ಪುತ್ತೂರು: ಪುತ್ತೂರು ನಗರವನ್ನು ಆಧುನೀಕರಣದ ಜೊತೆಗೆ ಸುಂದರ ಮತ್ತು ಸ್ವಚ್ಛ ನಗರವನ್ನಾಗಿಸುವಲ್ಲಿ ವಸತಿ ಬಡಾವಣೆಗಳ ಪಾಲು ಬಹು ದೊಡ್ಡದು. ನಗರಸಭೆಯ ನಿರ್ಮಾಣ ನಿಯಮಗಳನ್ನು ಅನುಷ್ಠಾನಗೊಳಿಸಿಕೊಂಡು ಅತ್ಯಂತ ವ್ಯವಸ್ಥಿತ ಮತ್ತು ಸುಂದರ ಬಡಾವಣೆ ನಿರ್ಮಿಸುವಲ್ಲಿ ಪುತ್ತೂರಿನ ಪ್ರತಿಷ್ಠಿತ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ಸಂಸ್ಥೆಯಾದ ಯು.ಆರ್. ಪ್ರಾಪರ್ಟೀಸ್ ತನ್ನ ವಿಭಿನ್ನ ಕಾರ್ಯಶೈಲಿ ಹೊಂದಿದೆ. ಸಂಸ್ಥೆಯ ನೂತನ ವಸತಿ ಬಡಾವಣೆ ʻಶ್ರೀಮಾ ಹಿಲ್ಸ್ʼ ಬಪ್ಪಳಿಗೆಯ ಪ್ರಕೃತಿ ರಮಣೀಯ ಪರಿಸರದಲ್ಲಿ ಹೆಸರಿಗೆ ತಕ್ಕಂತೆ ಬೆಟ್ಟದ ಇಳಿಜಾರಿನ ನಯನಮನೋಹರವೂ ಆದ ತಾಣದಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿದೆ.
ಮಾದರಿ ಬಡಾವಣೆ
ಪುತ್ತೂರಿನಲ್ಲಿ ವಸತಿ ಬಡಾವಣೆಗಳಿಗೆ ಅವಕಾಶಗಳಿವೆ. ನಗರವು ವಿಸ್ತರಣೆಗೊಳ್ಳುತ್ತಿವೆ. ಈ ಮೂಲಕ ವಸತಿ ಪ್ರದೇಶಗಳು ಹೆಚ್ಚಾಗುತ್ತಲೇ ಇವೆ. ಇದನ್ನು ಮನಗಂಡ ಪುತ್ತೂರಿನ ಪ್ರಖ್ಯಾತ ಸಂಸ್ಥೆ ಯು.ಆರ್. ಪ್ರಾಪರ್ಟಿಸ್ ಮಾರ್ಗದರ್ಶನದಲ್ಲಿ ಮಹಿಳಾ ಉದ್ಯಮಿ ರಕ್ಷಾ ಎಸ್.ಆರ್. ಮಾಲಕತ್ವದಲ್ಲಿ ಸಕಲ ಸೌಲಭ್ಯಗಳನ್ನೊಳಗೊಂಡ ನಗರ ಸಭೆಯ ನಿಯಮಾವಳಿಯಂತೆ, ಯೋಜನಾ ಪ್ರಾಧಿಕಾರದ ನಿಯಮಾವಳಿಯಂತೆ ಶ್ರೀಮಾಹಿಲ್ಸ್ ಬಡಾವಣೆ ಸಿದ್ಧಗೊಂಡಿದೆ. ಪುತ್ತೂರು ನಗರದಲ್ಲೊಂದು ವಸತಿ ನಗರವಾಗಿ ಶ್ರೀಮಾಹಿಲ್ಸ್ ರೂಪುಗೊಂಡಿದೆ.
