ಪುತ್ತೂರು: ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯಲ್ಲಿ ಸುದೀರ್ಘ 40 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ಫೆಲ್ಸಿ ಡಿ’ಸೋಜರವರಿಗೆ ವಿದಾಯ ಸಮಾರಂವು ಡಿ.21ರಂದು ಮಾದೇ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಶಿಕ್ಷಕ ವೃತ್ತಿ ಎಂಬುದು ಪಾವಿತ್ರ್ಯವಾದುದು. ದೇಶದ ಸತ್ಪ್ರಜೆ ನಿರ್ಮಿಸುವ ಮಹಾನ್ ಕಾರ್ಯ ಶಿಕ್ಷಕರದ್ದಾಗಿದೆ. ಭೌತಿಕ, ಶೈಕ್ಷಣಿಕ, ಮಾಸಿನಕವಾಗಿ ಮಕ್ಕಳ ಬೆಳೆಸಿ ಸಮಾಜಕ್ಕೆ ಒಲಿತಾಗುವ ಪ್ರಜೆಗಳ ನಿರ್ಮಾಣ ಮಾಡುವುದೇ ಶಿಕ್ಷಕರು. ಇಂತಹ ವೃತ್ತಿಯನ್ನು ಸಮಾಜ ಗೌರವ ಕೊಡುವಂತೆ ಶಿಕ್ಷಕರು ನಿರ್ವಹಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಗೆ ಮಾತ್ರ ಸೀಮಿತವಲ್ಲ. ಅವರು ಎರಡನೇ ಮುಖ್ಯ ಶಿಕ್ಷಕರಾಗಿದ್ದಾರೆ. ಶಾಲೆ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಬಹಳಷ್ಟು ಕೊಡುಗೆಯಿದೆ. ಶಿಕ್ಷಕಿ ಫೆಲ್ಸಿ ಡಿ’ಸೋಜರರು ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ರಾಷ್ಟ್ರ ಮಟ್ಟದ ವಿದ್ಯಾರ್ಥಿಗಳನ್ನು ನಿರ್ಮಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಈ ವರ್ಷ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಧ್ವಿತೀಯ ದಾಖಲೆ ನಿರ್ಮಿಸಿದ್ದು ಇದರಲ್ಲಿ ಫೆಲ್ಸಿ ಡಿಸೋಜರವರ ಕೊಡುಗೆಯಿದೆ. ಎಂದ ಅವರು ಮಾದೇ ದೇವುಸ್ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕವಾಗಿ ಬಹಳಷ್ಟು ಕೊಡುಗೆ ನೀಡಿದೆ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಸತಿ, ಬಸ್ ಸೌಲಭ್ಯ ಕಲ್ಪಿಸಿದ್ದು ಅದರ ಯಶಸ್ವಿನಲ್ಲಿ ನಿಮ್ಮ ಪಾತ್ರವಿದೆ. ಕ್ರೀಡಾ ರಂಗದಲ್ಲಿಸಂತ ವಿಕ್ಟರಣ ಶಾಲೆಯು ಅದ್ವಿತೀಯ ಸಾಧನೆ ಮಾಡಿದ್ದು ಅದರ ವೈಭವದ ಮತ್ತೆ ಕಾಣಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿರುವ ಶಿಕ್ಷಕಿ ಫೆಲ್ಸಿ ಡಿ’ಸೋಜರವರು ತಾನು ಶಿಕ್ಷಣ ಪಡೆದ ಶಾಲೆಯಲ್ಲಿಯೇ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ವೃತ್ತಿ ಜೀವನ ನಡೆಸಿದವರು. ಸುದೀರ್ಘ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ಅದೇ ಶಾಲೆಯಿಂದ ನಿವೃತ್ತಿ ಹೊಂದುವ ಸುಯೋಗ ಅವರ ಪಾಲಿಗಿದೆ. ತನ್ನ ವೃತ್ತಿಯಲ್ಲಿ ತೃಪ್ತಿಯನ್ನು ಪಡೆದುಕೊಂಡಿದ್ದಾರೆ. ಅವರನ್ನು ಧನ್ಯತಾಪೂರ್ವಕವಾಗಿ ಬೀಳ್ಕೊಡಲಾಗುವುದು. ಸಹಸ್ರಾರು ವಿದ್ಯಾರ್ಥಿ ಸಮೂಹವನ್ನು ಹೊಂದಿರುವ ಶ್ರೀಮಂತರು. ವೃತ್ತಿಯಲ್ಲಿ ಅವರ ಸಲ್ಲಿಸಿದ ಸೇವೆ, ಸಾಧನೆ ನಮ್ಮ ಸಂಸ್ಥೆಗೆ ಹೆಮ್ಮೆಯಾಗಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ಸಿಸ್ಟರ್ ಮಾರಿವೆಲ್ ಮಾತನಾಡಿ, ಶಿಕ್ಷಕಿ ಫೆಲ್ಟಿಯವರು ಮೃದು ಸ್ಚಭಾವದವರು. ತನ್ನ ಕರ್ತವ್ಯವನ್ನು ಅತ್ಯಂತ ನಿಷ್ಟೆಯಿಂದ ಮಾಡುವ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾದವರು. ನಿವೃತ್ತಿ ಕೇವಲ ವೃತ್ತಿಗೆ ಮಾತ್ರ. ನಿಮ್ಮಲ್ಲಿ ಯವ್ವನವಿದೆ. ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಉದಯ ಕುಮಾರಿ ಮಾತನಾಡಿ, ತಾನು ಕಲಿತ ಶಾಲೆಯಲ್ಲಿಯೇ ಶಿಕ್ಷಕಿಯಾಗಿ ೪೦ ವರ್ಷಗಳ ಕಾಲ ವೃತ್ತಿಯನ್ನೂ ನಿರ್ವಹಿಸುವ ಅದ್ಬುತ ಯೋಗ ಫೆಲ್ಸಿಯವರಿಗೆ ದೊರೆತಿದೆ. , ಸರಕಾರಿ ಸೇವೆಯಲ್ಲಿ ನಿವೃತ್ತಿ ಅನಿವಾರ್ಯವಾಗಿದ್ದು ನಿಮ್ಮ ನಿವೃತ್ತಿ ಜೀವನವು ಸುಖಮಯವಾಗಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಫೆಲ್ಸಿ ಡಿ’ಸೋಜ ಮಾತನಾಡಿ, ಸುದೀರ್ಘ ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸುವ ಸುಯೋಗ ನನಗೆ ಲಭಿಸಿದೆ. ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ತನಗೆ ಉದ್ಯೋಗ ನೀಡಿದ ಕ್ಯಾಥೊಲಿಕ್ ಶಿಕ್ಷಣ ಮಂಡಲಿಗೆ, ತನ್ನ ವೃತ್ತಿ ಹಾಗೂ ಸಾಧನೆಯಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿ, ಸಹಕಾರ, ಮಾರ್ಗದರ್ಶನ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಸನ್ಮಾನ
ನಿವೃತ್ತ ಶಿಕ್ಷಕಿ ಫೆಲ್ಸಿ ಡಿ’ಸೋಜ ರವರನ್ನು ಶಾಲಾ ಆಡಳಿತ ಮಂಡಳಿಯಿಂದ ಅದ್ಧೂರಿಯಾಗಿ ಸನ್ಮಾನಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘ, ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಪಟ್ಟೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ, ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಬಿ.ಎಡ್ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿಗಳು ಸನ್ಮಾನಿಸಿ ಗೌರವಿಸಿದರು.
ದತ್ತಿ ನಿಧಿಗೆ ದೇಣಿಗೆ;
ತಾನು ಕಲಿತು, 40 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಾಲಾ ದತ್ತಿ ನಿಧಿಗೆ ಶಿಕ್ಷಕಿ ಫೆಲ್ಸಿ ಡಿ’ಸೋಜರವರು ದೇಣಿಗೆಯನ್ನು ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೋರವರಿಗೆ ಹಸ್ತಾಂತರಿಸಿದರು. ನಿವೃತ್ತ ಶಿಕ್ಷಕರು ಹಾಗೂ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಫೆಲ್ಸಿ ಡಿ’ಸೋಜ ಹೂ ನೀಡಿ ಗೌರವಿಸಿದರು.
ವಿದಾಯ ಗೀತೆ:
ನಿವೃತ್ತ ಶಿಕ್ಷಕಿ ಫೆಲ್ಸಿ ಡಿ’ಸೋಜರವರ ನಿವೃತ್ತಿಯನ್ನು ಕುರಿತ ವಿದಾಯ ಗೀತೆಯನ್ನು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಡಿದರು.
ನಿವೃತ್ತ ಶಿಕ್ಷಕಿ ಫೆಲ್ಸಿ ಡಿ’ಸೋಜರವರ ಪತಿ ಕ್ಲೋಡಿಯಸ್ ಡಿ’ಸೋಜ, ಶಾಲಾ ನಾಯಕಿ ಫಾತಿಮಾ ಫಾಝಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೋ ಸ್ವಾಗತಿಸಿದರು. ಶಿಕ್ಷಕರಾದ ಭವ್ಯ ಸನ್ಮಾನ ಪತ್ರ ವಾಚಿಸಿದರು. ಲೆನಿಟಾ ಮೋರಾಸ್ ಕಾರ್ಯಕ್ರಮ ನಿರೂಪಿಸಿ, ಇನಾಸ್ ಗೊನ್ಸಾಲ್ವೀಸ್ ವಂದಿಸಿದರು