ಡಿ.23: ಸಾಮೆತ್ತಡ್ಕ ಶಾಲಾ ಸುವರ್ಣ ಸಂಭ್ರಮ ನೂತನ ಕೊಠಡಿ ,ರಂಗ ವೇದಿಕೆ ಉದ್ಘಾಟನೆ

0

ಪುತ್ತೂರು : ಸುವರ್ಣ ಸಂಭ್ರಮದಲ್ಲಿರುವ ಸಾಮೆತ್ತಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ಡಿ.23 ರಂದು ಶಾಲಾ ಪುಟಾಣಿಗಳಿಂದ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ನೂತನ ಕೊಠಡಿ ಹಾಗೂ ರಂಗ ವೇದಿಕೆ ಉದ್ಘಾಟನಾ ಕಾರ್ಯ ನಡೆಯಲಿದೆ.


ಶಾಲಾ ಸ್ಥಾಪಕಾಧ್ಯಕ್ಷ ,ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರೂ ಆಗಿರುವ ಸಾಮೆತ್ತಡ್ಕ ಗೋಪಾಕೃಷ್ಣ ಭಟ್ ಧ್ವಜಾರೋಹಣ ನೆರವೇರಿಸಲಿದ್ದು , ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು , ಮುಖ್ಯ ಅತಿಥಿ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಅತಿಥಿಗಳು ಭಾಗವಹಿಸಲಿದ್ದಾರೆ.ನಂತರ ಬಹುಮಾನ ವಿತರಣೆ , ಭೋಜನ , ಸಂಗೀತ ರಸಮಂಜರಿ ನಡೆಯಲಿದ್ದು , ಸಂಜೆ ಶಾಲಾ ನೂತನ ಕೊಠಡಿ ಹಾಗೂ ರಂಗ ವೇದಿಕೆ ಉದ್ಘಾಟನೆಯನ್ನು ಶಾಸಕ ಆಶೋಕ್ ಕುಮಾರ್ ರೈ ನೆರವೇರಿಸಲಿದ್ದಾರೆ.
ಶಾಲಾ ಕೊಠಡಿ ದಾನಿಗಳಾಗಿರುವ ಆನಂದಾಶ್ರಮ ಸೇವಾ ಟ್ರಸ್ಟ್ ಆದ್ಯಕ್ಷೆ ಡಾ. ಗೌರಿ ಪೈ ದೀಪ ಪ್ರಜ್ವಲನೆ ನೆರವೇರಿಸಲಿದ್ದು , ರಂಗ ವೇದಿಕೆ ದಾನಿಯಾಗಿರುವ ಡಾ. ಶರಣ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here