ಪುತ್ತೂರು: ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಡಿ. 25 ರಂದು ಚರ್ಚ್ ವಠಾರದಲ್ಲಿ “ಬಂದುತ್ವ ಕ್ರಿಸ್ಮಸ್” ಸಂಬ್ರಮ ಬಹಳ ಅದ್ದೂರಿಯಾಗಿ ನೆರವೇರಿತು.ಧರ್ಮಧ್ಯಾಕ್ಷರು – ಪುತ್ತೂರು ಧರ್ಮಪ್ರಾಂತ್ಯದ ಡಾ. ಗೀವರ್ಗಿಸ್ ಮಾರ್ ಮಕ್ಕಾರಿಯೋಸ್ ಆಶೀರ್ವಚನ ನೀಡಿದರು.ಶಾಸಕ ಅಶೋಕ್ ರೈ ಮಾತನಾಡಿ ನಾವೆಲ್ಲರೂ ಮಾನವ ಮೌಲ್ಯಗಳ ಪಾಲನೆ ಮಾಡೋಣ. ಮನುಷ್ಯರ ನಡುವೆ ಗೋಡೆ ಕಟ್ಟುವ ಕೆಲಸವನ್ನು ಮಾಡದೆ ಅಂತಹ ಗೋಡೆಗಳನ್ನು ಕೆಡವಿ ಪ್ರೀತಿಯನ್ನು ಪಸರಿಸುವ ಕೈಸ್ತರು ಶಾಂತಿ ಪ್ರಿಯರು ವಿದ್ಯಾ ಸೇವೆಯಲ್ಲಿ, ನಿಜವಾದ ಧರ್ಮವೇ ಕಷ್ಟದಲ್ಲಿ ಇರುವ ಜನರ ಕಣ್ಣಿರು ಒರೆಸುವುದು.ಆರೋಗ್ಯ ಸೇವೆಯಲ್ಲಿ ಅವರ ಕೊಡುಗೆ ಅಪಾರ ಎಂದರು.
ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ಟಾ , ಕಾರ್ಯದರ್ಶಿ ಎವ್ಲಿ ನ್ ಡಿಸೋಜ, ಜಾನ್ ಡಿ ಸೋಜ, ಸಂಯೋಜಕರು – 20 ಆಯೋಗಗಳು , ಚರ್ಚ್ ಪಾಲನಾ ಪರಿಷತ್ ಸದಸ್ಯರು, ಧರ್ಮಭಗಿನಿಯರು, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಪುತ್ತೂರು ನಗರಸಭೆಯ ಪೌರ ಆಯುಕ್ತ ಮಧು ಮನೋಹರ್,ಪುತ್ತೂರು ನಗರ ಪೊಲೀಸ್ ಠಾಣೆಯ ಸುನಿಲ್ ಕುಮಾರ್, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು,ಉಪ್ಪಿನoಗಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ ಸುಬ್ಬಪ್ಪ ಕೈಕಂಬ,ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ. ವಿಜಯ್ ಹಾರ್ವಿನ್, ಉಪಸ್ಥಿತರಿದ್ದರು.
ಪ್ರದಾನ ಧರ್ಮಗುರು ವಂದನೀಯ ಲಾರೆನ್ಸ್ ಮಸ್ಕರೇನಸ್ ಸ್ವಾಗತಿಸಿ,ಸಹಾಯಕ ಧರ್ಮಗುರು ವಂದನೀಯ ಅಜಯ್ ಲೋಹಿತ್ ಮಸ್ಕರೇನಸ್ , ಧರ್ಮಗುರು
ವಂದನೀಯ ಸ್ಟ್ಯಾನಿ ಪಿಂಟೋ, ವಂದನೀಯ ರೂಪೇಶ್ ತಾವ್ರೋ,ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ಜೆರಾಲ್ಡ್ ಡಿ ಕೋಸ್ಟಾ ಅವರು ವಂದಿಸಿದರು, ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಕ್ರಿಸ್ಮಸ್ ಸಂದೇಶ ಸಾರುವ ಆಕರ್ಷಕ ಹಾಡುಗಳು, ನೃತ್ಯ, ರೂಪಕ, ಭರತ ನಾಟ್ಯ ಹಾಗೂ ಯಕ್ಷಗಾನವನ್ನು ಪ್ರಸ್ತುತಪಡಿಸಲಾಯಿತು.