ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಡಶಾಲೆಯಲ್ಲಿ ಸರ್ವ ಧರ್ಮ ಹಬ್ಬಗಳ ಆಚರಣೆಯನ್ನು ಡಿ.22 ರಂದು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.ಮುಖ್ಯ ಅತಿಥಿ ಮರೀಲ್ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಡೊನಾಲ್ ನಿಲೇಶ್ ಕ್ರಾಸ್ತಾ ಮಾತನಾಡಿ ಭಾಷಣದಲ್ಲಿ ದೀಪಾವಳಿ, ರಮ್ಹಾನ್ ಹಾಗೂ ಕ್ರಿಸ್ಮಸ್ ಈ ಮೂರು ಹಬ್ಬಗಳ ಸಂದೇಶ ಒಂದೇ ಆಗಿದೆ. ಅದು ಪ್ರೀತಿಯ ಸಂದೇಶವಾಗಿದೆ. ಅದುವೇ ದೇವರ ಪ್ರೀತಿ. ಈ ಹಬ್ಬಗಳು ನಮ್ಮೆಲ್ಲರನ್ನೂ ಒಂದುಗೂಡಿಸುತ್ತದೆ. ನಾವೆಲ್ಲರೂ ಭಾರತೀಯರು, ಭಾರತ ದೇಶವು ವೈವಿಧ್ಯತೆಯಿಂದ ಕೂಡಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಬಾಳಬೇಕು ಎಂದರು.
ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತಿ ವಂ ಫಾ ಲಾರೆನ್ಸ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಮೂರು ಹಬ್ಬಗಳು ಬೆಳಕಿನ ಹಬ್ಬ, ಅಧ್ಯಾತ್ಮಿಕ ಬೆಳಕನ್ನು ಪಡೆಯುವಂತಹ ಹಬ್ಬ ಎಲ್ಲಾ ಹಬ್ಬಗಳಲ್ಲಿ ಪ್ರಮುಖ ಅಂಶಗಳೆಂದರೆ ಬೆಳಕು. ನಮ್ಮ ಮನಸ್ಸಿಗೆ ಬೆಳಕು ಕೊಡಬೇಕಾದರೆ ದೇವರ ಪ್ರೀತಿಯನ್ನು ದೇವರ ಬೆಳಕನ್ನು, ಹಾಗೂ ದೇವರು ಪ್ರತಿಯೊಬ್ಬರಲ್ಲಿ ಇದ್ದಾನೆ. ದೇವರನ್ನು ನಾವು ಪರಸ್ಪರರಲ್ಲಿ ಕಾಣಬೇಕು ಎಂದು ಹೇಳಿದರು.
ರಕ್ಷಕ-ಶಿಕ್ಷಕ ಸಂಘದ ಜತೆ ಕಾರ್ಯದರ್ಶಿ ದಿವ್ಯಾ ರೈ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಸಿಸ್ಟರ್ ಲೋರಾ, ಶಾಲಾ ಉಪನಾಯಕಿ ಶ್ರೀಶಾ ಎಸ್ ಆರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂಟನೇ ತರಗತಿಯ ವಂಶಿ ಕೆ ಎನ್. ಮುಖ್ಯ ಅತಿಥಿಗಳ ಪರಿಚಯಿಸಿದರು ಮೂರು ಹಬ್ಬಗಳ ಆಚರಣೆಯ ಅಂಗವಾಗಿ ನಡೆದ ಗೂಡುದೀಪ, ಗ್ರೀಟಿಂಗ್ ಕಾರ್ಡ್. ನಕ್ಷತ್ರಗಳ ವಿವಿಧ ಸ್ಪಧೆಗಳ ಬಹುಮಾನವನ್ನು ನಮ್ಮ ಶಾಲಾ ಶಿಕ್ಷಕಿ ಸವಿತಾ ಮೊಂತೆರೊ ನೆರವೇರಿಸಿದರು. ಉಭಯ ಶಾಲೆಗಳ ಎಲ್ಲಾ ಶಿಕ್ಷಕ ವೃಂದದವರು ಎಲ್ಲಾ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ,.ಶಾಲೆಯ ಮುಖ್ಯ ಗುರು ವಂ ಫಾ ಮ್ಯಾಕ್ಸಿಂ ಡಿ ಸೋಜಾ ಎಂ ಸ್ವಾಗತಿಸಿ, ಒಂಭತ್ತನೆ ‘ಎ’ ತರಗತಿಯ ಫಾತಿಮತ್ ಝುಲ್ಫ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶಿಲ್ಪಾ ವಂದಿಸಿದರು.