ಪುತ್ತೂರು:ನೈತಾಡಿ ಕಲ್ಲಗುಡ್ಡೆ ಮೈದಾನದಲ್ಲಿ ದ.೧೬ರಂದು ಸಂಜೆ ಕುರಿಯ ಹಾಗೂ ಕೆಮ್ಮಿಂಜೆ ಗ್ರಾಮಾಂತರ ಪುತ್ತಿಲ ಪರಿವಾರ ಸಮಿತಿ ವತಿಯಿಂದ ಸಿದ್ದಿವಿನಾಯಕ ವೃತ ಪೂಜೆ, ಭಜನೆ,ಧಾರ್ಮಿಕ ಸಭೆ, ನಾಟಕ ನಡೆಯಿತು.
ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಧರ್ಮದ ಉಳಿವಿಗಾಗಿ ಧಾರ್ಮಿಕ ಕಾರ‍್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು.ಧರ್ಮದ ಉಳಿವಿಗಾಗಿ ನಾವೆಲ್ಲರೂ ಸಂಘಟಿತರಾಗಿ ಉತ್ತರ ಕೊಡಲು ಬದ್ಧರಾಗೋಣ ಎಂದು ತಿಳಿಸಿದರು.ಧಾರ್ಮಿಕ ಭಾಷಣ ಮಾಡಿದ ಚಂದ್ರಹಾಸ ಈಶ್ವರಮಂಗಲ ಮಾತನಾಡಿ,ಹಿಂದೂಗಳೆಲ್ಲ ಒಟ್ಟಾಗಿ ಹಿಂದೂ ರಾಷ್ಟ್ರವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು.ಅದಕ್ಕಾಗಿ ಜಾತಿ ಬಿಟ್ಟು ನಾವೆಲ್ಲರೂ ಧರ್ಮದ ಬಗ್ಗೆ ಯೋಚನೆ ಮಾಡಬೇಕು ಎಂದರು.ಸಭಾಧ್ಯಕ್ಷತೆ ವಹಿಸಿದ್ದ ಶಿಕ್ಷಕ ರಾಜಾರಾಮ ನೆಲ್ಲಿತ್ತಾಯರವರು ಸ್ವರಚಿತ ಕವನವನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದರು.ಅತಿಥಿಗಳಾಗಿದ್ದ ಪುತ್ತಿಲ ಪರಿವಾರ ಸಮಿತಿ ಅಧ್ಯಕ್ಷ ಪ್ರಸನ್ನ ಮೂರ್ತಿ,ಚಂದ್ರಶೇಖರ ನಡುಬೈಲು,ಅರುಣ್ ರೈ ಡಿಂಬ್ರಿ, ರಾಜೀವ್ ಸುವರ್ಣ ಪೆರಿಯಡ್ಕ ಸಂದರ್ಭೋಚಿತ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.ಸಮಿತಿಯ ಅಧ್ಯಕ್ಷ ಶಂಕರನಾರಾಯಣ ರಾವ್ ಕಲ್ಲಗುಡ್ಡೆ ಸ್ವಾಗತಿಸಿದರು.ಕು|ಸಿಂಧೂರಶ್ಮಿ ಪ್ರಾರ್ಥಿಸಿದರು.ಪ್ರಧಾನ ಕಾರ‍್ಯದರ್ಶಿ ರೇಖನಾಥ ರೈ ಸಂಪ್ಯದಮೂಲೆ ವಂದಿಸಿದರು.ಸತೀಶ್ ಬೊಳಂತಿಮಾರು ಕಾರ್ಯಕ್ರಮ ನಿರ್ವಹಿಸಿದರು.ಪುತ್ತಿಲ ಪರಿವಾರದ ಗಣೇಶ್ ಸುವರ್ಣ ಬೊಳ್ಳಗುಡ್ಡೆ, ಸುರೇಶ್ ಕೆ. ನೈತ್ತಾಡಿ, ಸತೀಶ್ ನೈತಾಡಿ, ಮೋಹನ್ ಸಾಲ್ಯಾನ್ ಬೊಳ್ಳಗುಡ್ಡೆ, ರೇಖನಾಥ ರೈ, ಬಾಲಕೃಷ್ಣ ಗೌಡ ನೈತಾಡಿ, ವೀರೇಶ್ ಕಲ್ಲಗುಡ್ಡೆ, ಪ್ರಸಾದ್ ಹೆಬ್ಬಾರ್ ಕರೆಜ್ಜ ಅತಿಥಿಗಳಿಗೆ ಫಲ ತಾಂಬೂಲ ಕೊಟ್ಟು ಶಾಲು ಹೊದಿಸಿ ಗೌರವಿಸಿದರು.ಶ್ರೀಕೃಷ್ಣ ಬೊಳಂತಿಮಾರು, ಸಂತೋಷ್ ರೈ ಸಂಪ್ಯದಮೂಲೆ, ಗೋಪಾಲಕೃಷ್ಣ ನೈತ್ತಾಡಿ, ರಾಘವೇಂದ್ರ ಅಂಗಿತ್ತಾಯ, ಸೀತಾರಾಮ ಆಚಾರ‍್ಯ ಪಂಜಳ ವಿವಿಧ ಜವಾಬ್ದಾರಿ ನಿರ್ವಹಿಸಿದರು.
