ಟ್ರೋಫಿ ಪಂದ್ಯಾಟ ಜರಗಲಿದೆ ಎಂದು ಸಂಘಟಕ ರಝಾಕ್ ಬಿ.ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಳ್ಳಿ ಹುಡುಗ್ರು ಪೇಟೆ ಕಪ್ ಪಂದ್ಯಾಟದಲ್ಲಿ ಮೂರು ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿದ್ದು ಪಂದ್ಯಗಳು ‘ಟೈ’ ಆಗಿದ್ದವು. ಟೈ ಆದ ಪಂದ್ಯಗಳನ್ನು ಸೂಪರ್ ಓವರ್ ಮೂಲಕ ಆಡಿಸಿ ವಿಜಯಿ ತಂಡಗಳನ್ನು ಘೋಷಿಸಲಾಯಿತು. ಇಡೀ ಪಂದ್ಯಾಟಗಳನ್ನು ನೇರಪ್ರಸಾರ ಮಾಡಲಾಗಿದ್ದರೂ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕಿಲ್ಲೆ ಮೈದಾನಕ್ಕೆ ಸಾವಿರಕ್ಕೂ ಮಿಕ್ಕಿ ಪ್ರೇಕ್ಷಕರು ಆಗಮಿಸಿದ್ದರು.

LEAVE A REPLY

Please enter your comment!
Please enter your name here