ಪುತ್ತೂರು: ಕೆ.ಐ.ಸಿ 4ನೇ ಸನದುದಾನ ಮಹಾ ಸಮ್ಮೇಳನದ ಅಂಗವಾಗಿ ಜಲಾಲಿಯ್ಯ ರಾತಿಬ್ ಹಾಗೂ ಪ್ರಾರ್ಥನಾ ಮಜ್ಲಿಸ್ ಕಾರ್ಯಕ್ರಮ ಡಿ.21ರಂದು ನಡೆಯಿತು. ಮುಖ್ಯ ಪ್ರಭಾಷಣಗಾರರಾಗಿ ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರುರವರು ಮಾತನಾಡಿ ವಿದ್ಯೆ ಎಂಬುದು ಪ್ರತಿಯೊಬ್ಬರಿಗೂ ಸಿಗುವ ಸಂಪತ್ತಲ್ಲ. ಬದಲಾಗಿ ಪರಮಾತ್ಮನ ಅನುಗ್ರಹ ದೊರಕಿದ ಕೆಲವರಿಗೆ ಮಾತ್ರ ಅನುಗ್ರಹಿಸಲ್ಪಟ್ಟದ್ದಾಗಿದೆ ಎಂದ ಅವರು ಗುರು ಹಿರಿಯರನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಬೇಕು ಎಂದು ಹೇಳಿದರು.
ಸೈಯ್ಯದ್ ಇಬ್ರಾಹೀಂ ಬಾತಿಶ ತಂಙಳ್ ಅಲ್ ಬುಖಾರಿ ರವರು ಜಲಾಲಿಯ್ಯ ರಾತಿಬ್ ನೇತೃತ್ವವನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಹಿಯುದ್ದೀನ್ ಹಾಜಿ ದಿಬ್ಬರವರು ವಹಿಸಿದ್ದರು. ಉದ್ಘಾಟನೆಯನ್ನು ಉಮ್ಮರ್ ಮುಸ್ಲಿಯಾರ್ ನಿರ್ವಹಿಸಿದರು. ಯುಸೂಫ್ ಹಾಜಿ ಮೇನಾಲ ನವೀಕೃತ ಲೈಬ್ರರಿಯನ್ನು ಸಂದರ್ಶಿಸಿದರು. ಇಸ್ಮಾಯಿಲ್ ಫೈಝಿ ಮಾಡನ್ನೂರು, ಶುಕೂರ್ ದಾರಿಮಿ ಕಾವು, ಆದಂ ಮುಕ್ರಂಪಾಡಿ, ಸಾಬು ಹಾಜಿ, ಫಾರೂಕ್ ಸಂಟ್ಯಾರ್ ಹಾಗೂ ಇನ್ನೀತರ ಹಲವಾರು ಉಮರಾ ಉಲಮಾ ನಾಯಕರು ಭಾಗವಹಿಸಿದ್ದರು. ಸಂಸ್ಥೆಯ ವ್ಯವಸ್ಥಾಪಕ ಅಬ್ದುಲ್ ಸತ್ತಾರ್ ಕೌಸರಿ ವಂದಿಸಿದರು. ಕೆಐಸಿ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ಸ್ವಾಗತಿಸಿದರು.