ಜ.4ರಿಂದ 7ರ ತನಕ ಸಾಲ್ಮರ ಸೈಯ್ಯದ್‌ಮಲೆ ಜುಮ್ಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ

0

ಪುತ್ತೂರು: ಅಬ್ದುಲ್ ಸಲಾಂ ತಂಙಳ್ ಅವರ ಹೆಸರಿನಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಸಾಲ್ಮರ ಸೈಯ್ಯದ್ ಮಲೆಯಲ್ಲಿ ನಡೆಯುವ ಉರೂಸ್ ಕಾರ್ಯಕ್ರಮವು ಈ ಭಾರಿ ಜ.4ರಿಂದ 7ರ ತನಕ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಬಾಯಾರು(ಪುತ್ತು ಹಾಜಿ) ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೈಯ್ಯದ್‌ಮಲೆ ಖತೀಬರಾಗಿರುವ ಅಲ್ ಹಾಜ್ ಉಮ್ಮರ್ ದಾರಿಮಿ ಅವರ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮ ನಡೆಯಲಿದ್ದು, ಸಾಲ್ಮರ ಅಸ್ಸಯದ್ ಎಸ್.ಎಮ್ ಮುಹಮ್ಮದ್ ತಂಙಳ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜ.4ರಂದು ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಉದ್ಘಾಟಿಸಲಿದ್ದಾರೆ. ಅಶ್ರಫ್ ರಹ್ಮಾನಿ ಚೌಕಿ ಕೇರಳ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಜ.5ಕ್ಕೆ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಃ ನಡೆಸಲಿದ್ದಾರೆ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ.6ಕ್ಕೆ ಅಸ್ಸಯಿದ್ ಅಬೂಬಕ್ಕರ್ ತಂಙಳ್ ಕೆಮ್ಮಾಯಿ ದುವಾಃ ನಡೆಸಲಿದ್ದಾರೆ. ಮುಹಮ್ಮದ್ ಶರೀಫ್ ತಂಙಳ್ ಇರ್ಫಾನಿ ಅಲ್ ಮಖ್‌ದೂಮಿ ಕಣ್ಣೂರು ಅವರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಜ.7ರಂದು ಸಮಾರೋಪ ಸಮಾರಂಭದಲ್ಲಿ ಅಸ್ಸಯಿದ್ ಎನ್‌ಪಿಎಂ ಶರಫುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ದುವಾಃ ನಡೆಸಲಿದ್ದಾರೆ. ಅಬ್ದುಲ್ ಗಫೂರ್ ಮೌಲವಿ ಕೀಚೇರಿ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು 10ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ದೊಡ್ಡ ಧಾರ್ಮಿಕ ಕೇಂದ್ರ:
ಸುಮಾರು 55 ವರ್ಷ ಇತಿಹಾಸ ಇರುವ ಸಾಲ್ಮರ ಸೈಯ್ಯದ್‌ಮಲೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ಬಹು ದೊಡ್ಡ ಧಾರ್ಮಿಕ ಕೇಂದ್ರ. ಹಲವಾರು ಮಂದಿ ಜಾತಿ ಧರ್ಮ ಬೇಧ ಭಾವವಿಲ್ಲದೆ ಪ್ರಾರ್ಥಿಸಿ ತಮ್ಮ ಕಷ್ಟ ಪರಿಹರಿಸುತ್ತಾರೆ. ಅಂತಹ ದೊಡ್ಡ ಕಾರುಣಿಕ ಸ್ಥಳವಾಗಿದೆ. ಇಲ್ಲಿ ಅನ್ಸಾರುದ್ದೀನ್ ಯತೀಮ್‌ಖಾನದ ಮೂಲಕ ಇಸ್ಲಾಂ ಅನಾಥ ಆಶ್ರಮವಿದೆ ಎಂದು ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಉರೂಸ್ ಸಮಿತಿ ಕೋಶಾಧಿಕಾರಿ ಮೊಹಮ್ಮದ್ ಕೋಲ್ಪೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಾತಿಷಾ ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here