ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

0

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇವರು ನಡೆಸಿದ ಡ್ರಾಯಿಂಗ್‌ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ ಬಂದಿರುತ್ತದೆ. ಶಾಲೆಯ ಒಟ್ಟು 47 ವಿದ್ಯಾರ್ಥಿಗಳು ಭಾಗವಹಿಸಿ ತೇರ್ಗಡೆ ಹೊಂದಿದ್ದಾರೆ. ಹೈಯರ್ ವಿಭಾಗದಲ್ಲಿಒಟ್ಟು 29 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 28 ವಿದ್ಯಾರ್ಥಿಗಳು ಅತ್ಯುತ್ತಮ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ, ಒಬ್ಬ ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಲೋವರ್ ವಿಭಾಗದಲ್ಲಿಒಟ್ಟು 18 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 10 ವಿದ್ಯಾರ್ಥಿಗಳು ಅತ್ಯುತ್ತಮ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ, 8 ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಮತ್ತು ರಂಗಪ್ಪ ಕಲಾದಗಿ ತರಬೇತಿ ನೀಡಿದ್ದಾರೆ.
ಹೈಯರ್‌ಗ್ರೇಡ್ ಪರೀಕ್ಷೆಯಲ್ಲಿ ಗಗನ, ಪ್ರಜ್ಞಾ ನಿಡ್ವಣ್ಣಾಯ, ಪೂಜಾ, ನೇಹಾ, ಭುವಿ, ಬಿಂದುಶ್ರೀ, ದೀಕ್ಷಿತಾ, ಆಕಾಶ್, ಜಸ್ವಂತ್, ಪವನ್‌ಕುಮಾರ್, ಧನ್ಯ, ಲೋಚನಾ, ದುರ್ಗಾಪ್ರಸಾದ್, ಪ್ರಜ್ಞಾ ಟಿ, ಶಾರ್ವರಿ, ನಿಶಾಲ್ ಕೃಷ್ಣ, ಸುಶಾ, ಮನ್ವಿತ್‌ಎನ್, ಯಜ್ಞಎನ್, ಸಿಂಧುಜ, ಮನ್ವಿತಾ, ಶೃಜನ್ ಜೆ ರೈ, ಹಸ್ಮಿತ್, ಪ್ರಣವ್ಯ, ಸ್ಕಂದ ಬಳಕ್ಕುರಾಯ, ಗೌತಮ್, ಮನ್ವಿತ್ ಎಸ್, ಕೀರ್ತನ್ ಕುಲಾಲ್, ರಿತೇಶ್ ನಾಯಕ್, ಲೋವರ್‌ಗ್ರೇಡ್ ಪರೀಕ್ಷೆಯಲ್ಲಿ ತೃಷಾ ಎ, ತನ್ವಿತಾ, ಸ್ವೀಕೃತಿ, ಕೃತಿ, ಸುಶಾನಿ, ಅನುಷಾ ಬಿ. ಎಸ್, ಧನುಷ್‌ಡಿ.ಜಿ, ಚರಿತ್, ಕಿಶನ್, ಕವನ್, ಕುಶಿತಾ ಉತ್ತೀರ್ಣರಾಗಿರುತ್ತಾರೆ.

LEAVE A REPLY

Please enter your comment!
Please enter your name here