ಪುತ್ತೂರು: ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಮಳೆನೀರು ಕೊಯ್ಲು, ಬೋರ್‌ವೆಲ್ ನೀರಿನ ಇಳುವರಿ ಪರೀಕ್ಷೆ, ವಿಶ್ಲೇಷಣೆ, ನಿರ್ವಹಣೆ, ನೀರಿನ ಗುಣಮಟ್ಟ, ನಮ್ಮ ಕುಡಿಯುವ ನೀರಿನ ಪರೀಕ್ಷೆ, ಮಾಹಿತಿ ಮತ್ತು ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಇಲಾಖೆಗಳ ಸಚಿವಾಲಯ(MSME)ದ ಅಡಿಯಲ್ಲಿ ನಡೆಯುತ್ತಿರುವ ಸುದ್ದಿ ಅರಿವು ಕೃಷಿ ಕೇಂದ್ರದಿಂದ ಮಳೆನೀರು ಕೊಯ್ಲು, ಬೋರ್‌ವೆಲ್ ನೀರಿನ ಇಳುವರಿ, ZED ಪ್ರಮಾಣಪತ್ರದ ಮಾಹಿತಿ ಕಾರ್ಯಾಗಾರ ಪ್ರಮಾಣಪತ್ರದ ಮಾಹಿತಿ ಕಾರ್ಯಾಗಾರ ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನ ಅರಿವು ಕೃಷಿ ಕೇಂದ್ರದಲ್ಲಿ ನಡೆಯಿತು. ಮಂಗಳೂರಿನ ಜೆ.ಕೆ.ಎಸೊಸಿಯೇಟ್ಸ್ ಸಂಸ್ಥೆಯ ಮಾಲಕ ಜಯಂತ್‌ರವರು ಮಳೆನೀರು ಕೊಯ್ಲು, ಬೋರ್‌ವೆಲ್ ನೀರಿನ ಇಳುವರಿ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು. ಗ್ಲೋಬಲ್ ಇನ್‌ಸ್ಟಿಟ್ಯೂಟ್ ಫಾರ್ ಎಜುಕೇಶನ್ ಆಂಡ್ ರೀಸರ್ಚ್ ಫೌಂಡೇಶನ್‌ನ ಆಶಿಷ್‌ರವರು ಸುದ್ದಿ ಅರಿವು ಕೃಷಿ ಕೇಂದ್ರದಿಂದ ಮಳೆನೀರು ಕೊಯ್ಲು, ಬೋರ್‌ವೆಲ್ ನೀರಿನ ಇಳುವರಿ, ZED ಪ್ರಮಾಣಪತ್ರದ ಮಾಹಿತಿ ಕಾರ್ಯಾಗಾರ ಪ್ರಮಾಣಪತ್ರದ ಮಾಹಿತಿ ನೀಡಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಾಂಕ್, ಮಹಮ್ಮದ್ ಬೈತಡ್ಕ, ಸಂತೋಷ್ ಕುಮಾರ್, ದಿನೇಶ್ ಕುಲಾಲ್, ಅಣ್ಣಪ್ಪಯ್ಯ, ಸುದ್ದಿ ಪ್ರತಿನಿಧಿಗಳಾದ ತಿಲಕ್ ರೈ ಕುತ್ಯಾಡಿ, ಸುನಿಲ್ ಕಾವು, ಗಂಗಾಧರ್ ನಿಡ್ಪಳ್ಳಿ, ರಮೇಶ್ ಕೆಮ್ಮಾಯಿ, ಗೋಪಾಲಕೃಷ್ಣ ಸಂತೋಷ್‌ನಗರ, ಸಿ.ಶೇ.ಕಜೆಮಾರ್, ವಸಂತ್ ಪುಣಚ, ಸದಾಶಿವ ಶೆಟ್ಟಿ ಮಾರಂಗ, ಸುದ್ದಿ ಸಿಬಂದಿಗಳಾದ ರಾಜೇಶ್ ಎಂ.ಎಸ್., ಶಿವಕುಮಾರ್ ಈಶ್ವರಮಂಗಲ, ಪ್ರಶಾಂತ್ ಮಿತ್ತಡ್ಕ, ಪ್ರಜ್ವಲ್ ಪುತ್ತೂರು, ಕುಶಾಲಪ್ಪ ಅಗಳಿ, ಹೊನ್ನಪ್ಪ ಗೌಡ, ಹರಿಣಾಕ್ಷಿ, ಚೈತ್ರ, ರಕ್ಷಾ ಉಪಸ್ಥಿತರಿದ್ದರು.