





ಪುತ್ತೂರು:ದ.ಕ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬನ್ನೂರು ಗ್ರಾಮ ಪಂಚಾಯತ್ ಹಾಗೂ ಪಡ್ನೂರು ಪಳ್ಳ ಅಂಗನವಾಡಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಬಾಲಮೇಳ ಹಾಗೂ ವಾರ್ಷಿಕೋತ್ಸವವು ಡಿ.22ರಂದು ಪಳ್ಳ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.


ಬನ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ಕುಲಾಲ್ ಹಾಗೂ ಅಂಗನವಾಡಿ ಪುಟಾಣಿಗಳು ದೀಪ ಬೆಳಗಿಸಿ ಕಾರ್ಯಕ್ರಮನ್ನು ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರಾದ ರಮಣಿ ಡಿ ಗಾಣಿಗ, ಗೀತಾ ಕೊಡಂಗೆ, ಗಣೇಶ್ ಪಳ್ಳ, ಗಿರಿಧರ ಪಂಜಿಗುಡ್ಡೆ, ವಿಮಲ ಪಡ್ನೂರು, ಬಾಲವಿಕಾಸ ಸಮಿತಿ ಅಧ್ಯಕ್ಷೆ ರಮ್ಯ ಕುಮಾರಿ, ಪಡ್ನೂರು ಸಮುದಾಯ ಆರೋಗ್ಯಾಧಿಕಾರಿ ಸೌಮ್ಯ, ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಬಾಲಕೃಷ್ಣ ಜೋಯಿಷ ಯರ್ಮುಂಜ, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ವನಿತಾ ಸ್ವಾಗತಿಸಿದರು. ಪೂವಪ್ಪ ದೇಂತಡ್ಕ ಕಾರ್ಯಕ್ರಮ ನಿರೂಪಿಸಿ, ಸಾವಿತ್ರಿ ಕೊಡಂಗೆ ವಂದಿಸಿದರು. ಸಹಾಯಕಿ ಗೀತಾ ಸಹಕರಿಸಿದರು.













