ಪಾಣಾಜೆ ಸಮೃದ್ಧಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

0

ಪುತ್ತೂರು: ಪಾಣಾಜೆ ಸಮೃದ್ಧಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಇದರ 2022-2023 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಪಾಣಾಜೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಮತ್ತು ಒಕ್ಕೂಟದ ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಒಕ್ಕೂಟದ ಕಾರ್ಯದರ್ಶಿ ಲತಾ ವಾರ್ಷಿಕ ವರದಿ ಮಂಡಿಸಿದರು. ಲೆಕ್ಕಾ ಪರಿಶೋಧನೆಯ ವರದಿಯನ್ನು ಕೋಶಾಧಿಕಾರಿ ಸವಿತಾ ಮಂಡಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಸಭೆಯನ್ನು ಉದ್ದೇಶಿಸಿ NRLM ಯೋಜನೆ, ಮಹಿಳೆಯರಿಗೆ ಸ್ವ -ಉದ್ಯೋಗ, ಒಕ್ಕೂಟ ಸಿಬ್ಬಂದಿಗಳ ಕಾರ್ಯ ವ್ಯೆಖರಿ ಮತ್ತು ಕೌಶಲ್ಯ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ನಳಿನಾಕ್ಷಿ ಮಾತನಾಡಿ ವಾರ್ಡ್ ಒಕ್ಕೂಟದ ಬಗ್ಗೆ ಗ್ರಾಮೀಣ ರೈತ ಸಂತೆಯ ಮಾರ್ಕೆಟಿಂಗ್ ಮತ್ತು ಬಿಸಿ ಸಖಿ. ಪಶು ಸಖಿ, ಕೃಷಿ ಸಖಿ ಅವರು ಕಾರ್ಯನಿರ್ವಸುತ್ತಿರುವ ಇಲಾಖೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ಪವಿತ್ರ ಸಮುದಾಯದ ಬಂಡವಾಳ, ಘನ ತ್ಯಾಜ್ಯ ಘಟಕ , ಘನ ತ್ಯಾಜ್ಯಾ ನಿರ್ವಾಕರ ಹಾಗೂ ಸಿಆರ್‌ ಪಿ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟ ದ ಸದಸ್ಯರು, ಉಪಸಮಿತಿಯ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು,ಎಮ್‌ ಬಿ ಕೆ, ಎಲ್‌ ಎಸ್‌ ಆರ್‌ ಪಿ, ಸಖಿಗಳು, ಎಫ್‌ ಎಲ್‌ ಎಸ್‌ ಆರ್‌ ಪಿ,ಸಂಘಗಳ ಪ್ರತಿನಿಧಿಗಳು, ಸಂಘಗಳ ಸದಸ್ಯರುಗಳು ಉಪಸ್ಥಿತರಿದ್ದರು.ಒಕ್ಕೂಟದ ಪದಾಧಿಕಾರಿ ಲಲಿತಾ ಪ್ರಾರ್ಥಿಸಿ,ಒಕ್ಕೂಟದ ಸದಸ್ಯೆ ಯಶೋದಾ ಸ್ವಾಗತಿಸಿ, ಲಲಿತಾ ನಿರೂಪಿಸಿ, ಯಶೋಧ ವಂದಿಸಿದರು.

LEAVE A REPLY

Please enter your comment!
Please enter your name here