ಬನ್ನೂರು: ಪಾದಚಾರಿ ಮಹಿಳೆಯ ಕತ್ತಿನ ಚಿನ್ನದ ಸರಕ್ಕೆ ಕೈ ಹಾಕಿದ ಸ್ಕೂಟರ್ ಸವಾರ

0

ಪುತ್ತೂರು: ಸ್ಕೂಟರ್‌ವೊಂದರಲ್ಲಿ ಬಂದಾತ ಪಾದಚಾರಿ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿ ಕಸಿಯುವಲ್ಲಿ ವಿಫಲ ಯತ್ನ ನಡೆಸಿದ ಘಟನೆ ಡಿ.28ರ ಸಂಜೆ ಬನ್ನೂರು ಗ್ರಾಮದ ಸೇಡಿಯಾಪು – ಕಜೆ ರಸ್ತೆಯಲ್ಲಿ ನಡೆದ ಘಟನೆ ಗ್ರಾಮಾಸ್ಥರ ಮಾಹಿತಿಯಂತೆ ತಿಳಿದು ಬಂದಿದೆ.
ಬನ್ನೂರು ಗ್ರಾಮದ ಸೇಡಿಯಾಪು ಕಜೆ ಅಂಗನವಾಡಿಯ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷೆ ಮಮತಾ ಎಂಬವರು ಡಿ.28ರಂದು ಸಂಜೆ ಸೇಡಿಯಾಪು ಕಜೆ ರಸ್ತೆಯಾಗಿ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ ನಿರ್ಜನ ಪ್ರದೇಶವೊಂದಲ್ಲಿ ಹಿಂದಿನಿಂದ ಬಂದ ಸ್ಕೂಟರ್ ಸವಾರ ಏಕಾಏಕಿ ಮಮತಾ ಅವರ ಕತ್ತಿಗೆ ಕೈ ಹಾಕಿ ಚಿನ್ನದ ಸರ ಎಳೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಮಮತಾ ಅವರು ಕಿರುಚಾಡಿದಾಗ ಸ್ಕೂಟರ್ ಸವಾರ ಪರಾರಿಯಾಗಿದ್ದಾನೆ. ಘಟನೆ ಕುರಿತು ಮಹಿಳೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ತಕ್ಷಣಕ್ಕೆ ಯಾವುದೇ ಕ್ರಮಕೈಗೊಳ್ಳಲದೆ ಡಿ.29ರಂದು ಸಂಜೆ ಘಟನಾ ಸ್ಥಳಕ್ಕೆ ಬಂದಿರುವುದಾಗಿ ಆರೋಪ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here