ಇರ್ದೆ: ಸತ್ಯದತ್ತ ವ್ರತಪೂಜೆ, ವಿಕಾಸ ವಾಹಿನಿ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇರ್ದೆ, ಉಪ್ಪಳಿಗೆ, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಘಟ ಸಮಿತಿ ಇದರ ವತಿಯಿಂದ ಜ.19ರಂದು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿರುವ ಜಂಟಿ ವಾರ್ಷಿಕೋತ್ಸವ, ಸಾಮೂಹಿಕ ಶ್ರೀಸತ್ಯದತ್ತ ವ್ರತ ಪೂಜೆ ಮತ್ತು ವಿಕಾಸ ವಾಹಿನಿ ಸ್ವ-ಸಹಾಯ ಸಂಘಗಳ ಲಾಭಾಂಶ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಡಿ.22ರಂದು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.


ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ರೈ ಬೈಲಾಡಿ, ಇರ್ದೆ ಉಪ್ಪಳಿಗೆ ಘಟ ಸಮಿತಿ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿಯ ನಿರ್ದೇಶಕ ಯು. ದೇವಪ್ಪ ನಾಯ್ಕ, ದಾಮೋದರ ಪಾಟಾಳಿ, ಸದಾಶಿವ ರೈ ಗುಮ್ಮಟೆಗದ್ದೆ, ಪಾಣಾಜೆಯ ಸೇವಾ ದೀಕ್ಷಿತೆ ಜಯಶ್ರೀ, ಬೆಟ್ಟಂಪಾಡಿಯ ಸೇವಾ ದೀಕ್ಷಿತೆ ಅಶ್ವಿನಿ ಪಿ., ಮೇಲ್ವಿಚಾರಕಿ ಸವಿತಾ ರೈ, ಸಂಯೋಜಕಿ ಶಶಿ ಡಿ., ಲೀಲಾವತಿ, ಸವಿತಾ ಎಂ., ವಿಜಯಲಕ್ಷ್ಮೀ ಹಾಗೂ ಸ್ವಾತಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here