ಬಹುವಿನ್ಯಾಸ ನಕ್ಷೆಯ ಬಡಾವಣೆ
ಶ್ರೀಮಾ ಹಿಲ್ಸ್ ವಸತಿ ಬಡಾವಣೆಯು ಬಹುವಿನ್ಯಾಸ ನಕ್ಷೆಯ ಬಡಾವಣೆಯಾಗಿ ರೂಪುಗೊಂಡಿದೆ. ಪುತ್ತೂರು ನಗರ ಯೋಜನಾ ಪ್ರಾಧಿಕಾರದಿಂದ ಮಾನ್ಯತೆ ಹಾಗೂ ಪುತ್ತೂರು ನಗರಸಭೆಯು ಬಡಾವಣೆಗೆ ಪರವಾನಿಗೆ ನೀಡಿದೆ. ನಗರದ ಕೊಂಬೆಟ್ಟಿನಲ್ಲಿರುವ ಯು.ಆರ್. ಪ್ರಾಪರ್ಟಿಸ್ ಸಂಸ್ಥೆಯು ವಿನ್ಯಾಸ ಹಾಗೂ ಸಲಹೆಯನ್ನು ತಜ್ಞ ಇಂಜಿನಿಯರ್‌ಗಳ ಸಹಕಾರದೊಂದಿಗೆ ಮಾಡಿದೆ. ಬಡಾವಣೆಯೊಳಗೆ ಬೀದಿ ದೀಪ ವ್ಯವಸ್ಥೆ, ಸ್ವತಂತ್ರ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದು, ಅತ್ಯಂತ ಆಕರ್ಷಣೀಯವಾಗಿ ಬಡಾವಣೆ ರೂಪುಗೊಂಡಿದೆ.
ಕನಸಿನ ಮನೆಗೆ ಸಾಕಾರ
ಪ್ರತಿಯೊಬ್ಬರಿಗೂ ನಿವೃತ್ತ ಜೀವನದಲ್ಲಿ ಅಥವಾ ಸೇವಾ ಜೀವನದಲ್ಲಿ ಸ್ವಂತ ಮನೆಯನ್ನು ಕಟ್ಟಬೇಕೆಂಬ ಸಹಜ ಅಭಿಲಾಷೆ ಇದೆ. ಅಂತವರ ಅಭಿಲಾಷೆಗೆ ಪೂರಕವಾಗಿ ಅವರ ಕನಸಿನ ಮನೆ ಸಾಕಾರಗೊಳ್ಳಲು ವಸತಿ ಬಡಾವಣೆ ಶ್ರೀಮಾಸಿಟಿ ಸಕಲ ಸೌಲಭ್ಯಗಳನ್ನು ಹೊಂದಿದೆ. ಪುತ್ತೂರು ನಗರದ ಮಟ್ಟಿಗೆ ವಸತಿ ಬಡಾವಣೆಗಳ ಸಾಲಿನಲ್ಲಿ ಶ್ರೀಮಾಹಿಲ್ಸ್ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
ಯು.ಆರ್. ಪ್ರಾಪರ್ಟಿಸ್
8 ವರ್ಷಗಳ ಹಿಂದೆ ಆರಂಭಗೊಂಡ ಯು.ಆರ್. ಪ್ರಾಪರ್ಟಿಸ್ ಸಂಸ್ಥೆಯು ಈಗಾಗಲೇ ಗ್ರಾಹಕ ಪ್ರೀತಿಯೊಂದಿಗೆ ಮನೆ ಮಾತಾಗಿದೆ. ಶ್ರೀಮಾಹಿಲ್ಸ್ ಬಡಾವಣೆಯಂತೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ಇನ್ನಷ್ಟು ಬಡಾವಣೆಗಳಿಗೆ ವಿನ್ಯಾಸ ಮತ್ತು ನಿರ್ಮಾಣ ಸಲಹೆಗಳನ್ನು ಸಿದ್ಧಪಡಿಸಿದೆ. ಜೊತೆಗೆ ಪುತ್ತೂರಿನಲ್ಲಿ ಬಹುಮಹಡಿಗಳ ವಸತಿ ಸಮುಚ್ಚಯ ನಿರ್ಮಾಣ ಯೋಜನೆಗಳಿಗೂ ಯು.ಆರ್. ಪ್ರಾಪರ್ಟಿಸ್ ವಿನ್ಯಾಸ ಮತ್ತು ನಿರ್ಮಾಣ ಸಲಹೆಗಳನ್ನು ಸಿದ್ಧಗೊಳಿಸಿದೆ.
ದ. 31 ಸಂಜೆ ಉದ್ಘಾಟನೆ
ದ. 31 ರಂದು ಸಂಜೆ 5 ಗಂಟೆಗೆ ನೂತನ ವಸತಿ ಬಡಾವಣೆ ಶ್ರೀಮಾ ಹಿಲ್ಸ್ ಉದ್ಘಾಟನೆಗೊಳ್ಳಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದಾರೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಹಾಗೂ ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಭಾಗವಹಿಸಲಿದ್ದಾರೆ.
