ಸೈಯದ್ ಮುಹಮ್ಮದ್ ಜೆಫ್ರಿ ಮುತ್ತುಕೋಯ ತಂಙಳ್ ಆಗಮನ
ಪುತ್ತೂರು: 20 ವರ್ಷಗಳ ಸಮನ್ವಯ ಶಿಕ್ಷಣದ ಸೇವಾಭೂಮಿಕೆಯಲ್ಲಿ ಪ್ರಮುಖ ಮೈಲಿಗಲ್ಲಾಗುವ ಕರ್ನಾಟಕ ಇಸ್ಲಾಮಿಕ್ ಸಂಸ್ಥೆಯ 4ನೇ ಸನದುದಾನ ಮಹಾಸಮ್ಮೇಳನ ದ.23ರಂದು ಕುಂಬ್ರ ಕೆಐಸಿಯಲ್ಲಿ ನಡೆಯಲಿದೆ. ಸಮಸ್ತ ಕೇರಳ ಜಂಈಯತ್ತುಲ್ ಉಲಮಾ ಅಧ್ಯಕ್ಷ ಸೈಯದ್ ಮುಹಮ್ಮದ್ ಜೆಫ್ರಿ ಮುತ್ತುಕೋಯ ತಂಙಳ್‌ರವರು ಸನದುದಾನ ಹಾಗೂ ಸನದು ನಸೀಹತ್ ಮಾಡಲಿದ್ದಾರೆ.
ದುವಾಶೀರ್ವಚನವನ್ನು ಸಮಸ್ತ ದಕ್ಷಿಣ ಕರ್ನಾಟಕ ಮುಶಾವರ ಅಧ್ಯಕ್ಷ ಸೈಯದ್ ಜೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ರವರು ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕೆಐಸಿ ಕುಂಬ್ರ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸೈಯದ್ ಅಲಿ ತಂಙಳ್ ಕುಂಬೋಳ್ ನೆರವೇರಿಸಲಿದ್ದಾರೆ. ಮುಖ್ಯಪ್ರಭಾಷಣಗಾರರಾಗಿ ಸಮಸ್ತ ಕೇಂದ್ರ ಮುಶಾವರದ ಸದಸ್ಯ ಶೈಖುನಾ ಅಬ್ದುಲ್ ಸಲಾಂ ಬಾಖವಿ ಹಾಗೂ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣರವರು ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ತ್ವಾಖಾ ಅಹ್ಮದ್ ಅಲ್‌ಅಝ್ಹರಿ, ದ.ಕ.ಜಿಲ್ಲಾ ಖಾಝಿ ಶೈಖುನಾ ಮಾಹಿನ್ ಮುಸ್ಲಿಯಾರ್ ತೊಟ್ಟಿ, ಶೈಖುನಾ ಅಬ್ದುಲ್ಲಾ ಫೈಝಿ ಕೊಡಗು, ಶೈಖುನಾ ಉಸ್ಮಾನುಲ್ ಫೈಝಿ ತೋಡಾರು, ಸೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಸಹಿತ ಹಲವಾರು, ಉಲೇಮ, ಉಮಾರಾಗಳು ಭಾಗವಹಿಸಲಿದ್ದಾರೆ.
ಕುಟುಂಬ ಸಂಗಮ: ಮಧ್ಯಾಹ್ನ 1ರಿಂದ ಕೆಐಸಿ ಕುಟುಂಬ ಸಂಗಮ ನಡೆಯಲಿದೆ. ಆದಂದಾರಿಮಿ ಆಡೂರು ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಸಾಜು ಶಮೀರ್ ಅಜ್ಹರಿ ಮತ್ತು ರಪೀಕ್ ಮಾಸ್ಟರ್‌ರವು ಭಾಗವಹಿಸಲಿದ್ದಾರೆ. ಕೆಐಸಿ ಕುಂಬ್ರ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕೆಐಸಿ ಪದಾಧಿಕಾರಿಗಳು ತಿಳಿಸಿದ್ದಾರೆ.