ಲಲಿತ್ ಫ್ಯಾನ್ಸ್ & ವನ್ ಗ್ರಾಂ. ಗೋಲ್ಡ್ ನವೀಕೃತಗೊಂಡು ಶುಭಾರಂಭ

0

ಪುತ್ತೂರು: ಮುಖ್ಯರಸ್ತೆಯ ಧರ್ಮಸ್ಥಳ ಕಟ್ಟಡದಲ್ಲಿ ಕಳೆದ 33 ವರ್ಷಗಳಿಂದ ವ್ಯವಹರಿಸುತ್ತಿರುವ ಲಲಿತ್ ಫ್ಯಾನ್ಸಿ & ವನ್ ಗ್ರಾಂ. ಗೋಲ್ಡ್ ನವೀಕೃತಗೊಂಡು ಡಿ.29ರಂದು ಶುಭಾರಂಭಗೊಂಡಿತು.

ಮಳಿಗೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾನಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಮಳಿಗೆಗಳ ಆವಶ್ಯಕತೆಯಿದೆ. ಇಂತಹ ಉತ್ತಮ ಮಳಿಗೆಗಳ ಮೂಲಕ ಗ್ರಾಹಕರಿಗೆ ಪುತ್ತೂರಿನಲ್ಲಿಯೇ ಉತ್ತಮ ಸೇವೆ ದೊರೆಯಲಿದೆ. ಹೊಸ ಹೊಸ, ವಿನ್ಯಾಸದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಇಂತಹ ಮಳಿಗೆಗಳ ಅನಿವಾರ್ಯತೆಯಿದೆ. ಮಳಿಗೆಯ ಮೂಲಕ ಇನ್ನಷ್ಟು ಹೊಸತನಗಳು ಪುತ್ತೂರಿನ ಜನತೆಗೆ ದೊರೆಯುವಂತಾಗಲಿ ಎಂದರು.


ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಸುಧಾ ಎಸ್ ರಾವ್ ಮಾತನಾಡಿ, ವ್ಯವಹಾರದಲ್ಲಿ ಹೊಸ ಹೊಸ ಆವಿಷ್ಕಾರಗಳ ಆವಶ್ಯಕತೆಯಿದೆ. ಹೊಸತನಗಳ ಮೂಲಕ ವ್ಯವಹಾರದಲ್ಲಿ ಉನ್ನತ ಶ್ರೇಣಿಯನ್ನು ಪಡೆಯಬೇಕು ಎಂದರು.


ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ನ ಆಡಳತ ಪಾಲುದಾರೆ ರೂಪಲೇಖಾ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ, ನಗರ ಸಭಾ ನಿಟಕಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ಮಾತನಾಡಿ ಮಳಿಗೆಯ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ದೊರೆತು ಅಭಿವೃದ್ಧಿಯತ್ತ ಸಾಗಲಿ ಎಂದರು.
ಮ್ಹಾಲಕ ಇಂದುಶೇಖರ್ ಪಿ.ಬಿ ಸ್ವಾಗತಿಸಿ, ವಂದಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಪಾಲುದಾರ ಪೂರ್ಣಿಮಾ ಅತಿಥಿಗಳನ್ನು ಗೌರವಿಸಿದರು.
ಪುತ್ತೂರಿನ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಚುತ ನಾಯಕ್, ಕೊಕ್ಕೊಗುರುನ ಸಂತೋಷ್ ಬೋನಂತಾಯ, ಸುಳ್ಯ ಶಾರದಾ ಕಾಲೇಜಿನ ದಯಾಮಣಿ, ನ್ಯಾಯವಾದಿ ಶಿವಪ್ರಸಾದ್ ಇ., ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿಯ ಉಪಾಧ್ಯಕ್ಷ ಸುಭಾಶ್ಚಂದ್ರ, ಡಾ. ಯಾದವಿ, ಜಯ ಕುಮಾರ್, ನಿವೃತ್ತ ಬ್ಯಾಂಕ್ ಅಧಿಕಾರಿ ಜಗದೀಶ್ ನಾಯಕ್, ಎಚ್.ಉದಯ ಕುಮಾರ್, ಮಂಗಳಾ ಎಂಟರ್‌ಪ್ರೈಸಸ್ ಮ್ಹಾಲಕಿ ಮಹಾಲಕ್ಷ್ಮೀ, ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಶಾಲಾ ಸಂಚಾಲಕ ಭರತ್ ಪೈ, ಉದ್ಯಮಿ ವಿಶ್ವಪ್ರಸಾದ್ ಸೇಡಿಯಾಪು, ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.
ಹವಾನಿಯಂತ್ರಿತ ಮಳಿಗೆಯಾಗಿರುವ ನಮ್ಮ ಸಂಸ್ಥೆಯಲ್ಲಿ ವನ್ ಗ್ರಾಮ್ ಗೋಲ್ಡ್ ಎಲ್ಲಾ ನವನವೀನ ಮಾದರಿಯ ಆಕರ್ಷಕ ಆಭರಣಗಳು, ಫ್ಯಾನ್ಸಿ, ಬ್ಯಾಗ್ ಹಾಗೂ ಬೆಲ್ಟ್‌ಗಳು ಲಭ್ಯವಿದೆ ಎಂದು ಸಂಸ್ಥೆಯ ಮ್ಹಾಲಕ ಇಂದುಶೇಖರ್ ಪಿ.ಬಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here