ಬಿಜು ಪ್ರಿಯಾ ದಂಪತಿ ಮಾಲೀಕತ್ವದ ಸುಂದರ ಸಂಕೀರ್ಣದ ಉದ್ಘಾಟನೆ ನೆರವೇರಿಸಿ ಆಶೀರ್ವದಿಸಿದ ಧರ್ಮಗುರು ವಂ ಫಾ | ಜಾರ್ಜ್…
ಪುತ್ತೂರು : ದುಬೈಯ ಕೆಂಪಿನ್ ಸ್ಕಿ ಹೊಟೇಲ್ ಆ್ಯಂಡ್ ರೆಸಿಡೆನ್ಸಿ ಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವವಹಿಸುತ್ತಿರುವ ಇಲ್ಲಿನ ನೆಲ್ಯಾಡಿ ನಿವಾಸಿ ಬಿಜು ಪಿ.ಎ. , ಹಾಗೂ ದುಬೈ ನ ಮೊಸಿಕ್ ನರ್ಸರಿಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಿಯಾ ಪ್ಲೇವಿಯಾ ದಂಪತಿಗಳ ಮಾಲೀಕತ್ವದ ‘ ಮರಿಯಾ ಕೃಪಾ ಸಂಕೀರ್ಣ ಇದರ ಶುಭಾರಂಭವು ಅ.9 ರಂದು ಧಾರ್ಮಿಕ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡು , ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ಕೇರಳದ ಧರ್ಮಗುರುಗಳಾದ ವಂದನೀಯ ಫಾ | ಜಾರ್ಜ್ ಅಶಾರಿಕುನ್ನೆಲ್ ದೀಪ ಪ್ರಜ್ವಲನೆ ನೆರವೇರಿಸಿ, ಪವಿತ್ರ ಜಲವನ್ನು ಸಂಪ್ರೊಕ್ಷನೆ ಮಾಡಿದರು. ಬಳಿಕ ಆಶೀರ್ವಚನ ನೀಡಿ ಮಾತನಾಡಿದ ಅವರು , ನೆಲ್ಯಾಡಿಯಂತಹ ಪಟ್ಟಣಕ್ಕೆ ಸುಂದರವಾಗಿ ನಿರ್ಮಾಣಗೊಂಡಿರುವ ಮರಿಯಾ ಕೃಪಾ ಸಂಕೀರ್ಣವೊಂದು ಬಹು ದೊಡ್ಡ ಆಸ್ತಿಯಾಗಿದೆ. ಈ ಸುಂದರ ಸಂಕೀರ್ಣ ಅತ್ಯುತ್ತಮ ಮತ್ತು ಆತ್ಯಾಧುನಿಕ ಸೌಕರ್ಯಗಳನ್ನು ಒಳಗೂಡಿಸಿಕೊಂಡಿದ್ದು , ಬಿಜು ಪ್ರಿಯಾ ದಂಪತಿಗಳ ಕನಸಿನ ಯೋಜನೆಯೊಂದು ಸಂಪೂರ್ಣ ಸಕಾರಗೊಂಡಿದೆಯೆಂದು ಹೇಳಿ , ಹರಸಿದರು.

ವಂದನೀಯ ಫಾ| ಮ್ಯಾಥ್ಯೂ ವೆಟ್ಟುತಡಂ ಸಂಕೀರ್ಣ ಉದ್ಘಾಟನೆ ನೆರವೇರಿಸಿ , ಶುಭ ಹಾರೈಸಿದರು. ಈ ಶುಭವೇಳೆಯಲ್ಲಿ ನೆಲ್ಯಾಡಿ ಸೈಂಟ್ ಅಲ್ಪೊನ್ಸ ಚರ್ಚ್ ನ ವಿಕಾರ್ ಫಾ | ಮ್ಯಾಥ್ಯೂ ವೆಟ್ಟುವಡಂ , ಫಾ |ಹನಿ ಜೆಕಬ್ ಮತ್ತು ನೆಲ್ಯಾಡಿ ಎಸ್.ಎಚ್. ಕಾನ್ವೆಂಟ್ ನ ಭಗಿನಿಯರು , ನೆಲ್ಯಾಡಿಯ ನಂದನಂ ಕನ್ಸ್ಟ್ರಕ್ಷನ್ಸ್ ಮಾಲೀಕ ಸುರೇಶ್ ಕುಮಾರ್ , ನೆಲ್ಯಾಡಿಯ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಆ್ಯಂಡ್ ಕನ್ಸಲ್ಟಂಟ್ ಮಾಲೀಕ ಜಿನಿ ಜಕಬ್, ಬಿಜು ಪಿ.ಎ ಯವರ ಹೆತ್ತವರು ಅಬ್ರಾಹಂ ಪುಡುಮನ ಮತ್ತು ಮರಿಯಮ್ಮಾ ಅಬ್ರಾಹಂ ದಂಪತಿ , ಸಹೋದರ ಶಾಜಿ ಪಿ.ಎ , ಸಹೋದರಿಯರಾದ ರೆಜಿನಾ ಹಾಗೂ ರೀನಾ , ಪ್ರಿಯಾ ಪ್ಲೇವಿಯಾರವರ ಹೆತ್ತವರು ಪ್ಯಾಟ್ರಿಕ್ ತಾವ್ರೋ ಮತ್ತು ಲುಸನಾ ತಾವ್ರೋ ದಂಪತಿ , ಸಹೋದರ ಡಾ. ಪ್ರೀತಂ ತಾವ್ರೋ ಮತ್ತು ಸಹೋದರಿ ಪ್ರೀಮಾ ತಾವ್ರೋ ಸಹಿತ ಅನೇಕ ಅತಿಥಿಗಳು ಉಪಸ್ಥಿತರಿದ್ದರು. ಎಲ್ಲಾ ಅತಿಥಿಗಳನ್ನು ಬಿಜು ಪ್ರಿಯಾ ದಂಪತಿ ಸ್ವಾಗತಿಸಿ , ವಂದಿಸಿದರು.