





ವಿಟ್ಲ: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿಯಲ್ಲಿ ಮಾಸಿಕ ಉಳಿತಾಯ ಯೋಜನೆಯ ಡ್ರಾ ನಡೆಯಿತು.
ಸ್ಥಳದಲ್ಲಿ ಹಾಜರಿದ್ದ ಹತ್ತು ಮಂದಿ ಗ್ರಾಹಕರಿಗೆ ಆಕರ್ಷಕ ಬಹುಮಾನ ಹಾಗೂ ಯೋಜನೆಯ ಸದಸ್ಯರಲ್ಲಿ ಎರಡು ಅದೃಷ್ಟವಂತರಿಗೆ ಬಂಪರ್ ಬಹುಮಾನವನ್ನು ನೀಡಲಾಯಿತು.ಬಂಪರ್ ಬಹುಮಾನದ ವಿಜೇತರಾಗಿ ಹಮೀದ್ ರೆಂಜ ಹಾಗೂ ಫಾತಿಮಾ ಗೋಳಿಕಟ್ಟೆ ರವರು ಆಯ್ಕೆಯಾದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುತ್ತೂರು ಐದನೇಯ ಹೆಚ್ಚುವರಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಶ್ರಫ್ ಕೋಡಿಂಬಾಡಿ ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಅಝೀಝ್ ಕೆಮ್ಮಾಯಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಗೋಪಾಲ್, ಹಮೀದ್, ಅಫ್ರೀದ್ ಸಹಕರಿಸಿದರು.














