ಮುಂಡೂರು: ಪಜಿಮಣ್ಣು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

0

ಪುತ್ತೂರು: ಮುಂಡೂರು ಗ್ರಾಮದ ಪಜಿಮಣ್ಣು ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ಡಿ.23ರಂದು ನಡೆಯಿತು.
ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ, ಮುಂಡೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿಜಯಾ, ಮುಂಡೂರು ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು, ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ, ಸಮುದಾಯಾಧಾರಿತ ಸಿಬ್ಬಂದಿ ಸುಚೇತ, ಆಶಾ ಕಾರ್ಯಕರ್ತೆಯರಾದ ಪ್ರಮೀಳಾ ಮತ್ತು ಹೇಮಲತಾ ಉಪಸ್ಥಿತರಿದ್ದರು.
ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ಮತ್ತಿತರರು ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ವತಿಯಿಂದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಪಜಿಮಣ್ಣು ಅಂಗನವಾಡಿ ಕೇಂದ್ರದ ಶಿಕ್ಷಕಿ ಧನ್ಯಶ್ರೀ ಸ್ವಾಗತಿಸಿದರು. ಸಹಾಯಕಿ ಶಾಲಿನಿ ಸಹಕರಿಸಿದರು.

LEAVE A REPLY

Please enter your comment!
Please enter your name here