ಪುಣಚ: ಪುಣಚ ದಲ್ಕಾಜೆಗುತ್ತು ಶ್ರೀ ಜಠಾಧಾರಿ, ಮಲರಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಡಿ.28 ರಿಂದ ಡಿ.30ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು ಡಿ- 28ರಂದು ಬೆಳಿಗ್ಗೆ ವೇದಮೂರ್ತಿ ದಿನೇಶ ಮರಡಿತ್ತಾಯರವರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ, ನಾಗತಂಬಿಲ, ವೆಂಕಟರಮಣ ದೇವರ ಹರಿಸೇವೆ ನಡೆದು ಮಧ್ಯಾಹ್ನ ಸಮಾರಾಧನೆ ನಡೆಯಿತು. ಸಾಯಂಕಾಲ ರಕ್ತೇಶ್ವರಿ ದೈವದ ಭಂಡಾರ ತೆಗೆದು, ರಾತ್ರಿ ಪುದುಕೋಲ ಕಾಡೆತ್ತಿ ಭೂತ, ಸಮಾರಾಧನೆ ನಡೆಯಿತು. ಬಳಿಕ ಶ್ರೀ ಜಠಾಧಾರಿ ದೈವದ ಮಹಿಮೆ, ರಕ್ತೇಶ್ವರಿ ದೈವದ ನೇಮ, ಗುಳಿಗ ದೈವದ ನೇಮ, ಧೂಮಾವತಿ ದೈವದ ನೇಮ ನಡೆಯಿತು.
ಧರ್ಮ ದೈವ ಶ್ರೀ ಮಲರಾಯ ದೈವದ ನೇಮೋತ್ಸವ” :
ಇಂದು ಡಿ- 29ರಂದು ಬೆಳಿಗ್ಗೆ ಕುಟುಂಬದ ಧರ್ಮ ದೈವ ಶ್ರೀ ಮಲರಾಯ ದೈವದ ನರ್ತನಾದಿ ಉತ್ಸವ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಸಮಾರಾಧನೆ ನಡೆಯಿತು. ದಲ್ಕಾಜೆಗುತ್ತು ಕುಟುಂಬಸ್ಥರು, ಬಂಧುಗಳು, ಮಿತ್ರರು, ಅತಿಥಿಗಳು, ಗಣ್ಯರು, ಗ್ರಾಮಸ್ಥರು ಪಾಲ್ಗೊಂಡರು.
ಸಾಯಂಕಾಲ ಪೊಟ್ಟ ಪಂಜುರ್ಲಿ ನೇಮ, ಅಂಗಾರಕ್ಕುಡ ನೇಮ, ಸತ್ಯ ದೇವತೆ ನೇಮ, ರಾತ್ರಿ ಉಟೋಪಚಾರ ನಡೆದು ಬಳಿಕ ಪಂಜುರ್ಲಿ ದೈವದ ನೇಮ ಹಾಗೂ ಸೂರ್ಯೋದಯದ ತನಕ ಉಪ ದೈವಗಳಿಗೆ ನೇಮೊತ್ಸವ ನಡೆಯಲಿದೆ.