ಡಿ.29: ಸಂಜಯನಗರ ಶಾಲಾ ದಿನಾಚರಣೆ “ನನ್ನ ಪ್ರತಿಭೆ”

0

ಪುತ್ತೂರು: ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ದಿನಾಚರಣೆ “ನನ್ನ ಪ್ರತಿಭೆ” ದ.29ರಂದು ಸಂಜೆ 5 ರಿಂದ 10ರ ತನಕ ನಡೆಯಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ರೇ. ವಿಜಯ ಹರ್ವಿನ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಚೈತ್ರ ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್ಸ್‌ರವರು ಶಾಲಾ ಹಸ್ತಪ್ರತಿ “ಸಂಜೆಯ ನಗು”ವನ್ನು ಬಿಡುಗಡೆ ಮಾಡಲಿದ್ದಾರೆ. ಶಾಲಾ ವಿಶೇಷ ಸಂಚಿಕೆ “ಸಂಜಯ ನಗಾರಿ”ಯನ್ನು ಬಿಡುಗಡೆ ಮಾಡಲಿದ್ದು ಪುತ್ತೂರು ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಚಂದ್ರರವರು ಬಹುಮಾನ ವಿತರಣೆ ಮಾಡಲಿದ್ದಾರೆ
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್‌ಆರ್., ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ವಿಷ್ಣು ಪ್ರಸಾದ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ವೇಗಸ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಾಲಾ ಸ್ಥಾಪಕ ಅಧ್ಯಕ್ಷ ಮಹಮದಾಲಿ, ಕೆಮ್ಮಿಂಜೆ ಷಣ್ಮುಖ ಸದಾಶಿವ ದೇವಸ್ಥಾನದ ಮಾಜಿ ಆಡಳಿತ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್. ಪುತ್ತೂರು ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ರಾಮಚಂದ್ರ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿನಿ ಬಿಸಿಎ ಪ್ರಥಮ ರಾಂಕ್ ಪುರಸ್ಕೃತ ಫಾತಿಮಾ ತಾನದ ಪದವಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾದ ಫಾತಿಮಾತ್ ಸಾನಿದ ಶ್ವೇತ ದಿವ್ಯ ಯಶ್ವಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾದ ವಹಿದಾ ಬಾನು ದೀಪ್ತಿ ಅಶ್ವಿತಾ ವಂದನರವರಿಗೆ ಶಾಲಾ ವತಿಯಿಂದ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ನಂತರ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ಸಿಸಿಲಿಯ ವಿನ್ಸೆಂಟ್ ಮತ್ತು ಸುನಿಲ ಜಗನ್ನಾಥ್‌ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ವಿವಿಧ ರೀತಿಯ ನೃತ್ಯಗಳು ನಲಿಕಲಿ ಮಕ್ಕಳಿಂದ ನಾವೆಲ್ಲ ಸಮಾನ ಕಿರು ನಾಟಕ, ಚೈತನ್ಯ ಮಕ್ಕಳಿಂದ ಗೋಕುಲ್ ನಿರ್ಗಮನ ಎಂಬ ಸಂಗೀತ ನಾಟಕ ನಡೆಯಲಿದೆ. ವಿಶೇಷ ಕಾರ್ಯಕ್ರಮವಾಗಿ ಪುತ್ತೂರು ತಾಲೂಕಿನ ಶಿಕ್ಷಕರ ಬಳಗದಿಂದ ಭಾರ್ಗವ ವಿಜಯ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಶಲಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಚೈತ್ರ ಮನೋಜ್ ಕುಮಾರ್ ಶಾಲಾ ದಿನಾಚರಣೆ ಸಮಿತಿಯ ಅಧ್ಯಕ್ಷ ರಾಜೇಶ್ ಬೀರಮಲೆ, ಕಾರ್ಯದರ್ಶಿಗಳಾದ ಲತಾ ಆನಂದ ಪೂಜಾರಿ ಮುಖ್ಯಗುರುಗಳಾದ ರಮೇಶ್ ಉಳಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here