ಶತಮಾನೋತ್ಸವ ಸಂಭ್ರಮದ ಕೈಕಾರ ಶಾಲಾ ವಾರ್ಷಿಕೋತ್ಸವ

0

ಪುತ್ತೂರು: ಶತಮಾನೋತ್ಸವದ ಸಂಭ್ರಮದಲ್ಲಿರುವ ಒಳಮೊಗ್ರು ಗ್ರಾಮದ ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ದ.30ರಂದು ಶಾಲಾ ವಠಾರದಲ್ಲಿ ಜರಗಿತು.
ಬೆಳಿಗ್ಗೆ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಧ್ವಜಾರೋಹಣ  ನೆರವೇರಿಸಿದರು. ಗೀತಾ ಡಿ. ಪ್ರಸಾದ್‌ ರೈ ಪಿಂಗಾರ ಕೈಕಾರ ಹಾಗೂ ಒಳಮೊಗ್ರು ಗ್ರಾ.ಪಂ. ಸದಸ್ಯೆ ನಳಿನಾಕ್ಷಿ ರಾಮಮೂಲೆ ಅತಿಥಿಗಳಾಗಿ ಪಾಲ್ಗೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಎಸ್‌. ಆರ್.‌, ಇಸಿಒ ಹರಿಪ್ರಸಾದ್‌ ರವರು ಶಾಲೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ  ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ದೀಪ ಪ್ರಜ್ವಲಿಸಿದರು. ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸಭಾಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯರಾದ ರೇಖಾ ಯತೀಶ್‌ ಬಿಜತ್ರೆ, ನಿಮಿತಾ ನವೀನ್‌ ರೈ, ಕೆಯ್ಯೂರು ಕೆ.ಪಿ.ಎಸ್‌.ನ ಕಾರ್ಯಾಧ್ಯಕ್ಷ ಎ.ಕೆ. ಜಯರಾಮ ರೈ, ಉದ್ಯಮಿ ಸಹಜ್‌ ಜೆ. ರೈ ಬಳ್ಳಜ್ಜ, ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎಚ್‌. ಶ್ರೀಧರ ರೈ, ಶಾಲಾ ಶತಮಾನೋತ್ಸವ ಸಮಿತಿ ಸಂಚಾಲಕ ಸೀತಾರಾಮ ರೈ ಕೈಕಾರ, ಗ್ರಾ.ಪಂ. ಮಾಜಿ ಸದಸ್ಯ ಶಶಿಕಿರಣ್‌ ರೈ ಮೊಡಪ್ಪಾಡಿ, ಎಸ್‌ಡಿಎಂಸಿ ಅಧ್ಯಕ್ಷೆ ಶೀಲಾವತಿ ರೈ, ಶಾರದಾ ಶೆಟ್ಟಿ ಪನಡ್ಕ, ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.
ವೇದಿಕೆಯಲ್ಲಿ ಮುಖ್ಯಗುರು ರಾಮಣ್ಣ ರೈ, ಎಲ್‌ಕೆಜಿ ಯುಕೆಜಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜಿತ್‌ ರೈ, ವಿದ್ಯಾರ್ಥಿ ನಾಯಕ ಚಿನ್ಮಯಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ರಾಮಣ್ಣ ರೈ ವರದಿ ವಾಚಿಸಿದರು. ಶಾರದಾ ಶೆಟ್ಟಿ ಪನಡ್ಕ ಸ್ವಾಗತಿಸಿ, ಶಿಕ್ಷಕಿ ಭಾರತಿ ಕೆ. ವಂದಿಸಿದರು. ಹರೀಶ್‌ ರೈ ಮತ್ತು ಶಿಕ್ಷಕಿ ಜಯಶ್ರೀ ಕೆ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ರಾಜೇಶ್ವರಿ ಮತ್ತು ಭವ್ಯ ಹಾಗೂ ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಸಹಕರಿಸಿದರು.
ಸನ್ಮಾನ: ಏಕಲವ್ಯ ಪ್ರಶಸ್ತಿ ಪುರಸ್ಕೃತ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್‌ ರೈ ಕೈಕಾರ ಮತ್ತು ಶಾಲೆಯಲ್ಲಿ ೧೩ ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಕಾರ್ಕಳದ ಕೊಂಕಾಣರಬೆಟ್ಟು ಕಬ್ಬಿನಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ದೀಪಾರವರಿಗೆ ಸನ್ಮಾನ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ ಹಾಗೂ ಶ್ರೀ ದುರ್ಗಾ ರಂಗ ಕಲಾ ಚಾವಡಿ ಪುತ್ತೂರು ಇವರಿಂದ ʻಕುಸಾಲ್ದ ನಿಧಿ ಒಕ್ಕುನಾತ್‌ ತಿಕ್ಕುಜಿʼ ಯಕ್ಷ ಹಾಸ್ಯ ಸೌರಭ ನಡೆಯಿತು.

