ರೂಟ್ ಕೆನಾಲ್ ಮೂಲಕ ನೈಸರ್ಗಿಕ ಹಲ್ಲಿನ ರಕ್ಷಣೆ | ಸ್ಮೈಲ್ ಡಿಸೈನಿಂಗ್ ಟ್ರೀಟ್ಮೆಂಟ್
ಪುತ್ತೂರು : ಮಾಸ್ಟರ್ ಪ್ಲಾನರಿ ಮುಂಭಾಗದಲ್ಲಿರುವ ನಿಲ್ಕಮಲ್ ಸಂಕೀರ್ಣ ದಲ್ಲಿ ಜ.3 ರಂದು ” ನಗು” ದಂತ ಚಿಕಿತ್ಸಾಲಯ ಧಾರ್ಮಿಕ ಪೂಜಾ ಕೈಂಕರ್ಯದೊಂದಿಗೆ ಶುಭಾರಂಭ ಗೊಂಡಿತು.
ಅರ್ಚಕ ಕೃಪಾಕರ ಭಟ್ ಧಾರ್ಮಿಕ ಕಾರ್ಯ ನೆರವೇರಿಸಿದರು. ಆ ಬಳಿಕ ಚಿಕಿತ್ಸಾಲಯದ ಉದ್ಘಾಟನೆಯನ್ನು , ಮಂಗಳೂರು ದೇರಳಕಟ್ಟೆ ಎ .ಬಿ. ಶೆಟ್ಟಿ ದಂತ ವೈದ್ಯಕೀಯ ಮಹಾವಿದ್ಯಾಲಯ ಇದರ ನಿವೃತ್ತ ಪ್ರಾಂಶುಪಾಲ ಹಾಗೂ ಡೀನ್ ಡಾ.ರಾಜೇಂದ್ರ ಪ್ರಸಾದ್ ದೀಪ ಪ್ರಜ್ವಲನೆ ನೆರವೇರಿಸಿ, ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು.
ಈ ವೇಳೆ ಡಾ. ಅನುಜ್ ಶಂಕರ್ ಹೆತ್ತವರು ಜಯಶ್ರೀ ತಿರುಮಲೇಶ್ ಭಟ್ ದಂಪತಿ ಪಡಾರು , ತಿರುಮಲೇಶ್ ಭಟ್ ಸಹೋದರ ಮರಿಭಟ್ ಪಡಾರು , ಸಹನಾ ಸುರೇಶ್ಚಂದ್ರ ದಂಪತಿ ಕಲ್ಮಡ್ಕ , ಪರಿಕಲ್ಪನಾ ಅರ್ಕಿಟೆಕ್ಟ್ ಮಾಲೀಕ ರಾಮ್ ಪ್ರಕಾಶ್ , ಡಾ. ಗೌರೀಶ್ ಮತ್ತು ಪವಿತ್ರ ಗೌರೀಶ್ ಮಂಗಳೂರು ,ಸೋದರ ಮಾವ ಸುಬ್ರಹ್ಮಣ್ಯ ಭಟ್ , ಕೃಷಿಕ ಗಣಪತಿ ಭಟ್ , ಡಾ.ಪ್ರವೀಣ್ ಪಾರೆ , ಡಾ.ಮಹೇಶ್ ಕುಮಾರ್ ವೈ ,ಡಾ.ಅನುಷಾ , ಡಾ.ಶಾಯರಿ ಕೊಳತ್ತಾಯ , ಕಾವೇರಿ ಎಂಟರ್ ಪ್ರೈಸಸ್ ಮಾಲೀಕ ಶ್ರೀಕಾಂತ್ ಕೊಳತ್ತಾಯ ,ಗೋವಿಂದ ಭಟ್ ದಂಪತಿ ಅಬ್ರಾಜೆ ಹಾಗೂ ಮನೋಹರ್ ಸಂಪತ್ತಿಲ ಸಹಿತ ಹಲವರು ಅತಿಥಿಗಳು ಹಾಜರಿದ್ದರು.
ನೂತನ ಚಿಕಿತ್ಸಾಲಯದಲ್ಲಿ ದಂತ ಬೇರು ಚಿಕಿತ್ಸೆಯಲ್ಲಿ ಪರಿಣಿತರಾಗಿರುವ ವೈದ್ಯ ಡಾ. ಅನುಜ್ ಶಂಕರ್ ರೋಗಿಯ ನೈಸರ್ಗಿಕ ಹಲ್ಲನ್ನು ಉಳಿಸುವಲ್ಲಿ ನಿಪುಣರಾಗಿದ್ದು , ರೂಟ್ ಕೆನಾಲ್ ಟ್ರೀಟ್ಮೆಂಟ್ , ಸ್ಮೈಲ್ ಡಿಸೈನಿಂಗ್ , ದಂತ ಪರೀಕ್ಷೆ ಮತ್ತು ಎಕ್ಸರೇ ಸೇವೆ , ಹಲ್ಲಿನ ಗುಳಿ ತುಂಬುವುದು ,ಹಲ್ಲು ಕೀಳುವುದು , ವಕ್ರದಂತ ಚಿಕಿತ್ಸೆ (ಕ್ಲಿಪ್ ಹಾಕುವುದು) ,ಕೃತಕ ಹಲ್ಲು ಜೋಡಣೆ , ಹಲ್ಲುಗಳನ್ನು ಬಿಳಿಯಾಗಿಸುವುದು , ಹಲ್ಲು ಸ್ವಚ್ಛಗೊಳಿಸುವುದು , ಹಲ್ಲುಗಳಿಗೆ ಕ್ಯಾಪ್ ಮಾಡುವುದು ಹಾಗೂ ಹಲ್ಲಿನ ವಸಡು ಚಿಕಿತ್ಸೆ , ಹಲ್ಲಿನ ಇಂಪ್ಲಾಂಟ್ ಚಿಕಿತ್ಸೆ ಸೇವೆಯೆಲ್ಲಾವೂ ಶುಕ್ರವಾರ ಹೊರತುಪಡಿಸಿ , ವಾರದ ಎಲ್ಲಾ ದಿನ ಬೆಳಗ್ಗೆ 10 ರಿಂದ ರಾತ್ರಿ 7 ತನಕ ಲಭ್ಯವಿದೆಯೆಂದು ತಿಳಿಸಿ , ಸಹಕಾರ ಕೋರಿದರು.