ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ:ತೆಂಕಿಲ ವಿವೇಕಾನಂದ ಆ. ಮಾ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

0

ಪುತ್ತೂರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಹಯೋಗದೊಂದಿಗೆ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಉಜಿರೆಯಲ್ಲಿ  ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ National Children’s Science Congress) ನಡೆದಿದ್ದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 2 ತಂಡಗಳು ಭಾಗವಹಿಸಿದ್ದು ಸೀನಿಯರ್ ವಿಭಾಗದಲ್ಲಿ 9ನೇ ತರಗತಿಯ ಅಭಿನವ್ ಆಚಾರ್ ಕೆ ಹಾಗೂ ಶ್ರೀಜಿತ್ ಸಿ.ಎಚ್ ಅವರ ತಂಡ Areca Fibre briquettes as alternate source of energy ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿ ಪ್ರಥಮ ಬಹುಮಾನ ಗಳಿಸಿರುತ್ತಾರೆ. 

ಜೂನಿಯರ್ ವಿಭಾಗದಲ್ಲಿ ಸುಪ್ರಜಾ ರಾವ್ , ಹಾಗೂ ಸಾನ್ವಿ ಎಸ್ ಪ್ರಭು , ಅವರ ತಂಡ “Narikela the healing” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿ ದ್ವಿತೀಯ ಬಹುಮಾನ ಗಳಿಸಿರುತ್ತಾರೆ. ಎರಡು ತಂಡಗಳ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಕೊಪ್ಪಳದಲ್ಲಿ ಜನವರಿ ತಿಂಗಳ ಮೊದಲ ವಾರ ನಡೆಯಲಿರುವ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here