ನಾಳೆ(ಡಿ.31): ಅಂತರ್ ರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ ಎ.ಎಂ ನೌಶಾದ್ ಬಾಖವಿ ಮುಕ್ವೆಗೆ

0

ಪುತ್ತೂರು: ರಹ್ಮಾನಿಯಾ ಜುಮಾ ಮಸ್ಜಿದ್ ಮುಕ್ವೆ ಇಲ್ಲಿ ನೂತನ ಮದ್ರಸ ಕಟ್ಟಡ ನಿರ್ಮಾಣದ ಅಂಗವಾಗಿ 3 ದಿವಸಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದ ಸಮಾರೋಪ ದಿನವಾದ ಡಿ.31ರಂದು ಅಂತರ್ರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ ಎ.ಎಂ ನೌಶಾದ್ ಬಾಖವಿ ತಿರುವನಂತಪುರಂ, ಕೇರಳರವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಗ್ಯಾಲಕ್ಸಿ ಚಿಕ್ಕಾಲ ಅವರು ಅಧ್ಯಕ್ಷತೆ ವಹಿಸಲಿದ್ದು, ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಭಾಷಣ ನೆಸಲಿದ್ದಾರೆ. ಮುಕ್ವೆ ಖತೀಬ್ ಅನ್ವರ್ ಅಲಿ ದಾರಿಮಿ ಅಜ್ಜಾವರ ದುವಾ ನೆರವೇರಿಸಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here