ಬೆದ್ರಾಳದಲ್ಲಿ ಟೌನ್ಶಿಪ್ ಮಾದರಿಯ ʻಶ್ರೀಮಾ ಥೀಮ್ಪಾರ್ಕ್ʼ ವಸತಿ ನಿವೇಶನ
ಯು.ಆರ್. ಪ್ರಾಪರ್ಟೀಸ್ನ ಮತ್ತೊಂದು ಕೊಡುಗೆ ಎಂಬಂತೆ ಪುತ್ತೂರಿನ ಬೆದ್ರಾಳದಲ್ಲಿ 12 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಟೌನ್ಶಿಪ್ ಮಾದರಿಯ ವಸತಿ ಬಡಾವಣೆಯು ನಿರ್ಮಾಣಗೊಳ್ಳುತ್ತಿದೆ. ಇದೊಂದು ಹೊಸ ಮಾದರಿಯ ನಿವೇಶನವಾಗಿದ್ದು, ಪುತ್ತೂರಿಗೆ ಈ ರೀತಿಯ ಮೊದಲ ಬಡಾವಣೆಯನ್ನು ಯು. ಆರ್. ಪ್ರಾಪರ್ಟೀಸ್ ಕೊಡುಗೆಯಾಗಿ ಕಲ್ಪಿಸುತ್ತಿದೆ. ಒಂದು ಸಣ್ಣ ನಗರದಲ್ಲಿ ಏನೆಲ್ಲಾ ವ್ಯವಸ್ಥೆ, ಸವಲತ್ತುಗಳು ಇರಬೇಕೋ ಅದೆಲ್ಲವೂ ಈ ಬಡಾವಣೆಯಲ್ಲಿ ದೊರೆಯಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಜೋಡಿಸಿಕೊಂಡ ವಸತಿ ನಿವೇಶನ ಆಗಲಿದೆ. ಈಜು ಕೊಳ, ವಾಕಿಂಗ್ ಪಾಥ್, ಮಕ್ಕಳ ಉದ್ಯಾನವನ, ಮಕ್ಕಳ ಆಟದ ಕೇಂದ್ರ (children play centre), ಅತ್ಯಾಧುನಿಕ ಜೀಮ್, ಯೋಗ ಕೇಂದ್ರ, ಒಳಗೊಂಡಿದೆ. ವಸತಿ ಸಮುಚ್ಚಗಳಿಗೆ ಸೂಕ್ತವಾದ ಪ್ರದೇಶವಾಗಿದೆ. ಈಗಾಗಲೇ ಬುಕ್ಕಿಂಗ್ ಪ್ರಾರಂಭವಾಗಿದೆ. ಟೌನ್ ಶಿಪ್ ಆಗಿರುವುದರಿಂದ ಭಾರಿ ಬೇಡಿಕೆಯೂ ಇದೆ. ಪುತ್ತೂರು ನಗರಸಭೆಯ ಪರಿಧಿಯ ಒಳಗಡೆ ಇದ್ದರೂ ಪ್ರಕೃತಿಯ ಮಧ್ಯದಲ್ಲಿರುವುದರಿಂದ ಹಳ್ಳಿಯಿಂದ ಪೇಟೆಗೆ ಆಗಮಿಸುವವರಿಗೆ ಉತ್ತಮ ಅವಕಾಶ ಕಲ್ಪಿಸಿದೆ. ಇದರ ಬುಕ್ಕಿಂಗ್ಗಾಗಿ 9986201830 ಸಂಪರ್ಕಿಸಬಹುದಾಗಿದೆ.
ʻಶ್ರೀಮಾ ನೆಸ್ಟ್ʼ ನೊಂದಿಗೆ ಮಂಗಳೂರಿಗೆ ವಿಸ್ತಾರ
ಯು.ಆರ್. ಪ್ರಾಪರ್ಟೀಸ್ ತನ್ನ ನಿರ್ಮಾಣ ಕಾರ್ಯ ವ್ಯಾಪ್ತಿಯನ್ನು ಪುತ್ತೂರಿನಿಂದ ಮಂಗಳೂರಿಗೆ ವಿಸ್ತರಿಸಿದೆ. ಅದರ ಪ್ರತಿಫಲವಾಗಿ ಮಂಗಳೂರಿನ ಎಕ್ಕೂರಿನಲ್ಲಿ ʻಶ್ರೀಮಾ ನೆಸ್ಟ್ʼ ಅಪಾರ್ಟ್‌ಮೆಂಟ್ ನಿರ್ಮಾಣಗೊಳ್ಳಲಿದೆ.