ಪುತ್ತೂರು: 34ನೇ ನೆಕ್ಕಿಲಾಡಿ ಸ.ಹಿ.ಪ್ರಾ. ಶಾಲೆಯಲ್ಲಿ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದ.30ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಆರ್. ರೈ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೀವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ದರ್ಬೆ, ಗ್ರಾ.ಪಂ. ಸದಸ್ಯರಾದ ವಿಜಯಕುಮಾರ್, ಸಪ್ನ ಜೀವನ್, ವೇದಾವತಿ, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಬಿ.ಆರ್.ಪಿ. ರತ್ನಕುಮಾರಿ, ಉಪ್ಪಿನಂಗಡಿ ಆಯುರ್ ಕೇರ್ ಆಸ್ಪತ್ರೆಯ ವೈದ್ಯಾ ಡಾ. ಸುಪ್ರೀತ್ ಲೋಬೋ, ದಾನಿ ಎ.ಜತೀಂದ್ರ ಶೆಟ್ಟಿ, ಸಮಾಜ ಸೇವಕ ಯುನಿಕ್ ಅಬ್ದುಲ್ ರೆಹಮಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್ ಎಂ.ಜಿ., ನಿವೃತ್ತ ಮುಖ್ಯ ಗುರು ರಂಜಿನಿ ಮತ್ತು ಸಿ.ಆರ್.ಪಿ. ಕಸ್ತೂರಿ ಭಾಗವಹಿಸಿದ್ದರು. ಪ್ರಭಾರ ಮುಖ್ಯಗುರು ಕಾವೇರಿ ಸಿ. ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಸಹಶಿಕ್ಷಕಿ ಪದ್ಮ ದತ್ತಿನಿಧಿ ಮಕ್ಕಳ ವಿವರ ವಾಚಿಸಿದರು. ಕಲಿಕೆಯಲ್ಲಿ ಬಹುಮಾನ ಪಡೆದ ಮಕ್ಕಳ ವಿವರವನ್ನು ಅತಿಥಿ ಶಿಕ್ಷಕಿ ಉಷಾ ಕುಮಾರಿ ವಾಚಿಸಿದರು. ಒಳಾಂಗಣ ಹಾಗೂ ಹೊರಾಂಗಣ ಆಟಗಳಲ್ಲಿ ವಿಜೇತರಾದ ಮಕ್ಕಳ ಪಟ್ಟಿಯನ್ನು ಗೌರವ ಶಿಕ್ಷಕಿ ಅಶ್ವಿನಿ ಹಾಗೂ ಅತಿಥಿ ಶಿಕ್ಷಕಿ ಗೀತಾ ವಾಚಿಸಿದರು.
ಜ್ಞಾನದೀಪ ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ ಸಹ ಶಿಕ್ಷಕಿ ಪದ್ಮ ವಂದಿಸಿದರು. ಅಂಗನವಾಡಿ ಪುಟಾಣಿಗಳ ಮತ್ತು ಶಾಲಾ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.