ಬೆಳ್ಳಿಪಾಡಿ ಶಾಲೆಯಲ್ಲಿ ಸಂಭ್ರಮಿಸಿದ ವಾರ್ಷಿಕೋತ್ಸವ

0

ಪುತ್ತೂರು: ಬೆಳ್ಳಿಪ್ಪಾಡಿ ದ ಕ ಜಿ ಪಂ ಉ ಹಿ ಪ್ರಾ ಶಾಲೆಯ ವಾರ್ಷಿಕೋತ್ಸವ “ಪ್ರತಿಭಾ ಸಿಂಚನ” ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷೆ ಭವ್ಯ ವಿ ಶೆಟ್ಟಿ ಶಾಲಾ ಧ್ವಜಾರೋಹಣ ಮಾಡಿ ಚಾಲನೆ ನೀಡಿದರು.


ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ನೂತನ ಶೌಚಾಲಯದ ಉದ್ಘಾಟನೆಯನ್ನು‌ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ, ಹಾಲಿ ಸದಸ್ಯ ರಾಮಚಂದ್ರ ಪೂಜಾರಿ, ಸದಸ್ಯರಾದ ರಾಮಣ್ಣಗೌಡ, ಉಷಾ ಲಕ್ಷ್ಮಣ ಪೂಜಾರಿ, ಮೋಹಿನಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣಗೌಡ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮೋನಪ್ಪ ಗೌಡ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಎಸ್ ಡಿ ಎಂ ಸಿ ಅಧ್ಯಕ್ಷ ಭವ್ಯ ವಿ ಶೆಟ್ಟಿ, ಉಪಾಧ್ಯಕ್ಷ ರವಿ, ಸರ್ವ ಸದಸ್ಯರು ಎಸ್ ಡಿ ಎಂ ಸಿ, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಬಾಲಪ್ಪ ಗೌಡ ಮಳುವೇಲು, ಊರಿನ ಗಣ್ಯರಾದ ಕೇಶವ ಭಂಡಾರಿ ಕೈಪ, ಪದ್ಮನಾಭ ಶೆಟ್ಟಿ ರೆಂಜಾಜೆ, ಅಂಗನವಾಡಿ ಕಾರ್ಯಕರ್ತೆ ಮಲ್ಲಿಕಾ ಎಸ್ ಆಳ್ವ, ಹಾಗೂ ಪೋಷಕರು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿ ಸುಂದರ ಗೌಡ, ಎಸ್ ಡಿ ಎಮ್ ಸಿ ಅಧ್ಯಕ್ಷೆ ಭವ್ಯ ವಿ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣಗೌಡ ಕಂಬಳದಡ್ಡ, ಕಂಬಳದ ಹರಿಕಾರ ಕೇಶವ ಭಂಡಾರಿ ಕೈಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಬೆಳ್ಳಿಪ್ಪಾಡಿ ಇವರನ್ನು ಗೌರವಿಸಲಾಯಿತು.

2023-24ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮೋಕ್ಷಿತಾ.ಪಿ, ಹರ್ಷಿತ್. ಪಿ, ಭವಿಷ್ಯ, ಸುಜನ್ . ಡಿ, ರಕ್ಷಿತಾ ವಿ ಶೆಟ್ಟಿ ಹಾಗೂ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಾದ ಪೂಜಾ. ಟಿ , ಭವಿತಾ.ಡಿ, ಧನ್ಯ ವಿ ಹೆಚ್ ಅಭಿನಂದಿಸಲಾಯಿತು.ಅತಿಥಿ ಶಿಕ್ಷಕಿ ರಮ್ಯ ಹಾಗೂ ಅಡುಗೆ ಸಿಬ್ಬಂದಿ ವರ್ಗದವರ ಗೌರವಿಸಲಾಯಿತು. ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ನಾಯ್ಕ ಇವರಿಗೆ ಗೌರವ ಸನ್ಮಾನವನ್ನು ವೇದಿಕೆಯಲ್ಲಿನ ಗಣ್ಯರು ನೆರವೇರಿಸಿದರು.

ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರು, ಹಿರಿಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಎಸ್‌ ಡಿ ಎಂ ಸಿ ಅಧ್ಯಕ್ಷೆ ಭವ್ಯ ವಿ ಶೆಟ್ಟಿ ಸ್ವಾಗತಿಸಿ,ಮುಖ್ಯ ಶಿಕ್ಷಕಿ ಯಶೋದಾ ಎನ್ ಎಂ ವರದಿ ವಾಚಿಸಿದರು. ಸುಮಿತ್ರ ಎಸ್ ವಂದಿಸಿ, ಜಯಂತಿ ಎಂ ನಿರೂಪಿಸಿದರು. ಸಲೀನಾ ಎಂ,ಜೋಯ್ಲಿನ್ ರೊಡ್ರಿಗಸ್, ಮಲ್ಲಿಕಾರ್ಜುನ ಹಡಗಲಿ ಹಾಗೂ ವೈಶಾಲಿ ನಿರ್ವಹಿಸಿದರು.

ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣಗೌಡ , ರಿಕ್ಷಾ ಚಾಲಕ ಚಂದ್ರ, ಪ್ರಕಾಶ್ ನಾಯಕ್, ಕೇಶವ ಗೌಡ ದೇವಸ್ಯ, ಕಂಪ್ಯೂಟರ್ ಟೆಕ್ನಿಷಿಯನ್ ಅನಿಶ್ ನೆಕ್ಕಿಲಾಡಿ, ಕುಸುಮ ಜತ್ತಿಬೆಟ್ಟು ಎಸ್ ಡಿ ಎಂ ಸಿ ಸದಸ್ಯೆ, ಅಕ್ಷಯ್ ಜೆ ಶೆಟ್ಟಿ ಚಿಗುರು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಎಸ್ ಡಿ ಎಮ್ ಸಿ ಸರ್ವ ಸದಸ್ಯರು, ಪೋಷಕರು, ಅಡುಗೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here