ಸನ್ಮಾನ:
ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಇತ್ತೀಚೆಗೆ ನಿವೃತ್ತಿ ಹೊಂದಿರುವ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮೊಟ್ಟೆತ್ತಡ್ಕ ಉಪಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಎ.ಎಮ್.ಅಕ್ಕಮ್ಮ ಅವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಅರುಣ್ ಕುಮಾರ್ ಪುತ್ತಿಲ ಮತ್ತು ಇತರ ಗಣ್ಯರು ಸನ್ಮಾನಿಸಿದರು.ಸ್ಥಳೀಯರಾದ ಜ್ಯೋತಿ ಯಸ್.ರಾವ್ ಇವರು ಹೂ ಹಾರ ಹಾಕಿ ಸ್ವಾಗತಿಸಿದರು.ಮೋಹನ್ ಸಾಲ್ಯಾನ್ ಬೊಳ್ಳಗುಡ್ಡೆ ಅಭಿನಂದನಾ ಪತ್ರವನ್ನು ಓದಿದರು.
ಭಜನೆ:
ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಕೆಮ್ಮಿಂಜೆ ಮತ್ತು ಶ್ರೀ ಮಹಾವಿಷ್ಣು ಭಜನಾ ಮಂಡಳಿ ಪಾಲಿಂಜೆ ಇವರಿಂದ ಭಜನಾ ಕಾರ‍್ಯಕ್ರಮ ನಡೆಯಿತು.ಸಮಿತಿ ಕಾರ್ಯದರ್ಶಿ ರೇಖನಾಥ ರೈ ನೆರವೇರಿಸಿದರು.ಅಧ್ಯಕ್ಷ ಶಂಕರನಾರಾಯಣ ರಾವ್ ಭಜನಾ ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಿದರು.ವೇದಮೂರ್ತಿ ಶಿಬರ ಶ್ರೀವತ್ಸ ಕೆದಿಲಾಯ ಇವರ ನೇತೃತ್ವದಲ್ಲಿ ಸಂಜೆ ೫ರಿಂದ ಸಾರ್ವಜನಿಕ ಶ್ರೀ ಸಿದ್ದಿವಿನಾಯಕ ವೃತ ಪೂಜೆ ನಡೆದು, ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.ನಂತರ ಭಕ್ತಾಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಸುಮಾರು ೪೦೦ ಮನೆಯವರು ಪೂಜಾ ರಶೀದಿ ಮಾಡಿಸಿದ್ದರು.ಕೊನೆಗೆ ಪುತ್ತಿಲ ಪರಿವಾರದ ಪ್ರಕಾಶ್ ಪೂಜಾರಿ ಶಿಬರ ಇವರ ನಾಯಕತ್ವದೊಂದಿಗೆ, ರೋಹಿತ್ ಕೊಟ್ಯಾನ್ ಶಿಬರ ಇವರ ನಿರ್ಮಾಣದ “ಬಂಗಾರ್ ಕಲಾವಿದೆರ್’ ಪುರುಷರಕಟ್ಟೆ ಇವರಿಂದ ತುಳು ನಾಟಕ‘ಕುಡ ಒಂಜಾಕ’ಪ್ರದರ್ಶನಗೊಂಡಿತು.