ಪುತ್ತೂರು: ಕೊಳ್ತಿಗೆ ಗ್ರಾಮದ ಮಣಿಕ್ಕಾರ ಪಾಲ್ತಾಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ 5ನೇ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವ ಡಿ.28 ಮತ್ತು ಡಿ.29ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಡಿ.28ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ ,ಮಹಾಗಣಪತಿ ಹೋಮ,ಪಂಚವಿಂಶತಿ ಕಲಶಪೂಜೆ ,ನಾಗ ಸಾನಿಧ್ಯದಲ್ಲಿ ತಂಬಿಲ ಸೇವೆ ,ದೈವ ಸಾನಿಧ್ಯದಲ್ಲಿ ತಂಬಿಲ ಸೇವೆ ,ಮಧ್ಯಾಹ್ನ ಶ್ರೀ ದೇವರಿಗೆ ಸಾನಿಧ್ಯ ಕಲಶಾಭಿಷೇಕ ,ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ರಕ್ತೇಶ್ವರಿ ದೈವದ ಭಂಡಾರ ತೆಗೆದು ಶ್ರೀ ರಕ್ತೇಶ್ವರಿ ದೈವದ ನೇಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಕೃಷ್ಣ ನೆಟ್ಟಾರು ಬಳಗದಿಂದ ಭಕ್ತಿ ಭಾವ ಹಾಗೂ ಮಧುರ ಗೀತೆಗಳ ಗಾನ ಸಂಭ್ರಮ ನಡೆಯಿತು. ಡಿ.29ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮ , ಮಹಿಷಂತಾಯ ದೈವದ ನೇಮ ,ಮಧ್ಯಾಹ್ನ ಹುಲಿ ಭೂತ ದೈವದ ನೇಮ ,ಸಂಜೆ ಪಂಜುರ್ಲಿ ದೈವದ ನೇಮ ,ಗುಳಿಗ ದೈವದ ನೇಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎಂ.ಗೋಪಾಲಕೃಷ್ಣ ಶ್ಯಾನುಭೋಗ್ ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಾಲ್ತಾಡು ಪಠೇಲ್ ನಾರಾಯಣ ರೈ ,ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಪಾಲ್ತಾಡು ವಿನೋದ್ ರೈ ,ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಲಾಸ್ ರೈ ಪಾಲ್ತಾಡು, ಲಕ್ಷ್ಮೀನಾರಾಯಣ ಶ್ಯಾನುಭೋಗ್ ಮಣಿಕ್ಕಾರ, ಶ್ರೀ ಹರಿಕೃಷ್ಣ ಎಸ್.ಎನ್,ರವಿಪ್ರಸಾದ್ ಆಳ್ವ ಪಿ.,ಶ್ರೀನಿವಾಸ ಕುಂಜತ್ತಾಯ,ಮೀನ ಆಳ್ವ ಪಿ.,ವಿನಯ ಎಸ್.ಪಿ.ರೈ ,ಸೀತಾರಾಮ ಎಸ್. ಹಾಗೂ ಪಾಲ್ತಾಡು,ಮಣಿಕ್ಕಾರ, ನಡುಮನೆ ,ನಳೀಲು ಕುಟುಂಬಸ್ಥರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.