ಡಿ.25: ಸವಿ ಎಲೆಕ್ಟ್ರಾನಿಕ್ಸ್, ಪ್ರಗತಿ ಎಲೆಕ್ಟ್ರಿಕಲ್ಸ್ ಮತ್ತು ಸವಿ ಫೂಟ್‌ವೇರ್ ಮಳಿಗೆಗಳ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿರುವ ಮಾಲಿಕ್ ದಿನಾರ್ ಕಾಂಪ್ಲೆಕ್ಸ್‌ನಲ್ಲಿ ಸವಿ ಎಲೆಕ್ಟ್ರಾನಿಕ್ಸ್, ಸವಿ ಫೂಟ್‌ವೇರ್ ಹಾಗೂ ಪ್ರಗತಿ ಎಲೆಕ್ಟ್ರಿಕಲ್ಸ್ ಮತ್ತು ರೆಫ್ರಿಜರೇಷನ್‌ಗಳ ಮಳಿಗೆಯು ಡಿ.25ರಂದು ಬೆಳಗ್ಗೆ 9ಕ್ಕೆ ಶುಭಾರಂಭಗೊಳ್ಳಿದೆ.
ಸವಿ ಎಲೆಕ್ಟ್ರಾನಿಕ್ಸ್‌ನಲ್ಲಿ ಪಿಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳು ಲಭ್ಯವಿದ್ದು, ಸವಿ ಫೂಟ್‌ವೇರ್‌ನಲ್ಲಿ ಪಾದರಕ್ಷೆಗಳ ಬೃಹತ್ ಸಂಗ್ರಹವಿದೆ. ಪ್ರಗತಿ ಎಲೆಕ್ಟ್ರಿಕಲ್ಸ್‌ನಲ್ಲಿ ಎಲೆಕ್ಟ್ರಿಕಲ್ಸ್ ಮತ್ತು ರೆಫ್ರಿಜರೇಷನ್‌ಗಳ ಮಾರಾಟ ಮತ್ತು ಸೇವೆಗಳು ಲಭ್ಯವಿದೆ. ಈ ಮೂರು ಮಳಿಗೆಗಳು ಒಂದೇ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದ್ದು, ಗ್ರಾಹಕರಿಗೆ ಅನುಕೂಲಕರವಾಗಲಿದೆ. ಶುಭಾರಂಭದ ಅಂಗವಾಗಿ ಡಿ.25ರಿಂದ ಜ.14ರವರೆಗೆ ಮಳಿಗೆಗೆ ಭೇಟಿ ನೀಡುವವರಿಗೆ ಉಚಿತ ಲಕ್ಕಿ ಕೂಪನ್ ಲಭ್ಯವಿದ್ದು, ಆಕರ್ಷಕ ಬಹುಮಾನವಾಗಿ 50 ಇಂಚಿನ ಎಲ್‌ಇಡಿ ಟಿವಿಯನ್ನು ಗೆಲ್ಲುವ ಸುವರ್ಣಾವಕಾಶವಿದೆ. ಇದರ ಡ್ರಾವನ್ನು ಜ.14ರಂದು ಸಂಜೆ 6:30ಕ್ಕೆ ನೆರವೇರಿಸಲಾಗುವುದು ಎಂದು ಸಂಸ್ಥೆಗಳ ಮಾಲಕರಾದ ನವೀನ್ ಕುಮಾರ್ ಆರ್.ಎಸ್., ರಾಘವ ಬೊಳೊಳಿ, ಬಾಲಕೃಷ್ಣ ಗೌಡ ಎಂ. ಹಾಗೂ ಜಯಪ್ರಕಾಶ್ ಕಳುವಾಜೆ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here