ಪುತ್ತೂರು: ರಹ್ಮಾನಿಯಾ ಜುಮಾ ಮಸ್ಜಿದ್ ಮುಕ್ವೆ ಇಲ್ಲಿ ನೂತನ ಮದ್ರಸ ಕಟ್ಟಡ ನಿರ್ಮಾಣದ ಅಂಗವಾಗಿ ಮೂರು ದಿವಸಗಳ ಧಾರ್ಮಿಕ ಮತ ಪ್ರಭಾಷಣ ಏರ್ಪಡಿಸಲಾಗಿದ್ದು ಅದರ ಉದ್ಘಾಟನೆ ಡಿ.29ರಂದು ನಡೆಯಿತು.
ಉದ್ಘಾಟಿಸಿದ ಸಯ್ಯದ್ ಎನ್ಪಿಎಂ ಶರಫುದ್ದೀನ್ ತಂಙಳ್ ಕುನ್ನುಂಗೈ ಮಾತನಾಡಿ ಮದ್ರಸ ಎನ್ನುವುದು ಎಳೆವಯಲ್ಲಿಯೇ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವ ಕೇಂದ್ರವಾಗಿದ್ದು ಅಂತಹ ಮದ್ರಸಗಳಿಗೆ ಸಹಾಯ ಮಾಡಲು ಯಾರೂ ಹಿಂದೇಟು ಹಾಕಬಾರದು, ಮದ್ರಸ ನಾಡಿನ ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವೂ ಆಗಿದೆ ಎಂದು ಅವರು ಹೇಳಿದರು. ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮದ್ರಸ ಕಟ್ಟಡಕ್ಕೆ ಸಾಧ್ಯ ಇರುವವರು ಆರ್ಥಿಕವಾಗಿ ಸಹಕಾರ ನೀಡಬೇಕು, ಶಾರೀರಿಕವಾಗಿ ಮತ್ತು ಮಾನಸಿಕವಾಗಿಯೂ ಇದಕ್ಕೆ ಎಲ್ಲರೂ ನೆರವು ನೀಡಬೇಕು ಎಂದು ಅವರು ಹೇಳಿದರು.
ಮದ್ರಸಕ್ಕೆ ಸೌಕರ್ಯಗಳನ್ನು ಒದಗಿಸಿಕೊಡುವುದು ನಮ್ಮ ಬಾಧ್ಯತೆ-ಉಸ್ಮಾನ್ ಫೈಝಿ
ದುವಾ ನೆರವೇರಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನ್ ಫೈಝಿ ತೋಡಾರು ಮಾತನಾಡಿ ಧಾರ್ಮಿಕ ಶಿಕ್ಷಣ ಇಲ್ಲಿ ನೆಲೆ ನಿಲ್ಲುವುದು ಅತೀ ಅಗತ್ಯವಾಗಿದ್ದು ನಾಡಿನ ಧಾರ್ಮಿಕ ವಿದ್ಯಾಕೇಂದ್ರವಾಗಿರುವ ಮದ್ರಸಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡುವುದು ನಮ್ಮೆಲ್ಲರ ಭಾಧ್ಯತೆಯಾಗಿದೆ ಎಂದು ಹೇಳಿದರು.
ಲೌಕಿಕ ವ್ಯಾಮೋಹಕ್ಕೆ ಬಲಿಯಾಗದಿರಿ-ಅನ್ವರ್ ಅಲಿ ದಾರಿಮಿ
ಮುಖ್ಯ ಪ್ರಭಾಷಣ ನಡೆಸಿದ ಮುಕ್ವೆ ಆರ್ಜೆಎಂ ಖತೀಬ್ ಅನ್ವರ್ ಅಲಿ ದಾರಿಮಿ ಅಜ್ಜಾವರ ಮಾತನಾಡಿ ಲೌಕಿಕ ವ್ಯಾಮೋಹಗಳನ್ನು ಬದಿಗಿಟ್ಟು ಪಾರತ್ರಿಕ ಲೋಕದ ಬಗ್ಗೆ ಚಿಂತನೆ ನಡೆಸಿ ಜೀವನ ನಡೆಸಿದಾಗ ನಮ್ಮ ಬದುಕು ಪರಿಪೂರ್ಣತೆ ಮತ್ತು ಸಾರ್ಥಕತೆಯಿಂದ ಕೂಡಿರುತ್ತದೆ ಎಂದು ಹೇಳಿದರು. ನಮ್ಮ ಪೂರ್ವಿಕ ಮಹಾನುಭಾವರು ನಮಗೆ ತೋರಿಸಿಕೊಟ್ಟ ಆಚಾರ, ವಿಚಾರಗಳು ಎಂದಿಗೂ ಆದರ್ಶಮಯವಾಗಿದೆ, ಕೆಡುಕನ್ನು ವಿರೊಧಿಸಿ ಒಳಿತನ್ನು ಸಾರುವ ಮೂಲಕ ಉತ್ತಮ ನಾಗರಿಕರಾಗಿ ನಾವು ಈ ಸಮಾಜದಲ್ಲಿ ಬದುಕಬೇಕು ಎಂದು ಅವರು ಹೇಳಿದರು. ಧಾರ್ಮಿಕ ಕೇಂದ್ರಗಳಿಗೆ ಸಹಾಯ ಮಾಡುವುದು ಪುಣ್ಯದ ಕಾರ್ಯ ಎಂದ ಅವರು ಮಸೀದಿ, ಮದ್ರಸಗಳಿಗೆ ಸಹಾಯ ಮಾಡುವವರು ಭಾಗ್ಯವಂತರು ಎಂದು ಹೇಳಿದರು.
