ಸಮಾಜ ಪ್ರಗತಿಪಥ ದತ್ತ ಸಾಗಬೇಕಾದರೆ ಶಿಕ್ಷಣ ಮುಖ್ಯ- ಜಿ ಎ ಭಾವ
ಪುತ್ತೂರು: ಕೆ ಐ ಸಿ ಸನದು ದಾನ ಮಹಾ ಸಮ್ಮೇಳನದ ಅಂಗವಾಗಿ ಡಿ 22ರಂದು ಕುಂಬ್ರ ಕೆ ಐ ಸಿ ಯಲ್ಲಿ ನವೀಕೃತ ಲೈಬ್ರರಿ ಉದ್ಘಾಟನೆ ಮತ್ತು ಸಿವಿಲ್ ಸರ್ವಿಸ್ ತರಗತಿ ಆರಂಭಗೊಂಡಿತು. ನವೀಕೃತ ಲೈಬ್ರರಿಯ ಉದ್ಘಾಟನೆಯನ್ನು ನೆರವೇರಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಜಿ ಎ ಭಾವ ಅವರು ಮಾತನಾಡಿ ಯಾವುದೇ ಸಮಾಜ ಪ್ರಗತಿಪಥದಲ್ಲಿ ಸಾಗಬೇಕಿದ್ದರೆ ಶಿಕ್ಷಣ ಮುಖ್ಯ, ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸದೆ ಸಮನ್ವಯ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ಪ್ರೇಮಿಗಳು ನೀಡುವ ಸಹಾಯ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂದು ಹೇಳಿದರು.
ಸಂಸ್ಥೆಯಿಂದ ಪದವಿ ಪಡೆಯುವ ಯುವ ವಿದ್ವಾಂಸರು ಸಂಸ್ಥೆಗೆ ಕೀರ್ತಿ ತರುವ ಸೇವಾ ಕಾರ್ಯ ನಡೆಸಬೇಕು :
ಖಾದರ್ ಹಾಜಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಬೆಂಗಳೂರು ಎಂ ಡಿ ಆರ್ ಎಂ ಗ್ರೂಪ್ ನ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ ರವರು ಮಾತನಾಡಿ ಕೆಐಸಿ ಸಂಸ್ಥೆಯ ಬೆಳವಣಿಗೆಯು ಸ್ತುತ್ಯರ್ಹವಾಗಿದ್ದು ಇಲ್ಲಿ ಕಲಿತು ಪದವಿ ಪಡೆಯುವ ಯುವ ವಿದ್ವಾಂಸರು ಸಂಸ್ಥೆಗೆ ಕೀರ್ತಿ ತರುವ ರೂಪದಲ್ಲಿ ಧಾರ್ಮಿಕ ,ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಮಾಡಬೇಕು. ಅದರಿಂದ ಇಹಪರ ವಿಜಯ ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಂಡು ನನಸಾಗಿಸಲು ಸತತ ಪ್ರಯತ್ನಿಸಬೇಕು :
ಮುಸ್ತಫ ಭಾರತ್, ಸಿವಿಲ್ ಸರ್ವಿಸ್ ತರಗತಿ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ಭಾರತ ಕನ್ಸ್ಟ್ರಕ್ಷನ್ ನ ಮುಹಮ್ಮದ್ ಮುಸ್ತಫ ರವರು ಮಾತನಾಡಿ ನೀವೂ ಮುಂದೆ ಉನ್ನತ ಅಧಿಕಾರಿಗಳಾಗಿ ,ನಾಯಕರಾಗಿ ಉನ್ನತ ಸ್ಥಾನಕ್ಕೇರಬಹುದು ನಿಮ್ಮ ಮುಂದೆ ಉಜ್ವಲ ಅವಕಾಶಗಳಿವೆ ಆದ್ದರಿಂದ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಅದು ನನಸಾಗಿಸಲು ಸತತವಾಗಿ ಪ್ರಯತ್ನಿಸಬೇಕು ಖಂಡಿತ ಅದು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ. ಎಂದು ಹೇಳಿದರು.
ಬೆಂಗಳೂರು ಪ್ರಸಾರ ಭಾರತಿ ಎಸ್ ಅಧಿಕಾರಿ ಶಾಹಿದ್ ತಿರುವಳ್ಳೂರ್ ರವರು ಮುಖ್ಯ ಪ್ರಭಾಷಣ ನೀಡಿದರು.
ಕಾರ್ಯಕ್ರಮದ ಆಧ್ಯಕ್ಷತೆಯನ್ನು ಯೂಸುಫ್ ಹಾಜಿ ಮೇನಾಲರವರು ವಹಿಸಿದ್ದರು ದುವಾ ಆಶೀರ್ವಚನವನ್ನು ಉಮರ್ ಮುಸ್ಲಿಯಾರ್ ನಂಜೆರವರು ನೆರವೇರಿಸಿದರು.
ಕುಂಬ್ರ ಕೆಐಸಿ ಯ ಅಧ್ಯಕ್ಷ: ಕೆ.ಪಿ.ಅಹ್ಮದ್ ಹಾಜಿ ಆಕರ್ಷಣ್, ನ್ಯಾಯವಾದಿ ನೋಟರಿ ಫಝಲ್ ರಹೀಂ ,ಪುತ್ತೂರು ಹಾಜಿ ಮುಹಮ್ಮದ್ ಹನೀಫ್ ಗೋಳ್ತ ಮಜಲ್, ಕೆಐಸಿ ಪ್ರಾಧ್ಯಾಪಕ ಅನೀಸ್ ಕೌಸರಿ, ವ್ಯವಸ್ಥಾಪಕ ಸತ್ತಾರ್ ಕೌಸರಿ ಕೆಐಸಿ ಗಲ್ ಸಮಿತಿಯ ಕೋಆರ್ಡಿನೇಟರ್ ನೂರ್ ಮುಹಮ್ಮದ್ ನೀರ್ಕಜೆ -ದುಬೈ ಉದ್ಯಮಿ ತಾಹಿರ್ ಸಾಲ್ಮರ, ಮುಹಮ್ಮದ್ ಹಾಜಿ ಮುಂಡೋಳೆ ಆಫ್ರಿಕಾದ ಉದ್ಯಮಿ ಹನೀಪ್, ಕೋಡಿಂಬಾಡಿ ಜುಮ್ಮಾ ಮಸೀದಿಯ ಅಧ್ಯಕ್ಷ ಉಮರ್ ಹಾಜಿ ಕೋಡಿಂಬಾಡಿ, ಅಲಿ ದುಬೈ, ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಹಾಜಿ ಅಬ್ದುಲ್ ರಹಿಮಾನ್ ಅಝಾದ್, ಕೆ.ಎಂ. ಬಾವಾ ಹಾಜಿ ಕೂರ್ನಡ್ಕ, ದಾರುಲ್ ಹಸನಿಯಾ ಸಾಲ್ಮರ ಇದರ ಅನ್ವರ್ ಮುಸ್ಲಿಯಾರ್, ಉಮ್ಮರ್ ಕರಾವಳಿ, ಮೊಹಿದ್ದೀನ್ ಹಾಜಿ ದಿಬ್ಬ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಚೇರ್‌ಮ್ಯಾನ್ ಅಶ್ರಫ್ ಶಾ ಮಾಂತೂರು ಸ್ವಾಗತಿಸಿದರು ಮೌಂಟನ್ ವ್ಯೂ ಅಸಾಲಿಹ ವುಮೆನ್ಸ್ ಕಾಲೇಜಿನ ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು .