ಜ.06: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ಗೊನೆ ಮುಹೂರ್ತ

0

ಪುತ್ತೂರು: ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಶ್ರೀ ವಿಷ್ಣು ಸೇವಾ ಸಮಿತಿ ಕುರಿಯ ಇದರ ಸಹಕಾರದೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.6ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ದ.30ರಂದು ಗೊನೆ ಮುಹೂರ್ತ ನಡೆಯಿತು.

ಉಳ್ಳಾಲ ಆನಂದ ನಾಯ್ಕ್‌ರವರ ತೋಟದಿಂದ ವೈಧಿಕ ವಿಧಿ ವಿಧಾನಗಳೊಂದಿಗೆ ಗೊನೆ ಕಡಿಯಲಾಯಿತು. ಅರ್ಚಕರಾದ ಗುರುರಾಜ್ ಮಡಕುಲ್ಲಾಯ ಕೈಂತಿಲ ಹಾಗೂ ವಿಷ್ಣುಮೂರ್ತಿ ಬಡೆಕಿಲ್ಲಾಯ ಗೊನೆ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ಪವಿತ್ರಪಾಣಿ ವೆಂಕಟ್ರಮಣ ನಕ್ಷತ್ರಿತ್ತಾಯ ಕೊಡ್ಲಾರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಧು ನರಿಯೂರು, ಕಾರ್ಯದರ್ಶಿ ಶಶಿಧರ ಕಿನ್ನಿಮಜಲು, ಸದಸ್ಯರಾದ ನೋಣಾಲು ಜೈರಾಜ್ ಭಂಡಾರಿ, ಜಯಶೀಲ ರೈ ಏಳ್ನಾಡುಗುತ್ತು ಕುರಿಯ, ಧನರಾಜ್ ಆಲೇಖಿ, ಜಯರಾಮ ರೈ ಅಡ್ಯೆತ್ತಿಮಾರು, ಅರುಣಾ ಸಿ.ರೈ, ಅರುಣಾ ಜಿ.ರೈಬಳ್ಳಮಜಲುಗುತ್ತು, ಶ್ರೀ ವಿಷ್ಣು ಸೇವಾ ಸಮತಿಯ ಅಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಉಪಾಧ್ಯಕ್ಷ ದಿನೇಶ್ ಪೂಜಾರಿ ಬೊಳಂತಿಮಾರು, ವಿಶ್ವನಾಥ ರೈ ನಿರಾಲ, ಜತೆ ಕಾರ್ಯದರ್ಶಿ ಶ್ರೀಕೃಷ್ಣ ಬೊಳಂತಿಮಾರು, ಗೌರವ ಸಲಹೆಗಾರರಾದ ಬೂಡಿಯಾರ್ ರಾಧಾಕೃಷ್ಣ ರೈ, ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಚಂದ್ರಹಾಸ ರೈ ತುಂಬೆದಕೋಡಿ, ಬಾಲಚಂದ್ರ ರೈ ಕುರಿಯ ಏಳ್ನಾಡುಗುತ್ತು, ಸತೀಶ್ ರೈ ಡಿಂಬ್ರಿ, ಸಂದ್ಯಾ ನರಿಯೂರು, ಕು.ದಿಯಾ, ಸುಂದರ ಬೊಳಂತ್ತಿಮಾರ್, ಚಿದಾನಂದ, ಜಯಪ್ರಕಾಶ್, ಪುಷ್ಪರಾಜ್, ಗಣೇಶ್ ರೈ ಬೂಡಿಯಾರ್, ಗಣೇಶ್ ಗೌಡ ಕೈಂತಿಲ, ಪ್ರಕಾಶ್ ರೈ, ಗಣೇಶ್ ರೈ ಬಳ್ಳಮಜಲು, ರಧಾಕೃಷ್ಣ ರೈ ಒಸಮಾರು, ಪ್ರೀತಂ ಗೌಡ, ವಿನ್ಯಾಸ್, ವಾಸುದೇವ ಹೊಳ್ಳ ಸೇರಿದಂತೆ ಹಲವು ಮಂದಿ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here