ಬೃಹತ್ ನಹ್ತೇ ಶರೀಫ್:
ಮತ ಪ್ರಭಾಷಣ ಕಾರ್ಯಕ್ರಮದ ಬಳಿಕ ಮುಹಮ್ಮದ್ ನಬೀಲ್ ರಝ ಬರ್ಕಾತಿ ಬೆಂಗಳೂರು ಅವರ ನೇತೃತ್ವದಲ್ಲಿ ಬೃಹತ್ ನಹ್ತೇ ಶರೀಫ್ ಕಾರ್ಯಕ್ರಮ ನಡೆಯಿತು. ನೂರಾರು ಮಂದಿ ಕಾರ್ಯಕ್ರಮ ವೀಕ್ಷಿಸಿದರು.
ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಚ್ಐಎಂ ಮುಕ್ವೆ ಮುಅಲ್ಲಿಮರಾದ ಅಬೂ ಉವೈಸ್ ಅಸ್ಲಮಿ, ಎ.ಎಂ ಜಲಾಲುದ್ದೀನ್ ಮೌಲವಿ, ಡಿ.ಕೆ ಝಕರಿಯಾ ಮೌಲವಿ, ಅಶ್ರಫ್ ಮೌಲವಿ, ಪುರುಷರಕಟ್ಟೆ ಎಚ್ಐಎಂ ಸದರ್ ಮುಅಲ್ಲಿಂ ರಿಯಾಝ್ ಫೈಝಿ ಪಟ್ಟೆ, ಮರೀಲ್ ಹನಫಿ ಮಸ್ಜಿದ್ನ ಹರ್ಷದ್ ರಝಾ ಅಮ್ಜದಿ, ಬನ್ನೂರು ಹನಫಿ ಮಸ್ಜಿದ್ನ ವಜಾಹತ್ ರಝ್ವಿ, ವೀರಮಂಗಲ ಮಸೀದಿ ಖತೀಬ್ ರಿಯಾಝ್ ದಾರಿಮಿ, ಪಾಪೆತ್ತಡ್ಕ ಮಸೀದಿ ಖತೀಬ್ ಯೂಸುಫ್ ಫೈಝಿ, ಸದರ್ ಅಬ್ದುರ್ರಹ್ಮಾನ್ ಮೌಲವಿ, ಅಜ್ಜಿಕಟ್ಟೆ ಮಸೀದಿ ಅಧ್ಯಕ್ಷ ಇಸಾಕ್ ದಾರಿಮಿ, ಮುಕ್ವೆ ಮಸೀದಿ ಪ್ರ.ಕಾರ್ಯದರ್ಶಿ ಮಹಮ್ಮದ್ ಕುಂಞಿ ಹಾಜಿ ದರ್ಖಾಸ್, ಉದ್ಯಮಿಗಳಾದ ರಫೀಕ್ ಅರ್ತಿಕೆರೆ, ಉಮ್ಮರ್ ಪಟ್ಟೆ, ಸಾಲ್ಮರ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಕೂರ್ನಡ್ಕ ಮಸೀದಿ ಅಧ್ಯಕ್ಷ ಕೆ.ಎಚ್ ಖಾಸಿಂ, ಅಲ್ ಹಬೀಬ್ ಹನಫಿ ಮಸ್ಜಿದ್ನ ಅಧ್ಯಕ್ಷ ರಝಾಕ್ ಖಾನ್, ಮುಕ್ವೆ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ಲ ಹಾಜಿ ಸರಳಿಕಟ್ಟೆ, ಮಾಜಿ ಉಪಾಧ್ಯಕ್ಷರಾದ ಹಸೈನಾರ್ ಹಾಜಿ ಕುದ್ಕೋಳಿ, ಮೊಯ್ದು ಕುಂಞಿ ಹಾಜಿ ಅಳಕೆ, ಪುರುಷರಕಟ್ಟೆ ಎಚ್ಐಎಂ ಅಧ್ಯಕ್ಷ ಇಬ್ರಾಹಿಂ ಗನಿ, ಕರೀಂ ಸಾಹೇಬ್ ನೆರಿಗೇರಿ, ಸಂಟ್ಯಾರ್ ಮಸೀದಿ ಅಧ್ಯಕ್ಷ ಫಾರೂಕ್, ಅಬೂಬಕ್ಕರ್ ಮುಲಾರ್, ನರಿಮೊಗರು ಗ್ರಾ.ಪಂ ಸದಸ್ಯ ಶಾಫಿ ಮುಕ್ವೆ ಮತ್ತಿತರರು ಉಪಸ್ಥಿತರಿದ್ದರು.
ಮುಕ್ವೆ ಎಚ್.ಐ.ಎಂ ಸದರ್ ಮುಅಲ್ಲಿಂ ಉಮರ್ ಯಮಾನಿ ಸ್ವಾಗತಿಸಿದರು. ಹನೀಫ್ ಸವಣೂರು ಕಾರ್ಯಕ್ರಮ ನಿರೂಪಿಸಿದರು.