ಇಚಿಲಂಪಾಡಿ: ಶೆಡ್ಡಲ್ಲಿದ್ದ ಬೈಕ್ ಕಳವು

0

ಪುತ್ತೂರು: ಇಚಿಲಂಪಾಡಿ ನಿವಾಸಿ ಜಯರಾಜ ಕೆ.ಎಂಬವರ ಬೈಕ್ ಕಳವಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಕೆ.ಎ.21:ಇ-6763ನೇ ನೋಂದಣಿಯ, ಅಂದಾಜು 20 ಸಾವಿರ ರೂ. ಮೌಲ್ಯದ ಯಮಹ ಆರ್ ಎಕ್ಸ್ ಜಿ-135 ದ್ವಿ ಚಕ್ರ ವಾಹನವನ್ನು ಅವರು ದ.21ರಂದು ರಾತ್ರಿ ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ತನ್ನ ಮನೆಯ ಶೆಡ್ಡಿನಲ್ಲಿ ಇಟ್ಟಿದ್ದರು.ದ.22ರಂದು ಬೆಳಿಗ್ಗೆ ನೋಡಿದಾಗ ಬೈಕ್ ನಾಪತ್ತೆಯಾಗಿರುವುದಾಗಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here