ಕೊಂಡಾಡಿಕೊಪ್ಪ ಶಾಲಾ ಗೇಟ್ ಉದ್ಘಾಟನೆ

0

ಪುತ್ತೂರು :ಗ್ರಾಮ ಪಂಚಾಯತ್ ಆಲಂಕಾರು ಇದರ ವತಿಯಿಂದ ಕೊಂಡಾಡಿಕೊಪ್ಪ ಶಾಲೆಗೆ ಒದಗಿಸಿದ ಶಾಲಾ ಗೇಟ್ ಇದರ ಉದ್ಘಾಟನೆಯನ್ನು ಸುಳ್ಯದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಶೀಲ ಕೊಂಡಾಡಿ, ಸದಸ್ಯರಾದ ಸದಾನಂದ ಆಚಾರ್ಯ, ವಾರಿಜಾ, ಶ್ವೇತಕುಮಾರ್, ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಪ್ರದೀಪ್ ರೈ ಮನವಳಿಕೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮೋಹನ ಕಮಿತ್ತಿಲು, ಉಪಾಧ್ಯಕ್ಷೆ ಲತಾ, ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾದ ಪರಮೇಶ್ವರ ಗೌಡ, ನಿರ್ದೇಶಕ ಹರೀಶ್ ಗೌಡ ಏಂತಡ್ಕ, ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ದಿವಾಕರ ಕುಂಬಾರ, ಶಾಲಾಭಿವೃದ್ಧಿ ಸಮಿತಿ ಪೂರ್ವಾಧ್ಯಕ್ಷರಾದ ಶೀನಪ್ಪ ಕುಂಬಾರ ಮೇದಪ್ಪ ಕುಂಬಾರ, ವೀರೇಂದ್ರ ಗೌಡ ಏಂತಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್ ಕೊಂಡಾಡಿಕೊಪ್ಪ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ನೋಣಯ್ಯ ಗೌಡ, ವಾಸಪ್ಪ ಕುಂಬಾರ, ಗಣೇಶ ಪೂಜಾರಿ ಕೊಂಡಾಡಿ, ನಿತ್ಯಾನಂದ ಕುಂಬಾರ ನಾಡ್ತಿಲ, ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ, ಆದಿಶಕ್ತಿ ಕಾಂಪ್ಲೆಕ್ಸ್ ಶರವೂರು ಇದರ ಮಾಲೀಕರಾದ ಹುಕ್ರಪ್ಪ ಮುಗೇರ ಕಮಿತ್ತಿಲು,ಶಾಲಾ ಶಿಕ್ಷಕರಾದ ನಳಿನಾಕ್ಷಿ ಮತ್ತು ಸುನೀತಾ ಉಪಸ್ಥಿತರಿದ್ದರು.ಶಾಲಾ ಮುಖ್ಯಗುರು ಜಯಂತ್ ವೈ ಸ್ವಾಗತಿಸಿದರು.

LEAVE A REPLY

Please enter your comment!
Please enter your name here