ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ಕಾಮಧೇನು ಗೋಶಾಲೆಯಲ್ಲಿ ಸ್ಲರಿ ಸಂಗ್ರಹವಾಗಿದ್ದು, ಅಗತ್ಯವುಳ್ಳವರು ದೇವಳದನ್ನು ಸಂಪರ್ಕಿಸುವಂತೆ ದೇವಳದ ಪ್ರಕಟಣೆ ತಿಳಿಸಿದೆ.
ಗೋಶಾಲೆಯಲ್ಲಿ ಜಾನುವಾರಗಳ ಗಂಜಲ, ಸೆಗಣಿ ಇತ್ಯಾದಿಗಳಿಂದ ಸ್ಲೆರಿ ಸಂಗ್ರಹವಾಗಿದೆ. ಹೊಲಗದ್ದೆ, ತೋಟ, ತರಕಾರಿ ಗಿಡಗಳಿಗೆ ಯೋಗ್ಯ ಗೊಬ್ಬರವಾಗಿರುವ ಸ್ಲೆರಿಯನ್ನು ಟ್ಯಾಂಕರ್‌ನಲ್ಲಿ ಸ್ಥಳಕ್ಕೆ ಸರಬರಾಜು ಮಾಡಿಕೊಡಲಾಗುವುದು. ಟ್ಯಾಂಕರ್ 8ಸಾವಿರ ಲೀಟರ್ ಸ್ಲರಿ ಮತ್ತು ಸರಬಾರಜು ವೆಚ್ಚ ಸಹಿತ ರೂ.9000 ಸಾವಿರವನ್ನು ದೇವಳದ ಕಚೇರಿಯಲ್ಲಿ ಪಾವತಿ ಮಾಡಬೇಕು. ತೋಟದ ಗಿಡಗಳ ಬುಡಕ್ಕೆ ಸ್ಲರಿ ಬಿಡಲು 2 ಲೆಂತ್ ಪೈಪ್ ಕೂಡಾ ಇದೆ. ಅಗತ್ಯವುಳ್ಳವರು ಮೊ ಸಂಖ್ಯೆ,9449030872 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.