ದ.ಕ ತೆಂಗು ರೈತ ಉತ್ಪಾದಕ ಸಂಸ್ಥೆಯ”ಕಲ್ಪಸಮೃದ್ದಿ” ವಿಶೇಷ ಠೇವಣಿ ಯೋಜನೆ

0

ಪುತ್ತೂರು : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಕರಾವಳಿ ಕರ್ನಾಟಕದಲ್ಲಿ ಅಕ್ಷರಶಃ ಸಾಕಾರಗೊಳಿಸುತ್ತಿರುವ ದ.ಕ ತೆಂಗು ರೈತ ಉತ್ಪಾದಕ ಸಂಸ್ಥೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಆದಾಯ ಕಲ್ಪಿಸುವ ಉದ್ದೇಶದಿಂದ “ಕಲ್ಪಸಮೃದ್ದಿ” ಎಂಬ ವಿಶೇಷ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ 3 ವರ್ಷದ ಠೇವಣಿದಾರರಿಗೆ ಉತ್ತಮ ಆದಾಯವನ್ನು ತಂದು ಕೊಡುತ್ತಿದ್ದು, ಠೇವಣಿಗೆ ವಾರ್ಷಿಕ ಶೇಕಡ 12ರ ಬಡ್ಡಿ ದರದಂತೆ 3 ವರ್ಷದ ಅವಧಿಗೆ ಶೇ.40.5ರಷ್ಟು ಆದಾಯವನ್ನು ನೀಡುತ್ತಿದೆ. 1 ಲಕ್ಷ ರೂ. ಠೇವಣಿಗೆ 3 ವರ್ಷಕ್ಕೆ 40,492 ರೂ. ಆದಾಯ ಗಳಿಸಬಹುದಾಗಿದೆ.

ಕಲ್ಪಸಮೃದ್ದಿ ಯೋಜನೆಯ ಫಲಾನುಭವಿಗಳಾಗಲು 200 ಜನರಿಗೆ ಮಾತ್ರ ಅವಕಾಶವಿದ್ದು, ಕಲ್ಪಸಮೃದ್ದಿ ಯೋಜನೆಯ ಸ್ಥಿರ ಠೇವಣಿಗಳಿಗೆ ಜ.30 ಕೊನೆಯ ದಿನವಾಗಿರುತ್ತದೆ. 14 ಸಾವಿರಕ್ಕಿಂತಲೂ ಅಧಿಕ ನೋಂದಾಯಿತ ಸದಸ್ಯರ ಬಲ ಹೊಂದಿರುವ ಈ ಸಂಸ್ಥೆಯೂ 12 ಲಕ್ಷಕ್ಕಿಂತ ಅಧಿಕ ತೆಂಗಿನ ಮರಗಳು , 54 ಸಾವಿರ ಎಕರೆ ವಿಸ್ತೀರ್ಣ ಭೂ ಪ್ರದೇಶವನ್ನು ತನ್ನ ಕಾರ್ಯ ಚಟುವಟಿಕೆಯ ಭಾಗವಾಗಿಸಿರುವ ಸಂಸ್ಥೆಯು ಈ ಮೂಲಕ ರೈತರ ಹಾಗೂ ಬಳಕದಾರರ ಹಿತ ಕಾಪಾಡಲು ಕಾರ್ಯ ಮಗ್ನವಾಗಿದೆ. ಅಲ್ಲದೇ ಪಂಚಕಲ್ಪ ಎಂಬ ವಿಶಿಷ್ಟ ಕಾರ್ಯಯೋಜನೆ ಹೊಂದಿದ್ದು, ಕಲ್ಪವೃಕ್ಷ, ಕಲ್ಪರಸ, ಕಲ್ಪ ಸಮೃದ್ದಿ, ಕಲ್ಪಸಂಪರ್ಕ ಮತ್ತು ಕಲ್ಪಸೇವಾ ಯೋಜನೆಗಳ ಮೂಲಕ ತೆಂಗು ಮೌಲ್ಯ ವರ್ಧನೆ, ಸ್ವಉದ್ಯೋಗ, ಮಹಿಳಾ ಸಬಲೀಕರಣ, ಕೃಷಿ ತಂತ್ರಜ್ಞಾನಗಳ ಮೂಲಕ ರೈತರ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ. ಕಲ್ಪಸಮೃದ್ದಿ ಯೋಜನೆಗೆ ಸಂಬಂಧಿಸಿದಂತೆ ಪೂರಕ ದಾಖಲೆಯನ್ನು ಒದಗಿಸಿ ಅರ್ಜಿ ಸಲ್ಲಿಸಿ ಕರಾವಳಿಯ ವಿವಿಧೆಡೆ ಇರುವ 11 ಶಾಖೆಗಳಲ್ಲಿ ಅರ್ಜಿ ಸಲ್ಲಿಸ ಬಹುದಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚೇತನ್‌ ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಸಂಸ್ಥೆಯ ವೆಬ್‌ ಸೈಟ್‌ www.coconutfarmers.in ಅಥವಾ ದೂರವಾಣಿ ಸಂಖ್ಯೆ 8105487763 ನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here