ಸರಕಾರಿ ಶಿಕ್ಷಕರ ನಿಯೋಜನೆಯಾಗಬೇಕು
ಕೈಕಾರ ಶಾಲೆಗೆ ನೂರು ವರ್ಷಗಳು ದಾಟಿದ್ದು, ಆ ಹಿನ್ನೆಲೆಯಲ್ಲಿ ಊರವರು ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಈಗಾಗಲೇ ಶತಮಾನೋತ್ಸವ ಸಮಿತಿ ರಚಿಸಿಕೊಂಡು ಸುಸಜ್ಜಿತ ಕ್ರೀಡಾಂಗಣ, ರಂಗಮಂದಿರ, ʻಶತಮಾನೋತ್ಸವ ಸಭಾಭವನʼ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮುಂದಡಿಯಿಡಲಾಗಿದೆ. ಶಾಲೆಯಲ್ಲಿ ಪ್ರಸ್ತುತ ಓರ್ವರೇ ಅಧ್ಯಾಪಕರಿದ್ದು, ಶಾಲೆಯ ಹಿತದೃಷ್ಟಿಯಿಂದ ಇನ್ನೋರ್ವ ಸರಕಾರಿ ಶಿಕ್ಷಕರನ್ನು ಎಪ್ರಿಲ್‌ ಮುಂಚಿತವಾಗಿ ನಿಯೋಜಿಸಬೇಕು ಎಂದು ಇದೇ ವೇಳೆ ಶತಮಾನೋತ್ಸವ ಸಮಿತಿಯವರು ಆಗ್ರಹಿಸಿದರು.

ನನ್ನ ಸಂಪೂರ್ಣ ಸಹಕಾರ
ಶತಮಾನದ ಶಾಲೆಯನ್ನು ಉಳಿಸಬೇಕು. ಸಂಘಟಿತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ. ನನ್ನ ಸಂಪೂರ್ಣ ಸಹಕಾರವಿದೆ.  
– ಎ.ಕೆ. ಜಯರಾಮ ರೈ
ಹಿರಿಯ ವಿದ್ಯಾರ್ಥಿ

ಒಂದನೇ ತರಗತಿ ಆರಂಭಕ್ಕೆ ಸಹಕಾರ
ಈಗಾಗಲೇ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ನಡೆಯುತ್ತಿದೆ. ಮುಂದಿನ ಹಂತದಲ್ಲಿ ಒಂದನೇ ತರಗತಿ ನಡೆಸಲು ಇಲಾಖೆ ಕಡೆಯಿಂದ ಆಗಬೇಕಾದ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ.
– ಲೋಕೇಶ್‌ ಎಸ್‌.ಆರ್‌.
ಕ್ಷೇತ್ರ ಶಿಕ್ಷಣಾಧಿಕಾರಿಗಳು

LEAVE A REPLY

Please enter your comment!
Please enter your name here