ಪೆರಾಬೆ: ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆಯ ವಾರ್ಷಿಕ ಮಹಾಸಭೆಯು ಕುಂತೂರು ಹೆಚ್.ಐ. ಮದ್ರಸ ಹಾಲ್‌ನಲ್ಲಿ ಆರ್.ಪಿ.ಯಾಗಿ ಆಗಮಿಸಿದ ಅಬ್ದುಲ್ ರಝಾಕ್ ರವುತಾರ್ ಕೊಡಿಂಬಾಳ ಹಾಗೂ ಕಡಬ ವಲಯ ಕಾರ್ಯದರ್ಶಿ ಖಲಿಮುಲ್ಲ ಇವರ ನೇತೃತ್ವದಲ್ಲಿ ನಡೆಯಿತು.
ಶಾಖೆಯ ಕಾರ್ಯದರ್ಶಿ ಸಿದ್ದೀಕ್ ಯಮಾನಿ ಸ್ವಾಗತಿಸಿದರು. ನಂತರ ಗತ ವರ್ಷದ ವರದಿ ಮತ್ತು ಜಮಾ ಖರ್ಚು ವೆಚ್ಚಗಳನ್ನು ಸಬೆಗೆ ಓದಿ ಹೇಳಲಾಯಿತು. ಸಭೆಯಲ್ಲಿ ಕುಂತೂರು ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಹಸೈನಾರ್ ಹಾಜಿ, ಜಮಾ ಹತ್ ಮುದರ್ರಿಸ್ ಅಲ್‌ಹಾಜ್ ಮೊಯಿದು ಫೈಝಿ, ಹೆಚ್.ಐ. ಮದ್ರಸ ಸದರ್ ಹಾಜಿ ಎಂ.ಎ ಹನೀಫ್ ಮುಸ್ಲಿಯಾರ್, ಅಶ್ರಫ್ ಶೇಡಿಗುಂಡಿ, ರಹಿಮಾನ್ ಕಡಬ, ಆದಂ ಕಳಾರ, ಕೋಚಕಟ್ಟೆ ಮದ್ರಸ ಅಧ್ಯಕ್ಷರಾದ ಬಶೀರ್ ಕೆ.ಪಿ, ಕುಂತೂರು ಮಸೀದಿ ಕಾರ್ಯದರ್ಶಿ ಯಾಕೂಬ್ ಕೆ, ಅಶ್ರಫ್ ಮುಸ್ಲಿಯಾರ್ ಕೋಲ್ಪೆ, ದಶ ವಾರ್ಷಿಕ ಸಮಿತಿ ಚೇರ್ಮನ್ ಬಶೀರ್ ಮಶ್ರೀಕ್, ಸಲಹೆಗಾರರಾದ ಇಸ್ಮಾಯಿಲ್ ಅಲ್ ಅಮೀನ್, ಷರೀಫ್ ಮಶ್ರಿಕ್ ಉಪಸ್ಥಿತರಿದ್ದರು.
ಸಮಿತಿ ರಚನೆ:
ಸಭೆಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆಯ ೨೦೨೪-೨೫ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಆಲಿ ಕೋಚಕಟ್ಟೆ ಅವರು ಸತತ 4ನೇ ಬಾರಿಗೆ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಅಬ್ದುಲ್ಲಾ ಅಲ್ ಕೌಸರ್, ಹನೀಫ್ ದಾರಿಮಿ, ಕಾರ್ಯದರ್ಶಿಯಾಗಿ ಆಸೀಫ್ ಫೈಝಿ ಅನ್ನಡ್ಕ, ವರ್ಕಿಂಗ್ ಕಾರ್ಯದರ್ಶಿಯಾಗಿ ಆಶೀರ್ ಕೆ.ಎ., ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಎಂ., ತೌಸೀಫ್ ಪೂಂಜ, ಕೋಶಾಧಿಕಾರಿಯಾಗಿ ಅಬ್ಬಾಸ್ ಮಕ್ಬೂಲ್, ಸದಸ್ಯರಾಗಿ ಸಿದ್ದೀಕ್ ಯಮಾನಿ, ಹಾರೀಸ್ ಫೈಝಿ, ಅಫ್ತಾಝ್ ಕೋಚಕಟ್ಟೆ, ಮಿಸ್ಬಾಹ್, ಸಿದ್ದೀಕ್ ಅಲ್ ಅಮೀನ್, ಸಿನಾನ್, ಬದ್ರುದ್ದೀನ್ ಮಕ್ಬೂಲ್, ಕ್ಲಸ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಫಯಾಝ್ ಅಝ್ಹರಿ, ನಾಸೀರ್ ಫೈಝಿ, ಹನೀಫ್ ದಾರಿಮಿ, ಹಾರೀಸ್ ಫೈಝಿ, ಸಿದ್ದೀಕ್ ಯಮಾನಿ, ಮಿಸ್ಬಾಹ್, ಮುಬಶೀರ್, ಮುಸ್ತಫ ಎರ್ಮಾಲ, ಶಮೀರ್, ಸಿಯಾಕ್, ಝುಬೈರ್, ಆಫ್ತಾಝ್ ಕೆ.ಎ.ಬದ್ರುದ್ದೀನ್ ಮಕ್ಬೂಲ್ ಆಯ್ಕೆಗೊಂಡಿದ್ದಾರೆ.